ಕುಡಿದು ಡ್ಯಾನ್ಸ್ ಮಾಡುತ್ತಾ ಮೈಮರೆತ ವರ – ಬೇರೆಯವರನ್ನ ಮದುವೆಯಾದ ವಧು

Public TV
1 Min Read

ಜೈಪುರ: ಮದುವೆ ಸಮಯದಲ್ಲಿ ತಮಾಷೆ, ವಿಚಿತ್ರ ಮತ್ತು ವಿಲಕ್ಷಣ ಘಟನೆಗಳು ನಡೆಯುತ್ತ ಇರುತ್ತೆ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವರನೊಬ್ಬ ಚೆನ್ನಾಗಿ ಕುಡಿದು, ಡ್ಯಾನ್ಸ್ ಮಾಡುತ್ತ ಮೈಮರೆತಿದ್ದಾನೆ. ಈ ಹಿನ್ನೆಲೆ ವಧು ಬೇರೆಯವರನ್ನು ಮದುವೆಯಾಗಿದ್ದಾಳೆ.

ನಡೆದಿದ್ದೇನು?
ರಾಜಸ್ತಾನದ ಚೂರಿನಲ್ಲಿ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸುವಾಗ ಈ ಘಟನೆ ನಡೆದಿದೆ. ಮದುವೆಯ ಮುಹೂರ್ತ ಸೋಮವಾರ ನಸುಕಿನ ಜಾವ 1.15 ಪ್ರಾರಂಭವಾಗಬೇಕಿತ್ತು. ಈ ಹಿನ್ನೆಲೆ ವರನ ಕಡೆಯವರು ಭಾನುವಾರ ರಾತ್ರಿ 9 ಗಂಟೆಗೆ ಬಾರಾತ್(ಮೆರವಣಿಗೆ) ಪ್ರಾರಂಭಿಸಿದ್ದಾರೆ. ಆದರೆ ಸುನೀಲ್ ತನ್ನ ಸ್ನೇಹಿತರೊಂದಿಗೆ ಚೆನ್ನಾಗಿ ಕುಡಿದು ಡಿಜೆ ಸಾಂಗ್‍ಗೆ ನೃತ್ಯ ಮಾಡುತ್ತಲೇ ಇದ್ದನು. ಇದನ್ನೂ ಓದಿ: ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ ಮೋದಿ 

ಇದರಿಂದ ಗಂಟೆಗಟ್ಟಲೆ ಮೆರವಣಿಗೆ ವಿಳಂಬವಾಯಿತು. ವಧುವಿನ ಕಡೆಯವರು, ವರನ ಬರುವಿಕೆಗಾಗಿ ಕಾಯುತ್ತಿದ್ದರು. ಹಲವು ಗಂಟೆಗಳಾದರೂ ವರನು ಬಾರದೆ ಇರುವುದನ್ನು ನೋಡಿ ವಧುವಿನ ಕಡೆಯವರು ಗಾಬರಿಗೊಂಡರು. ಈ ಹಿನ್ನೆಲೆ ವಧುವಿಗೆ ಬೇರೆ ವರನನ್ನು ನೋಡಿ ಮದುವೆ ಮಾಡಿಸಿದ್ದಾರೆ. ವರ ಮತ್ತು ಅವರ ಸಂಬಂಧಿಕರು ಕೊನೆಗೂ ಸ್ಥಳಕ್ಕೆ ಬಂದಾಗ, ವಧು ಈಗಾಗಲೇ ಮತ್ತೊಬ್ಬರನ್ನ ಮದುವೆಯಾಗಿರುವುದನ್ನು ನೋಡಿ ಆಘಾತಕ್ಕೊಳಗಾದರು.

ಅವಮಾನಕ್ಕೊಳಗಾದ ವರನ ಕಡೆಯವರು ವಧುವಿನ ಕಡೆಯವರ ವಿರುದ್ಧ ರಾಜ್‍ಗಢ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದಾರೆ. ಅದಕ್ಕೆ ವಧುವಿನ ಕಡೆಯವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಧುವಿನ ಕುಟುಂಬಸ್ಥರು, ವರ ಮತ್ತು ಅವನ ಕುಟುಂಬವು ಮದುವೆಯ ಆಚರಣೆಗಳ ಬಗ್ಗೆ ತುಂಬಾ ಅಸಡ್ಡೆ ಹೊಂದಿದ್ದಾರೆ. ಮುಂದೆ ಭವಿಷ್ಯದಲ್ಲಿಯೂ ಈ ನಡವಳಿಕೆಯು ಮುಂದುವರಿಯುತ್ತೆ ಎಂದು ನಮಗೆ ಭಯವಾಗಿ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? 

ಎರಡು ಕುಟುಂಬಗಳನ್ನು ವಿಚಾರಣೆ ಮಾಡಿದ ಬಳಿಕ ಪೊಲೀಸರು ಸಮಾಲೋಚನೆ ಮಾಡಿ, ಮದುವೆಯನ್ನು ಕಾನೂನುಬದ್ಧವಾಗಿಸಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಇದನ್ನು ಎರಡು ಕುಟುಂಬ ಒಪ್ಪಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *