ಬೆಂಗಳೂರು: ಮೊದಲು ಕೆ.ಎನ್. ರಾಜಣ್ಣ(KN Rajanna) ಸಚಿವ ಸ್ಥಾನದಿಂದ ವಜಾ ಆಗಿದ್ದಾಯ್ತು. ಈಗ ಪರಿಷತ್ ಸದಸ್ಯ ನಸೀರ್ ಅಹಮದ್(Naseer Ahmed) ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಆಗಿದ್ದಾರೆ. ಮುಂದಿನ ಸರದಿ ಯಾರು? ವಸತಿ ಸಚಿವ ಜಮೀರ್ ಅಹಮದ್ಗೆ(Zameer Ahmed) ಕಾದಿದ್ಯಾ ಸಂಕಷ್ಟ ಎಂಬ ಕುತೂಹಲ ಹೆಚ್ಚಾಗಿದೆ.
ಕೆಎನ್ ರಾಜಣ್ಣ ಮತ್ತು ನಸೀರ್ ಅಹಮದ್ ಸಿಎಂ ಸಿದ್ದರಾಮಯ್ಯನವರ ಆಪ್ತರಾಗಿದ್ದಾರೆ. ಸಿದ್ದರಾಮಯ್ಯ (Siddaramaiah) ಪರ ನಿಂತವರೇ ಟಾರ್ಗೆಟ್ ಆಗಿದ್ದು, ಎಲ್ಲರಿಗೂ ಒಳ ಹೊಡೆತ ಬಿದ್ದಿದೆ ಅಂದರೆ ತಪ್ಪಗಲಾರದು. ಇದನ್ನೂ ಓದಿ: 7 ಮುಸ್ಲಿಂ ನಾಯಕರ ಹೆಸರು ಕೊಟ್ಟಿದ್ದೆ, ದಾವಣಗೆರೆ ಟಿಕೆಟ್ ಕೊಡದಿದ್ದಕ್ಕೆ ಅಸಮಾಧಾನ ಇದ್ದಿದ್ದು ನಿಜ: ಜಮೀರ್
ಕೆಪಿಸಿಸಿ(KPCC) ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್, ಜಮೀರ್, ನಸೀರ್ ವಿರುದ್ಧ ಅವರದ್ದೇ ಸಮುದಾಯದ ನಾಯಕರೇ ಚಾರ್ಜ್ ಶೀಟ್ ಹಾಕಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡ ಡಿಸಿಎಂ ಡಿಕೆಶಿ ಅವರ ತಪ್ಪುಗಳನ್ನೇ ಮುಂದಿಟ್ಟುಕೊಂಡು ಪಕ್ಷದ ಶಿಸ್ತಿನ ಹೆಸರಿನಲ್ಲಿ ಉರುಳಿಸಿದ ದಾಳ ಯಶಸ್ಸು ಆದ ಬಗ್ಗೆಯೂ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದನ್ನೂ ಓದಿ: ಪಕ್ಷಕ್ಕೆ ಶಿಸ್ತು ಬಹಳ ಮುಖ್ಯ, ಆದರೆ ಜಮೀರ್ ಅದನ್ನು ಪಾಲಿಸಿಲ್ಲ: ಡಿಕೆಶಿ

