ವಿಮಾನದ ಟಿಕೆಟ್‍ಗಿಂತ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ: ರಮೇಶ್ ಕುಮಾರ್

Public TV
2 Min Read

ಬೆಂಗಳೂರು: ಬಸ್‍ಗಳ ಟಿಕೆಟ್ ದರ ಹೆಚ್ಚಿಸುವವರಿಗೆ ಜನರ ಬವಣೆ ಗೊತ್ತಿಲ್ಲ. ವಿಮಾನದ ಟಿಕೆಟ್‍ಗಿಂತ ಈ ಬಸ್‍ಗಳ ಟಿಕೆಟ್ ದರ ಜಾಸ್ತಿ ಇದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಬಸ್ ಟಿಕೆಟ್ ದರ ಹೆಚ್ಚು ಮಾಡಿಕೊಂಡು ಬರುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸೋರಿಗೆ ಜನರ ಬವಣೆ ಗೊತ್ತಿಲ್ಲ. ಹಬ್ಬದ ವೇಳೆ ಜನ ಊರುಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರಿ ಬಸ್‍ಗಳು ಸಾಲೋದಿಲ್ಲ. ಹಾಗಾಗಿ ಜನ ಖಾಸಗಿ ಬಸ್‍ಗಳ ಮೊರೆ ಹೋಗುತ್ತಾರೆ. ಆಗ ಖಾಸಗಿ ಬಸ್ ಮಾಲೀಕರು ಬಸ್ ದರ ಏರಿಕೆ ಮಾಡುತ್ತಾರೆ ಎಂದು ಬೆಲೆ ಏರಿಕೆ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ

ಮೌರ್ಯ ಸರ್ಕಲ್ ಬಳಿ ನೂರಾರು ಬಸ್ ಗಳಿವೆ ಆದರೂ ಕೂಡ ಅದರ ಟಿಕೆಟ್ ಬೆಲೆ ವಿಮಾನದ ಟಿಕೆಟ್ ಗಿಂತಲೂ ಜಾಸ್ತಿ ಆಗಿತ್ತು. ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಹಾಗೆ ಬೆಲೆ ಏರಿಕೆ ಮಾಡುವವರಿಗೂ ನಮಗೂ ಸಂಬಂಧ ಇಲ್ಲದಂತಾಗಿದೆ. ಸಾರಿಗೆ ಇಲಾಖೆ ಎಲ್ಲಿ ಹೋಯಿತು? ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಂದೊಂದು ದರ ಇತ್ತು ಕೆಲವು ಕಡೆ ಹೆಣವೂ ಕೊಡಲಿಲ್ಲ. ಅವರಿಗೆ ಶಾಸನದ ಭಯ ಇಲ್ಲದಂತಾಗಿದೆ, ಜನರ ಭಯ ನಮಗೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಎಲ್‍ಕೆಜಿಗೆ ಒಂದು ಲಕ್ಷ ಶಾಲಾ ಶುಲ್ಕ ಕೇಳುತ್ತಾರೆ. ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮ ಇದು ಈ ರೀತಿ ಆಗಿದೆ. ಖಾಸಗಿ ಶಾಲೆಗಳಿಗೆ ಅವಕಾಶ ಕೊಟ್ಟು, ಶುಲ್ಕ ಮೇಲೆ ನಿರ್ಬಂಧ ಹಾಕಲ್ಲ. ಶಿಕ್ಷಣಕ್ಕೊಂದು ಖಾತೆ, ಒಬ್ಬ ಸಚಿವ, ಬಜೆಟ್ ನಲ್ಲಿ ಹಣ ನಿಗದಿ ಮಾಡಿದ್ದೇವೆ ಇದು ಯಾಕೆ ಎಂದು ಪ್ರಶ್ನೆ ಮಾಡಿ, ಬೆಲೆ ಏರಿಕೆಗೆ ನಾವೆಲ್ಲರೂ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *