ಫಸ್ಟ್ ಟೈಂ, ಅ.21 ರಂದು ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿಯಿಂದ ಧ್ವಜಾರೋಹಣ

Public TV
1 Min Read

ನವದೆಹಲಿ: ಇತಿಹಾಸದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜೋತ್ಸವ ದಿನ ಹೊರತು ಪಡಿಸಿ ಅಕ್ಟೋಬರ್ 21 ರಂದು ಕೆಂಪುಕೋಟೆಯ ಮೇಲೆ ಧ್ವಜರೋಹಣ ನಡೆಯಲಿದೆ.

ಅ.21 ರಂದು ಕೆಂಪುಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ `ಅಜಾದ್ ಹಿಂದ್ ಸರ್ಕಾರ’ ಸ್ಥಾಪನೆಯಾದ 75 ವರ್ಷದ ಸ್ಮರಣಾ ಕಾರ್ಯಕ್ರಮದ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಗುರುವಾರ ಖಚಿತ ಪಡಿಸಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜರೋಹಣ ನಡೆಯಲಿದೆ.

ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪಾಟೀಲ್ ಅವರ ಪ್ರತಿಮೆ ನಿರ್ಮಾಣದ ಯೋಜನೆ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. ಈ ಮೂಲಕ ಪಾಟೇಲ್ ಅವರಿಗೆ ಅವಮಾನ ಮಾಡಿದೆ. ದೇಶದ ಮೊದಲ ಗೃಹ ಸಚಿವರಿಗೆ ಅಗೌರವ ತೋರಿದೆ. ಪಾಟೇಲ್ ಅವರ ಸ್ಮಾರಕ ಪತ್ರಿಮೆ ಐಕ್ಯತೆ ಸಂಕೇತವಾಗಿದೆ. 21ರ ಕಾರ್ಯಕ್ರಮ ಬಗ್ಗೆಯೂ ಟೀಕೆಗಳು ಮಾಡಬಹುದು. ಆದರೆ ದೇಶದ ಪರ ಹೋರಾಟ ನಡೆಸಿದ ನಾಯಕರ ಸ್ಮರಣೆ ನಮ್ಮ ಕರ್ತವ್ಯವಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪಾಟೇಲ್ ಅವರ ಸ್ಮಾರಕ ನಿರ್ಮಾಣ ಕಾರ್ಯ ಮೇಡ್ ಇನ್ ಚೀನಾ ಎಂದು ಟೀಕೆ ಮಾಡಿದ್ದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆ ಪ್ರತಿಮೆ ದೇಶದಕ್ಕೆ ಮಾದರಿಯಾಗಿದೆ. ಪಟೇಲ್ ಅವರ ಕಾರ್ಯಗಳು ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಿದೆ. ಕಾಂಗ್ರೆಸ್ ಪಟೇಲ್ ಸೇರಿದಂತೆ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್ ಅವರನ್ನು ಇತಿಹಾಸದ ಉದ್ದಕ್ಕೂ ನಿರ್ಲಕ್ಷ್ಯ ಮಾಡಿಕೊಂಡೇ ಬಂದಿದೆ. ಆದರೆ ಬಿಜೆಪಿ ದೇಶಕ್ಕೆ ನಿಜವಾದ ಕೊಡುಗೆ ನೀಡಿದ ನಾಯಕರನ್ನ ಸ್ಫೂರ್ತಿಯಾಗಿ ಪಡೆದಿದೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.facebook.com/narendramodi/videos/569401976807544/

Share This Article
Leave a Comment

Leave a Reply

Your email address will not be published. Required fields are marked *