West Bengal: ಬಿಜೆಪಿಯಿಂದ ಕಣಕ್ಕಿಳಿದಿದ್ದ ಆರ್‌ಜಿ ಕರ್‌ ಅತ್ಯಾಚಾರ ಸಂತ್ರಸ್ತೆ ತಾಯಿಗೆ ಜಯ

1 Min Read

ಕೋಲ್ಕತ್ತಾ: ಆರ್‌ಜಿ ಕರ್‌ ಅತ್ಯಾಚಾರ ಸಂತ್ರಸ್ತೆ (RG Kar Victim) ತಾಯಿ ಹಾಗೂ ಬಿಜೆಪಿ (BJP) ಅಭ್ಯರ್ಥಿ ರತ್ನಾ ದೇಬನಾಥ್‌ (Ratna Debnath) ಅವರು ಬಂಗಾಳದ (West Bengal) ಪಾಣಿಹಟಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಉತ್ತರ 24 ಪರಗಣದಲ್ಲಿರುವ ಪಾಣಿಹಟಿ ವಿಧಾನಸಭಾ ಸ್ಥಾನವು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅತ್ಯಂತ ಗಮನ ಸೆಳೆದ ಕ್ಷೇತ್ರಗಳಲ್ಲಿ ಒಂದಾಗಿತ್ತು. ಈ ಕ್ಷೇತ್ರದಲ್ಲಿ ಐದು ಬಾರಿ ಹಾಲಿ ಶಾಸಕರಾಗಿರುವ ತೀರ್ಥಂಕರ ಘೋಷ್ ಅವರ ಪುತ್ರ ಟಿಎಂಸಿ ಅಭ್ಯರ್ಥಿ ತೀರ್ಥಂಕರ ಘೋಷ್ ವಿರುದ್ಧ ರತ್ನಾ ದೇಬನಾಥ್‌ ಜಯಗಳಿಸಿದ್ದಾರೆ. ಇದನ್ನೂ ಓದಿ: ಗಂಗೋತ್ರಿಯಿಂದ ಗಂಗಾ ಸಾಗರದ ತನಕ ಕಮಲ ಅರಳಿದೆ, ಬಂಗಾಳ ಭಯಮುಕ್ತವಾಗಿದೆ: ಮೋದಿ

ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಘಟನೆಗಳ ಕುರಿತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರತ್ನಾ ದೇಬನಾಥ್‌ ಚುನಾವಣಾ ಕಣಕ್ಕೆ ಇಳಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಆಡಳಿತ ವಿಚಾರವಾಗಿ ವಿರೋಧಾಭಾಸ ಎದುರಿಸುತ್ತಿತ್ತು. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಯುವ ವೈದ್ಯೆ ಹತ್ಯೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ರಾತ್ರಿ 8:45ರ ವರೆಗೆ ಬಿಜೆಪಿ 208, ಟಿಎಂಸಿ 79, ಕಾಂಗ್ರೆಸ್‌ 2, ಎಲ್‌ಇಎಫ್‌ಟಿ 2 ಹಾಗೂ ಇತರೆ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿಗೆ ಜಯ ಲಭಿಸಿದೆ. ಇದನ್ನೂ ಓದಿ: ವಾಜಪೇಯಿ ಕನಸು ನನಸು – ಬಿಜೆಪಿ ಆಡಳಿತ ರಾಜ್ಯಗಳ ಸಂಖ್ಯೆ 20ಕ್ಕೆ ಏರಿಕೆ

ಪಶ್ಚಿಮ ಬಂಗಾಳ
ರಾಜಕೀಯ ಕುತೂಹಲದ ಕೇಂದ್ರ ಪಶ್ಚಿಮ ಬಂಗಾಳದ 294 ವಿಧಾನಸಭೆಗಳಿಗೆ ಏ.23 ಮತ್ತು 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಿತು. ಒಟ್ಟು 2,926 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೊದಲ ಹಂತದ ಚುನಾವಣೆಗೆ 152 ಸ್ಥಾನಗಳಲ್ಲಿ 1,487 ಹಾಗೂ ಎರಡನೇ ಹಂತದ ಚುನಾವಣೆಗೆ 142 ಕ್ಷೇತ್ರಗಳಲ್ಲಿ ಒಟ್ಟು 1,448 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಮೊದಲ ಹಂತದಲ್ಲಿ 93.19% ಹಾಗೂ ಎರಡನೇ ಹಂತದಲ್ಲಿ 92.47% ಮತದಾನ ನಡೆಯಿತು. ಈ ರಾಜ್ಯ ಎಸ್‌ಐಆರ್‌ ಬಳಿಕ ಚುನಾವಣೆ ಎದುರಿಸಿದೆ. ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು 148 ಸೀಟ್‌ಗಳ ಬಹುಮತ ಬೇಕಿತ್ತು. ಈ ಬಾರಿ 385 ಮಹಿಳೆಯರು ಸ್ಪರ್ಧಿಸಿದ್ದರು.

ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲ ಪೈಪೋಟಿ ಗೆಲುವಿಗಾಗಿ ಪ್ರಬಲ ಪೈಪೋಟಿ ನಡೆಸಿದ್ದವು. ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ನಿಯೋಜಿಸಿತ್ತು. ಹೀಗಿದ್ದು, ಅಲ್ಲಲ್ಲಿ ಒಂದಷ್ಟು ಗೊಂದಲಗಳಾಗಿವೆ. ಚುನಾವಣೆ ಬಳಿಕವೂ ಬಂಗಾಳದ ದಕ್ಷಿಣ 24 ಪರಗಣಗಳ 15 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಿತು. ಫಾಲ್ಟಾ ಕ್ಷೇತ್ರದ ಎಲ್ಲ 285 ಮತಗಟ್ಟೆಗಳಲ್ಲಿ ಮೇ 21ಕ್ಕೆ ಮರು ಮತದಾನ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಟಿಎಂಸಿ 213, ಬಿಜೆಪಿ 77 ಸ್ಥಾನಗಳನ್ನು ಗೆದ್ದಿದ್ದವು.

ಕಳೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC): 215 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು. ಭಾರತೀಯ ಜನತಾ ಪಕ್ಷ (BJP): 77 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಇತರರು: ರಾಷ್ಟ್ರೀಯ ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು. ಕಾಂಗ್ರೆಸ್ ಮತ್ತು ಎಡರಂಗ: ಈ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

Share This Article