ರಾಜರಥ ಸಿನಿಮಾ ವಿವಾದದ ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ರ‍್ಯಾಪಿಡ್ ರಶ್ಮಿ

Rapid Rashmi Rajaratha F

ಬೆಂಗಳೂರು: ಇತ್ತೀಚೆಗೆ ರಾಜರಥ ಸಿನಿಮಾದ ವಿವಾದವೊಂದು ಅಂತ್ಯವಾಗಿದೆ. ವಿವಾದಕ್ಕೆ ಸಂಬಂಧಿಸಿದಂತೆ ರಾಜರಥ ಸಿನಿಮಾ ನಿರ್ದೇಶಕ ನಿರೂಪ್ ಭಂಡಾರಿ ಮತ್ತು ನಟ ಅನೂಪ್ ಭಂಡಾರಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

ರ‍್ಯಾಪಿಡ್ ರಶ್ಮಿ ನಡೆಸಿದ ಸಂದರ್ಶನದಲ್ಲಿ ನಿರೂಪ್ ಭಂಡಾರಿ, ತಮ್ಮ `ರಾಜರಥ’ ಸಿನಿಮಾ ನೋಡದೇ ಇರುವರು ಕಚಡಾ ನನ್ಮಕ್ಕಳು ಅಂತಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ರು. ಇದರ ಜೊತೆಗೆ ಅವಂತಿಕಾ ಶೆಟ್ಟಿ ಮತ್ತು ನಿರೂಪ್ ಭಂಡಾರಿ ಸಹ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಾರ್ಯಕ್ರಮ ನಿರೂಪಕಿ ರ್ಯಾಪಿಡ್ ರಶ್ಮಿ ರಾಜರಥ ಸಿನಿಮಾದ ಬಗ್ಗೆ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಪೂರ್ಣ ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ರ‍್ಯಾಪಿಡ್ ರಶ್ಮಿ ಹೇಳಿದ್ದು ಹೀಗೆ:
ಎಲ್ಲರಿಗು ನಮಸ್ಕಾರ – ರಾಜರಥ ವಿವಾದದ ಬಗ್ಗೆ ನನ್ನ ಉತ್ತರ ವನ್ನ ಎದುರು ನೋಡ್ತಿರೋರಿಗೆ ನನ್ನ ಆಲೋಚನೆಗಳು ಹೀಗೆ… ಈ ಸಮಯದಲ್ಲಿ ಕೆಲವರು ಏನು ಹೇಳಿದ್ರು ಹೇಳದಿದ್ರೂ ತಪ್ಪನ್ನೇ ಹುಡುಕದೆ natural ಆಗಿದೆ. ನೀವು ಒಬ್ಬ ತಪ್ಪು ಒಪ್ಪುಗಳನ್ನ ಸಮವಾಗಿ ಪರಿಶೀಲಿಸುವ ಪ್ರೇಕ್ಷಕ/ಪ್ರೇಕ್ಷಕಿ ಯಾಗಿ ಓದುವಿರಿ ಅಂತ ಭರವಸೆ ಇದೆ.

ರ‍್ಯಾಪಿಡ್ ರಶ್ಮಿ ಆರ್‍ಜೆ ಆಗಿ, ಈಗ ನಿರೂಪಕಿ, ಗಾಯಕಿ ಮತ್ತು ನಟಿ ಹೀಗೆ ಇಷ್ಟು ವರುಷ ಪ್ರೀತಿ ಕೊಟ್ಟು ನನ್ನ ಬೆಳೆಸಿದ್ದೀರಾ 11 ವರುಷದ ಈ ಕೆರಿಯರ್ ನಲ್ಲಿ ನನ್ನ ಮಾತಿನ ದಾಟಿ, ಹಾಸ್ಯ ಮನೋಭಾವ, ತರಲೆ ಮಾತು, ಬೋಲ್ಡ್ ಆಗಿ ಮಾತಾಡಿದಾಗ ಬೆನ್ನು ತಟ್ಟಿದ್ದೀರಾ.. ಕೆಲವರು ಏನು ಹಿಂಗೇ ಮಾತಾಡ್ತಾರೆ ಅಂತ ಕಣ್ಣು ಬಾಯಿ ಬಿಟ್ಟಿದ್ದೀರಾ.. ಒಬ್ಬರ ಶೈಲಿ ಇಷ್ಟ ಪಡೋದು, ಪಡದೆ ಇರೋದು ಅದಕ್ಕೆ ನೀವು ಸ್ವತಂತ್ರರು. ಪ್ರೇಕ್ಷಕರೇ ಯಾವತ್ತೂ ಬೆಳೆಸೋದು, ಇನ್ನು ಯಾವುದೋ ವಿವಾದ ಆದಾಗ ತಪ್ಪಿದ್ದರೆ ಬೀಳಿಸಿ ಎಚ್ಚರಿಸೋದು. ಇದನ್ನೂ ಓದಿ: ದಯವಿಟ್ಟು ಕ್ಷಮಿಸಿ, ಇನ್ನು ಮುಂದೆ ಹೀಗೆ ಆಗಲ್ಲ: ಅನೂಪ್ ಭಂಡಾರಿ

ಈಗ ರಾಜರಥ ಸಂದರ್ಶನ ನಡೆದ ಘಟನೆ ಎಲ್ಲ ತಿರುವನ್ನು ತೆಗೆದುಕೊಂಡು ಕೆಲವರು ನನ್ನ ಕಡೆ ತಿರುಗಿ ಪ್ರಶ್ನೆ ಕೇಳಿ, ಎಡುವಿದ್ದಿಯ, ಪ್ರಚೋದಿಸಿದ್ದೀಯಾ ತಿದ್ಕೋ ಅಂತ ಕೆಲವು ಕಮೆಂಟ್ ಬರೆದಿದ್ದಾರೆ. ಎಲ್ಲವನ್ನು ಗೌರವಿಸಿ ಕೂಲಂಕುಷವಾಗಿ ಎಲ್ಲ ಆಯಾಮ ದಲ್ಲೂ ನೋಡಿ ತಿದ್ದುಕೊಂಡು ಮುಂದೆ ನಡೀತಾ ನಡೆದ ವಿಚಾರದ ಬಗ್ಗೆ ನನಗಿರುವ ಕೆಲವು ವಿಚಾರಗಳು/ ಪ್ರಶ್ನೆ ಹೀಗಿದೆ.

rajaratha box office collection day 1 nirup bhandari and avanthika shettys film total collection 86 lakhs

ನಿನ್ನೆ ಪೂರಾ ಹರಿದು ಬಂದ ಮೆಸೇಜ್, ಈ ಸಮಯದಲ್ಲಿ ನನಗೆ ನಗಿಸಿದ ಒಂದು ಜೋಕ್.. ಕೆಲವರ ಮೀಮ್ಸ್, ಟ್ರೋಲ್!! – 1 ಲಕ್ಷ ಕೊಟ್ಟು ಕಾರ್ಯಕ್ರಮಕ್ಕೆ ಬರಬೇಕು, ರೊಚ್ಚಿಗೆಬ್ಬಿಸುವ ಪ್ರಶ್ನೆ!! ಇಷ್ಟು ಹಣ ಮೂವಿ ಪ್ರಮೋಶನ್ ಕೊಟ್ಟಿರೋ ಒಬ್ಬರು ಬರಲಿ ಸಾಕ್ಷಿಗೆ.. ಇಲ್ಲದ ಸಲ್ಲದ ಕಸ ಕಡ್ಡಿ ಎಲ್ಲ ಸೇರಿಸೋದೇ ಸಿಕ್ಕಿದ್ದೇ ಚಾನ್ಸ್ ಅಂತಾ?

ವತ್ತಿಗೂ ಕೇಳಿರುವ ಪ್ರಶ್ನೆಯ್ ನನಗೆ ತಪ್ಪನಿಸಿಲ್ಲ, ಕುಣೀಲಾರದವರು ನೆಲ —- ಅಂದ್ರಂತೆ ಕಥೆ ಇದು.

“ಡ್ಯಾಶಿಂಗ್ ಪ್ರಶ್ನೆಯ “ಸೆಗಮಂಟ್ ಕೇಳಿದ ಪ್ರಶ್ನೆ – ರಾಜರಥ ಸಿನಿಮಾ ನೋಡದವರು —– , ಅವರು ಕೊಟ್ಟ ಉತ್ತರ ನನ್ನ ಕಂಟ್ರೋಲ್ ನಲ್ಲಿ ಇರಲಿಲ್ಲ.. ವಿಷಯ ಲಕ್ಷಾಂತರ ಕನ್ನಡ ಪದಗಳಿವೆ ತುಂಬಿಸಲಿಕ್ಕೆ. ಉದಾಹರಣೆ- ಒಳ್ಳೆ ಸಿನಿಮಾ ಮಿಸ್ ಮಾಡಿಕೊಳ್ಳೋರು ,ಬ್ಯುಸಿ ಇರೋರು , ಕನ್ನಡ ಬರದಿದ್ದವರು, ಕನ್ನಡ ಸಿನಿಮಾಗಳನ್ನ ಬೆಳಸದೆ ಇರೋರು ..ಇತ್ಯಾದಿ ಇತ್ಯಾದಿ .. ಆದ ತಪ್ಪಿಗೆ ಅವರು ಅವರ ಸಮರ್ಥನೆ ಕೊಟ್ರು.. ನನ್ನ ಕಡೆಯಿಂದ ಎಡಿಟೆಡ್ ವಿಡಿಯೋ ನಲ್ಲಿ ತಪ್ಪಾಗಿ ಪೊರಟೆರಿ ಗೊಂಡದ್ದು ನಕ್ಕಿದ್ದು ಮತ್ತು ಚಪ್ಪಾಳೆ ಹೊಡೆದದ್ದು ಅದಕ್ಕೆ ಕ್ಷಮಿಸಿ.. ಆ ಸಂಪೂರ್ಣ ವಿಡಿಯೋ ನೋಡಿ ಏನಾಯಿತು ಆ ಫ್ಲೋ ನಲ್ಲಿ ಗೊತ್ತಾಗತ್ತೆ . ನಾನು ಯಾರಿಗೂ ಹಾಗೆ ಉತ್ತರ ಕೊಡಕ್ಕೆ ಪ್ರಚೋದಿಸಿಲ್ಲ, ಅವರವರ ಮಾತಿಗೆ ಅಭಿಪ್ರಾಯಕ್ಕೆ ಅವರೇ ಜವಾಬ್ದಾರರು . ಇನ್ನು ಅದೇ ರೌಂಡ್ ಅಲ್ಲಿ -ರಾಜರಥ ಸಿನಿಮಾ ಫಸ್ಟ್ ಡೇ, ಫಸ್ಟ್ ಶೋ ನೋಡೋರು —— ಅಂತ ಕೇಳಿದಾಗ ಅವರೇ ದೇವತೆ ಗಳು/ ದೇವರುಗಳು ಅಂತ ಅದೇ ಸಂದರ್ಶನದಲ್ಲಿ ಹೇಳಿದ್ದಾರೆ .. ಎರಡನ್ನು ನೀವೇ ನೋಡಿ. ಇಷ್ಟೆಲ್ಲಾ ಆಗಿ ಬೇಕು ಬೇಕು ಅಂತ ಆಗಿದ್ದಲ್ಲ .. ಎಡವಟ್ಟಾಗಿ ಊಹಿಸದೇ ಗೊತ್ತಿಲದೇ ತೊಗೊಂಡ ತಿರುವಿಗೆ ಕ್ಷಮೆ ಇರಲಿ. ಈ ಘಟನೆ ಇಂದ ಪಾಠ ಕಲಿತು, ತಿದ್ದುಕೊಂಡು ಇನ್ನು ಮುಂದಿನ ದಿನದಲ್ಲೂ ನಿಮ್ಮ ಹೆಮ್ಮೆಯ ರಶ್ಮಿ ನಡೆಸೋ ಜವಾಬ್ದಾರಿ ಇರೋ ಶೋ ಆಗಿ ಮುಂದಿನ ದಿನಗಳಲ್ಲೂ ಇರುವೆ.

rajaratha trailer

2 ವಾರದ ಹಿಂದೆ ಮಾಡಿದ ರಾಜರಥ ಎಫ್ ಬಿ ಲೈವ್ .. ರಿಲೀಸ್ ಆಗೋ ಮುಂಚೆ ನಡೆದ ಎಫ್ ಬಿ ಲೈವ್ , ಎಡಿಟ್ ಆಗಿರೋ ವಿಡಿಯೋ ವೈರಲ್ ಆಗಿ ಇಷ್ಟೆಲ್ಲ ಆಗಿದೆ, ಈಗ ಒರಿಜಿನಲ್ ವಿಡಿಯೋ ಅಪ್ಲೋಡ್ ಮಾಡ್ತೀವಿ ನೋಡಿ.

ಮತ್ತೆ ಸಂದರ್ಶನದಲ್ಲಿ ಅವರಿಂದ ಬಾಯಿ ತಪ್ಪಿ ಬಂದ ಪದ ಬಳಕೆ ಬಗ್ಗೆ ಬೇಸರ ನನಗೂ ಇದೆ, ಮಾತಾಡಿದವರೇ ಕ್ಷಮೆ ಕೇಳಿದ್ದಾರೆ.. ನನ್ನ ರಿಯಾಕ್ಷನ್ ಬಗ್ಗೆ ನನಗೂ ಪ್ರಶ್ನೆ ಇದೆ.. ಯಾಕೆ ಹೀಗೆ ಮಾತಾಡಿದ್ರಿ ಅಂತ ಎದುರು ಬೀಳಕ್ಕೆ – ರಾಜರಾಥ ಕನ್ನಡ ಮತ್ತು ತೆಲಗು ಎರಡು ಭಾಷೆ ಸಿನಿಮಾ, ಇವರು ಉತ್ತರ ಆ ಫ್ಲೋ ನಲ್ಲಿ ಯಾರಿಗೆ ಹಿಂಗೇ ಹೇಳಿದ್ರು ಅಂತ ರೀ ಆಯ್ಯಕ್ಷನ್ ನ ಅರಗಿಸ್ಕೊಂಡು ಮತ್ತೆ ಅದು ಮುಂದೊಂದು ದಿನ ಕನ್ನಡಿಗರಿಗೆ ಹಿಂಗೇ ತಿರುಗಿಸಿರೋದು ಅಂತ ಟ್ರೋಲ್ ಆಗತ್ತೆ ಆ ಕ್ಷಣ ಹೊಳಿಯಲಿಲ್ಲ .. ಮುಂದಿನ ದಿನ ಪ್ರಶ್ನೆಯ ಕೇಳೋ ಭರದಲ್ಲಿ ಉತ್ತರಕ್ಕೂ ಏನು ಹೇಳಿದ್ರು ಯೋಚಿಸಿ ತಪ್ಪಿದ್ದರೆ ತಿದ್ದಿ ಮುಂದೆ ಪ್ರಶ್ನೆಗೆ ಹೋಗುವೆ .ಈಗ ನಾನು ಕನ್ನಡದವಳೇ ಆಗಿ, ನಾನು ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಎಲ್ಲೂ ತಪ್ಪಾಗಿ ಮಾತಾಡಿಲ್ಲ ಇಲ್ಲಿವರೆಗೂ .. ಮುಂದೇನೂ ಸಾಧ್ಯವೇ ಇಲ್ಲ.. ಮತ್ತೆ ಈ ವಿಡಿಯೋ ನೋಡಿ. ನಮ್ಮ ಶೋ ಇಂದ ಏನಾದ್ರು ತಪ್ಪಾಗಿದ್ಯಾ?? ಈ ವಿಡಿಯೋ ನೋಡಿ ನೀವೇ ನಿರ್ಧಾರ ಮಾಡಿ, ತಪ್ಪು ಆಗಿದ್ದರೆ ಮತ್ತೆ ಕ್ಷಮಿಸಿ?? 80 ಸಿನಿಮಾಗಳನ್ನು ಜವಾಬ್ದಾರಿ ಇಂದ ಪ್ರಮೋಟ್ ಮಾಡಿದ್ದೀವಿ , ಮುಂದೆ ಇನ್ನ್ನು ಹೆಚ್ಚು ಜಾಗರೂಕರಾಗಿ ಇನ್ನು ನಿಭಾಯಿಸ್ತೀವಿ. ಅಲ್ಲಿದ್ದ ಸ್ಟುಡಿಯೋ ಆಡಿಯೆನ್ಸ್ ಚಪ್ಪಾಳೆ ಹೊಡಿದಿದ್ದಾರೆ ಎಲ್ಲಾ ಉತ್ತರಕ್ಕೂ ಮತ್ತೆ ಕೆಲವು ಪ್ರಶ್ನೆ ಗೆ ನಾನು ಚಪ್ಪಾಳೆ ಹೊದೆದಿದ್ದೀನಿ, ಉದ್ದೇಶ ಪೂರ್ವಕ ಪ್ರತಿಕ್ರಿಯ ಅಲ್ಲ ಅದು ಮತ್ತು ನಾವು ಕೊಟ್ಟಿರೋ ಓರಿಜಿನಲ್ ವಿಡಿಯೋ ನೋಡಿ

RAJARATHA 19

ಈ ಮಧ್ಯೆ ನಾವಿದ್ದೀವಿ, ಕೇಳಿದ ಪ್ರಶ್ನೆ ತಪ್ಪಿಲ್ಲ ಅಂದವರಿಗೆ…, ಇಲ್ಲ ಬೇರೆ ಪ್ರಶ್ನೆಇರಲಿಲ್ಲವಾ ಕೆಳಕ್ಕೆ ಅಂದವರಿಗೆ …

ಬೇಸರ ಅಂದರೆ , ಸಂಪೂರ್ಣ ಸಂದರ್ಶನ ನೋಡಿ, ತಮಗೆ ಬೇಕಾಗಿರೋ ಹಾಗೆ 40 -50 ಸೆಕೆಂಡ್ ವಿವಾದಾತ್ಮಕ ಹೇಳಿಗೆ ಆಗಿ ಕತ್ತರಿ ಹಾಕಿರೋ ಎಡಿಟೆಡ್ ವಿಡಿಯೋ ಓಡಾಡಿದೆ. ಕನ್ನಡಿಗರು ವಿಶಾಲ ಹೃದಯದವರು ಹಾಗೆ ಪ್ರಜ್ಞಾವಂತರು, ಅವರ ಭಾವನೆಗಳ ಜೊತೆ ಆಟಾಡೋ ಹಾಗೆ ಎಡಿಟ್ ಮಾಡಿರೋರಿಗೆ ಕನ್ನಡಿಗರೇ ಉತ್ತರ ಕೊಡಲಿ. ಕೊನೆ ತೀರ್ಪು ನಿಮ್ಮದೇ ..ಆದರೂ ಫುಲ್- ವಿಡಿಯೋ ಯಾಕೆ ಸ್ವಾಮಿ ಹಾಕಿಲ್ಲ ! !!??

ಈಗ ಲೈಕ್ ಮಾಡಿ, ಒರಿಜಿನಲ್ ವಿಡಿಯೋ ಶೇರ್ ಮಾಡಿ, ಮತ್ತು ಇಷ್ಟೊತ್ತು ಹಂಚಿಕೆ ಆಗಿರೋ ಎಡಿಟೆಗ್ ಮಾಡಿದ ತಮಾಷೆಗೆ ——-?????

ಮುಂದಿನ ದಿನದಲ್ಲೂ ನಿಮ್ಮ ಪ್ರೀತಿ, ಅಭಿಮಾನಕ್ಕೆ ಧಕ್ಕೆ ಬಾರದ ಹಾಗೆ ನಡೆಯುವೆ.
ಇಂತಿ ನಿಮ್ಮ ರ‍್ಯಾಪಿಡ್ ರಶ್ಮಿ.

ಅನೂಪ್ ಭಂಡಾರಿ ಫೇಸ್‍ಬುಕ್ ನಲ್ಲಿ ಕ್ಷಮೆ:
ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರವದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನುದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ. ನಮ್ಮ ಯಾವುದೇ ಬೇರೆ ಸಂದರ್ಶನಗಳನ್ನು ನೋಡಿದರೂ ನಮ್ಮ ಗೆಲುವಿಗೆ ಪ್ರೇಕ್ಷಕರೇ ಕಾರಣ ಎಂದು ಹಲವು ಬಾರಿ ಹೇಳಿದ್ದೇವೆ. ಕನ್ನಡ ಮತ್ತು ಕನ್ನಡ ಸಿನಿಮಾದ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಅನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬರೆದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ANUP BANDARI 11

Comments

Leave a Reply

Your email address will not be published. Required fields are marked *