ಪ್ರಜ್ವಲ್‌ ರೇವಣ್ಣ ಮಾನಸಿಕ ಸ್ಥಿತಿ ಕುಗ್ಗಿತಾ?- ಅತ್ಯಾಚಾರ ಕೇಸ್‌ ಅಪರಾಧಿಗೆ ಜೈಲಿನಲ್ಲೇ ಕೌನ್ಸಿಲಿಂಗ್

Public TV
1 Min Read

ಬೆಂಗಳೂರು: ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ.

ಯಾರ ಜೊತೆಗೆ ಮಾತಾಡುತ್ತಿಲ್ಲ. ಸರಿಯಾಗಿ ಊಟ, ತಿಂಡಿ ಕೂಡ ಮಾಡುತ್ತಿಲ್ಲ.‌ ಹಾಗಾಗಿ, ಎರಡು ದಿನಗಳಿಗೊಮ್ಮೆ ಜೈ‌ಲಿನಲ್ಲೇ ಅಲ್ಲಿನ ವೈದ್ಯರು ಕೌನ್ಸಿಲಿಂಗ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕೈದಿ ನಂ. 15528 – ಪ್ರಜ್ವಲ್‍ಗೆ 524 ರೂ. ದಿನಗೂಲಿ, ಕೆಲಸವೇನು ಗೊತ್ತಾ?

ಜೀವಾವಧಿ ಶಿಕ್ಷೆಯೇ ಅಂತಿಮವಲ್ಲ, ಹೈಕೋರ್ಟ್ ಇದೆ, ಸುಪ್ರೀಂ ಕೋರ್ಟ್ ಇದೆ, ಪೆರೋಲ್, ಸನ್ನಡತೆ ಅಧಾರದ ಮೇಲೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬಹುದು ಅಂತಾ ಅವರಿಗೆ ಇರುವ ಅವಕಾಶಗಳ ಬಗ್ಗೆ ತಿಳಿ ಹೇಳಿ ಕೌನ್ಸಿಲಿಂಗ್ ಮಾಡಲಾಗ್ತಿದೆ. ಬಿಇ ವಿದ್ಯಾಭ್ಯಾಸ ಮಾಡಿರುವ ಪ್ರಜ್ವಲ್‌ಗೆ ಬಯಸಿದ ಕೆಲಸ ನೀಡಲಾಗುತ್ತೆ. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್‌ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ

ಪ್ರಜ್ವಲ್‌ಗೆ ಇದೀಗ ಐದು ಕೆಲಸಗಳ ಅವಕಾಶ
1.ಕೃಷಿ ಬಗ್ಗೆ ಆಸಕ್ತಿ ಇದ್ದಲ್ಲಿ ವ್ಯವಸಾಯದ ಕೆಲಸಕ್ಕೆ ಬಳಕೆ
2.ಲೈಬ್ರರಿ ಇದ್ದು, ಲೈಬ್ರರಿ ನೋಡಿಕೊಳ್ಳಲು ಬಯಸಿದರೆ ನಿಯೋಜನೆ
3.ಬೇಕರಿ ಹಾಗೂ ಗಾರ್ಮೆಂಟ್ಸ್ ಇದ್ದು, ಮೆಂಟೆನೆನ್ಸ್‌ ಮಾಡಲು ಒಪ್ಪಿದರೆ ಅವಕಾಶ
4.ಕೈದಿಗಳಿಗೆ ಪಾಠ ಹೇಳಿಕೊಡಲು ಒಪ್ಪಿದರೆ ನಿಯೋಜನೆ
5.ಕಾರಾಗೃಹ ದಾಖಲೆಗಳ ಇಲಾಖೆಯಲ್ಲಿ ಕೆಲಸ ಮಾಡಲು ಒಪ್ಪಿದರೆ ನಿಯೋಜನೆ

ಬಹುತೇಕವಾಗಿ ಲೈಬ್ರರಿಯನ್ನ ನೋಡಿಕೊಳ್ಳುವ ಬಗ್ಗೆ ಜೈಲಾಧಿಕಾರಿಗಳು ಚರ್ಚೆಯಾಯಾಗುತ್ತಿದೆ ಎನ್ನಲಾಗಿದೆ.

Share This Article