ಗೃಹ, ವಾಹನ ಸಾಲ ಬಡ್ಡಿ ದರ ಏರಿಕೆ – ಸತತ 4ನೇ ಬಾರಿಗೆ RBI Repo Rate ಏರಿಕೆ

Public TV
1 Min Read

ನವದೆಹಲಿ: ಸತತ ನಾಲ್ಕನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರೆಪೊ ದರವನ್ನು(Repo Rate) 50 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಹೆಚ್ಚಿಸಿದೆ. ಈ ನಿರ್ಧಾರದಿಂದ ರೆಪೋ ದರ ಶೇ. 5.9ಕ್ಕೆ ಏರಿಕೆಯಾದಂತಾಗಿದೆ.

ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು (MPC) ಮೂರು ದಿನಗಳ ಸಭೆ ನಡೆಸಿ ರೆಪೋ ದರವನ್ನು ಏರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಆಗಸ್ಟ್‌ನಲ್ಲಿ 50 ಬೇಸಿಸ್ ಪಾಯಿಂಟ್‌ ಏರಿಕೆ ಮಾಡಿದ್ದರಿಂದ ರೆಪೋ ದರ ಶೇ.5.4ಕ್ಕೆ ಏರಿತ್ತು.

ರೆಪೋ ದರ ಏರಿಕೆಯಾದ ಕಾರಣ ಗೃಹ, ವಾಹನ ಸಾಲದ ಬಡ್ಡಿ ದರ ಏರಿಕೆಯಾಗಲಿದೆ. ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ(GDP) ಶೇ.7.2 ರಷ್ಟು ಬೆಳವಣಿಗೆಯಾಗಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಆದರೆ ಈಗ ಶೇ.7 ರಷ್ಟು ಅಭಿವೃದ್ಧಿಯಾಗಬಹುದು ಎಂದು ಅಂದಾಜಿಸಿದೆ.  ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ನಷ್ಟ

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌(US Federal Reserve ) ಸತತ ಮೂರನೇ ಬಡ್ಡಿದರದ ಹೆಚ್ಚಳ ಮಾಡಿದ ಬೆನ್ನಲ್ಲೇ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಮಿತಿಮೀರಿದ ಹಣದುಬ್ಬರವನ್ನು(Inflation) ನಿಯಂತ್ರಿಸಲು ಕಳೆದ ವಾರ ಫೆಡರಲ್‌ ರಿಸರ್ವ್‌ ಶೇ. 0.75ರಷ್ಟು ಬಡ್ಡಿದರವನ್ನು ಹೆಚ್ಚಳ ಮಾಡಿತ್ತು.

ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *