ಒಂದೇ ಹಕ್ಕಿಗೆ ಗುರಿಯಿಟ್ಟ ಡಿಕೆ ಬ್ರದರ್ಸ್, ಬಿಜೆಪಿ ಬ್ರದರ್ಸ್ ಆಟದ ಗೆಲುವು ಯಾರಿಗಣ್ಣೋ?

Public TV
2 Min Read

ಬೆಂಗಳೂರು: ಒಂದೇ ಅಡ್ಡ. ಒಂದೇ ಆಟ. ಸೋಲು-ಗೆಲುವು ಉಳಿದವರು ಕಂಡಂತೆ. ಒಂದು ಕಡೆ ದಳಪತಿ ಒಂಟಿ. ಇನ್ನೊಂದು ಕಡೆ “ಚನ್ನಪಟ್ಟಣದ ಬೊಂಬೆ” ಆಡಿಸಲು ಒಂದಾಗುತ್ತಿವೆ ಮೂರು ಶಕ್ತಿ.

ರಾಮನಗರದಲ್ಲಿ(Ramanagara) ಗೌಡರ ಗುದ್ದಾಟ ಮತ್ತೆ ಶುರುವಾಗಿದೆ. ಕುಮಾರಸ್ವಾಮಿ(HD Kumaraswamy) ಹಳೇ ಮೈಸೂರು(Old Mysuru) ಅಶ್ವಮೇಧ ಕಟ್ಟಿ ಹಾಕಲು ಡಿಕೆ ಬ್ರದರ್ಸ್ ಮತ್ತು ಬಿಜೆಪಿ ಬ್ರದರ್ಸ್ ಟೊಂಕ ಕಟ್ಟಿ ನಿಂತತೆ ಕಾಣುತ್ತಿದೆ.  ಇದನ್ನೂ ಓದಿ: ಮತ್ತೆ ಸಿಪಿವೈ Vs ಎಚ್‌ಡಿಕೆ – ಕಲ್ಲು, ಮೊಟ್ಟೆ ಎಸೆತ, ಲಾಠಿ ಚಾರ್ಜ್‌, ಜೆಡಿಎಸ್‌ ಕಾರ್ಯಕರ್ತರು ವಶಕ್ಕೆ

HD Kumaraswamy at Bidadi Farm House

ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ವರ್ಸಸ್ ಅಶ್ವತ್ಥನಾರಾಯಣ್(Ashwath Narayan) ನಡುವೆ ರಾಮನಗರ ಸೇಡು ಪ್ರತಿಧ್ವನಿಸಿ ಸಖತ್ ಸದ್ದು ಮಾಡಿತ್ತು. ಈಗ ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ವರ್ಸಸ್ ಕುಮಾರಸ್ವಾಮಿ ನಡುವೆ ಗುದ್ದಾಟ ನಡೆದಿದೆ. ಈ ಎರಡು ವೈಯುಕ್ತಿಕ ಸಮರಗಳನ್ನು ಬ್ಯಾಕ್ ಸೀಟಲ್ಲಿ ಕುಳಿತು ನೋಡುತ್ತಿರುವ ಡಿಕೆ ಬ್ರದರ್ಸ್ ಆಸಲಿ ಆಟಕ್ಕೆ ಕಾಯುತ್ತಿದ್ದಾರೆ. ಇದನ್ನೂ ಓದಿ: ನಾನು ಬ್ಲ್ಯಾಕ್‌ ಇದ್ದೇನೆ, ಆದ್ರೆ ಬ್ಲ್ಯಾಕ್‌ ಮೇಲರ್ ಅಲ್ಲ: ಹೆಚ್‌ಡಿಕೆ ಪಂಚ್

ಅಂದಹಾಗೆ ರಾಮನಗರ ಜಿಲ್ಲೆಯ ರಾಜಕೀಯ ಅಖಾಡದ ಗುಣವೇ ಜಿದ್ದು ಜಿದ್ದು ಜಿದ್ದು. ಇತಿಹಾಸವೂ ಕೂಡ ಹಾಗೆ ಇದೆ. 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ದೇವೇಗೌಡರ ಎದುರು ಡಿಕೆಶಿ ಸೋಲುತ್ತಾರೆ. 1999ರಲ್ಲಿ ಅದೇ ಡಿಕೆಶಿ ಕುಮಾರಸ್ವಾಮಿ ಅವರನ್ನು ಸೋಲಿಸ್ತಾರೆ. 2013ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಸೋಲುತ್ತಾರೆ. ಅಷ್ಟೇ ಏಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನ ಕುಮಾರಸ್ವಾಮಿ ಸೋಲಿಸುತ್ತಾರೆ. ಈ ಎಲ್ಲಾ ಚುನಾವಣೆಗಳು‌ ವೈಯುಕ್ತಿಕ ಜಿದ್ದಾಜಿದ್ದಿನ ಮೇಲೆ ನಡೆದಿದ್ದವು ಎಂಬುದು ಇತಿಹಾಸ.

ಈ ನಡುವೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ವೀಕ್ ಮಾಡಲು ಕಾಂಗ್ರೆಸ್, ಬಿಜೆಪಿ ಎರಡೂ ಪ್ಲ್ಯಾನ್ ಮಾಡುತ್ತಿವೆ.‌ ರಾಮನಗರ ಜಿಲ್ಲೆಯಲ್ಲೇ ಕುಮಾರಸ್ವಾಮಿ ಅವರನ್ನ ಕಟ್ಟಿ ಹಾಕಿದ್ರೆ ಉಳಿದ ಕಡೆಗಳಲ್ಲಿ ನಾವು ಆಟ ಆಡಬಹುದೆಂಬ ಲೆಕ್ಕಚಾರ ಮಾಡಿಕೊಂಡಿವೆ ಎನ್ನಲಾಗಿದೆ.

ಒಟ್ಟಿನಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದ ರಣರೋಚಕ ರಾಜಕಾರಣವೇ ಸ್ಟಾರ್ ವಾರ್‌ಗೆ  ವೇದಿಕೆಯಾಗುವ ಸಾಧ್ಯತೆ ಇದ್ದು, ಯಾರು ಸಕ್ಸಸ್? ಯಾರು ಫೆಲ್ಯೂರ್ ಆಗ್ತಾರೆ ಎನ್ನುವದನ್ನು ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *