ಸರ್ಕಾರಿ ಶಾಲೆ ಶೌಚಾಲಯ ಸ್ವಚ್ಛಗೊಳಿಸಿದ ಮಧ್ಯಪ್ರದೇಶದ ಸಚಿವ

Public TV
2 Min Read

– ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ

ಲಕ್ನೋ: ಸರ್ಕಾರಿ ಶಾಲೆಯಲ್ಲಿನ ಅವ್ಯವಸ್ಥೆ ಕುರಿತು ಬಾಲಕಿಯರು ದೂರು ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ವತಃ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.

ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಈ ವೇಳೆ ಬಾಲಕಿಯರು ನೀಡಿದ ದೂರಿನ ಮೇರೆಗೆ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಹೀಗೆ ಪ್ರದ್ಯುಮನ್ ಅವರು ಶೌಚಾಲಯ ಸ್ವಚ್ಛಗೊಳಿಸಿವುದು ಕಂಡು ಬಂದಿದ್ದು, ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ರಸ್ತೆಯನ್ನು ಗುಡಿಸುವ ಮೂಲಕವಾಗಿ ಸುದ್ದಿಯಾಗಿದ್ದರು. ಇದನ್ನೂ ಓದಿ:  7 ಎಕರೆ ಆಸ್ತಿಗಾಗಿ ಕಿಡ್ನಾಪ್ ಆಗಿದ್ದ 98ರ ಅಜ್ಜಿ ಓಣಿಯಲ್ಲಿ ಪತ್ತೆ

ಪ್ರದ್ಯುಮನ್ ಸಿಂಗ್ ತೋಮರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ತಪಾಸಣೆಗೆ ಬಂದಿದ್ದರು. ಇಲ್ಲಿ ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವಾಗ ಶಾಲೆಯ ಶೌಚಾಲಯ ತುಂಬಾ ಕೊಳಕಾಗಿದೆ. ಇದರಿಂದ ಅವರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗಿದೆ ಎಂದು ವಿದ್ಯಾರ್ಥಿನಿಯರು ತಿಳಿಸಿದರು. ನೇರವಾಗಿ ಶೌಚಾಲಯಕ್ಕೆ ತೆರಳಿದ ಪ್ರದ್ಯುಮನ್ ಸಿಂಗ್ ಅವರು ಸಮಯ ವ್ಯರ್ಥ ಮಾಡದೆ ತಮ್ಮ ಕೈಯಿಂದಲೇ ಶೌಚಾಲಯ ಸ್ವಚ್ಛಗೊಳಿಸಲು ಆರಂಭಿಸಿದರು. ಸಂಪೂರ್ಣ ಶೌಚಾಲಯವನ್ನು ಉತ್ತಮ ರೀತಿಯಲ್ಲಿ ಸ್ವಚ್ಛಗೊಳಿಸಿದರು. ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡುವುದರೊಂದಿಗೆ ಶಾಲೆಗಳ ಶೌಚಾಲಯಗಳನ್ನು ಪ್ರತಿನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

 ಪ್ರದ್ಯುಮನ್ ಸಿಂಗ್ ತೋಮರ್ ಮಾತನಾಡಿ ,ಶಾಲೆಯಲ್ಲಿನ ಶೌಚಾಲಯಗಳು ಸ್ವಚ್ಛವಾಗಿಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿನಿಯೊಬ್ಬರು ನನಗೆ ಹೇಳಿದರು. 30 ದಿನಗಳಿಂದ ಸ್ವಚ್ಛತಾ ಪ್ರತಿಜ್ಞೆ ಮಾಡಿದ್ದು, ಪ್ರತಿ ದಿನ ಯಾವುದಾದರೂ ಸಂಸ್ಥೆಗೆ ತೆರಳಿ ಸ್ವಚ್ಛತೆ ಮಾಡುತ್ತೇನೆ, ಸ್ವಚ್ಛತೆಯ ಸಂದೇಶ ಎಲ್ಲ ಜನರಿಗೆ ತಲುಪಬೇಕು, ಎಲ್ಲರೂ ಸ್ವಚ್ಛತೆ ಹೊಂದಬೇಕು ಎಂಬ ಉದ್ದೇಶದಿಂದೇ ಸ್ಫೂರ್ತಿಯಾಗಲು ಈ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *