‘ಪ್ರೇಮಲೋಕ 2’ ಬರತ್ತೆ: ಹೊಸ ಕನಸು ಹಂಚಿಕೊಂಡ ಕ್ರೇಜಿಸ್ಟಾರ್

Public TV
1 Min Read

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಂದಾಕ್ಷಣ ಥಟ್ಟನೆ ನೆನಪಾಗುವ ಸಿನಿಮಾ ಪ್ರೇಮಲೋಕ. ಈ ಸಿನಿಮಾ ಸೃಷ್ಟಿದ ದಾಖಲೆಗಳು ಒಂದಲ್ಲ, ಎರಡಲ್ಲ. ಈ ಹೊತ್ತಿಗೂ ಎವರ್ ಗ್ರೀನ್ ಸಿನಿಮಾಗಳ ಸಾಲಿನಲ್ಲಿ ಪ್ರೇಮಲೋಕ ಯಾವತ್ತಿಗೂ ಕಾಣಿಸಿಕೊಳ್ಳತ್ತೆ. ಈ ಸಿನಿಮಾದ ಪಾರ್ಟ್ 2 (Premaloka 2) ಮಾಡುವ ಕುರಿತು ರವಿಚಂದ್ರನ್ ಹೇಳಿದ್ದಾರೆ.

ಹಂಪಿ ಉತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ರವಿಚಂದ್ರನ್, ತಮ್ಮ ಪ್ರೇಮಲೋಕ 2 ಚಿತ್ರದ ಕನಸನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡರು. ಜೊತೆಗೆ ಈ ಸಿನಿಮಾದಲ್ಲಿ ಬರೋಬ್ಬರಿ 25 ಹಾಡುಗಳು ಇರಲಿವೆ ಎಂದು ಅಚ್ಚರಿಕೆಯ ಹೇಳಿಕೆಯನ್ನೂ ನೀಡಿದರು. 25 ಹಾಡುಗಳು ಇರಲಿವೆ ಎನ್ನುವ ಮಾತು ಕೇಳುತ್ತಿದ್ದಂತೆಯೇ ಸ್ವತಃ ಸಚಿವರಾದ ಜಮೀರ್ ಅಚ್ಚರಿ ವ್ಯಕ್ತ ಪಡಿಸಿದರು.

ಹೌದು, ಪ್ರೇಮಲೋಕ ಸಿನಿಮಾದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಈ ಹೊತ್ತಿಗೂ ಈ ಹಾಡುಗಳು ಟ್ರೆಂಡಿಂಗ್ ನಲ್ಲಿವೆ. ಅಂಥದ್ದೇ ಮತ್ತಷ್ಟು ಹಾಡುಗಳನ್ನು ಪ್ರೇಮಲೋಕ 2 ಚಿತ್ರಕ್ಕೆ ಅಳವಡಿಸಲಿದ್ದಾರಂತೆ ರವಿಚಂದ್ರನ್. ಈ ಹಾಡುಗಳು ಕಥೆಯ ರೂಪದಲ್ಲೂ ಬರಲಿವೆ ಎನ್ನುವುದು ವಿಶೇಷ.

 

ಕೇವಲ ಸಿನಿಮಾ ಮಾಡುವ ಕುರಿತು ಮಾತ್ರ ರವಿಚಂದ್ರನ್ ಮಾತನಾಡಿದ್ದಾರೆ. ಯಾವಾಗ ಶುರು? ಕಥೆಯೇ ಏನು? ಕಲಾವಿದರು ಯಾರೆಲ್ಲ ಇರಲಿದ್ದಾರೆ ಎನ್ನುವ ಮಾಹಿತಿಯನ್ನು ಅವರು ಬಹಿರಂಗ ಪಡಿಸಿಲ್ಲ. ಮುಂದಿನ ದಿನಗಳಲ್ಲಿ ಹೇಳಬಹುದು.

Share This Article