ಜೈಪುರ: ಪಾಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಬಲಗಣ್ಣಿಗೆ ಇಲಿ ಕಚ್ಚಿರುವ ಘಟನೆ ರಾಜಸ್ಥಾನದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ರಾಜಸ್ಥಾನದ ಕೋಟದಲ್ಲಿರುವ ಎಂಬಿಎಸ್ ಆಸ್ಪತ್ರೆಯ ಸ್ಟ್ರೋಕ್ ವಾರ್ಡ್‍ಗೆ ರೂಪಾವತಿ ಬಾಯಿ(55) ದಾಖಲಾಗಿದ್ದರು. ಕಳೆದ 45 ದಿನಗಳಿಂದ ಪಾಶ್ರ್ವವಾಯು ಘಟಕಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಉಪ ಅಧೀಕ್ಷಿಕ ಡಾ. ಸಮೀರ್ ಟೊಂಡನ್ ಪ್ರಕಾರ, ಮಹಿಳೆ ಗುಯಿಲಿನ್ ಬಾರೆ ಸಿಂಡ್ರೋಮ್‍ನಿಂದ ಬಳಲುತ್ತಿದ್ದಾರೆ. ಇದು ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ.
ಆದರೆ ಆಸ್ಪತ್ರೆಯ ವಾರ್ಡ್‍ನಲ್ಲಿ ಕಳೆದ ರಾತ್ರಿ ಇಲಿ ರೂಪಾವತಿ ಬಾಯಿಯ ಬಲಗಣ್ಣಿಗೆ ಕಚ್ಚಿತು. ಈ ಬಗ್ಗೆ ಅಲ್ಲಿನ ವೈದ್ಯರು ಮಾತನಾಡಿ, ಘಟನೆಯ ಕುರಿತು ತನಿಖೆ ನಡೆಸುತ್ತೇವೆ. ನಾವು ಪ್ರತಿ ತಿಂಗಳು ಕೀಟನಾಶಕವನ್ನು ಸಿಂಪಡಿಸುತ್ತೇವೆ. ಅಂತಹದ್ದೇನಾದರೂ ಸಂಭವಿಸಿದರೆ, ಅದರ ಜವಾಬ್ದಾರಿ ಸಿಬ್ಬಂದಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರು ಪೊಲೀಸರ ವಶಕ್ಕೆ
ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಆಗುತ್ತಿರುವುದು ಇದೇ ಮೊದಲಲ್ಲ, ಕಳೆದ ತಿಂಗಳು ತೆಲಂಗಾಣದ ವಾರಂಗಲ್ ಜಿಲ್ಲೆಯ ಸರ್ಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ 47 ವರ್ಷದ ರೋಗಿಗಳನ್ನು ಇಲಿಯೊಂದು ಕಚ್ಚಿತ್ತು. ನಂತರ ಅವರು ಹೈದರಾಬಾದ್‍ನ ನಿಜಾಮ್‍ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು. ಇದನ್ನೂ ಓದಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ