ಇರಾನ್‌ ದಾಳಿಗೆ ಮೋದಿ ತೀವ್ರ ಖಂಡನೆ – ಬಿಕ್ಕಟ್ಟಿನ ಮಧ್ಯೆ ಇಸ್ರೇಲ್‌ ಪ್ರಧಾನಿಗೆ ಫೋನ್‌ ಕಾಲ್‌

2 Min Read

ನವದೆಹಲಿ/ಟೆಲ್‌ ಅವಿವ್‌: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆ ಮಧ್ಯೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಇದೇ ವೇಳೆ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಒತ್ತಿ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತದ ಕಳವಳಗಳನ್ನ ತಿಳಿಸಿದ್ದೇನೆ. ಜೊತೆಗೆ ನಾಗರಿಕರನ್ನ ರಕ್ಷಿಸುವ ಮಹತ್ವವನ್ನ ಎತ್ತಿ ತೋರಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧ ಮುಂದುವರಿದರೆ ಭಾರತಕ್ಕೂ ಆರ್ಥಿಕ ಹೊಡೆತ – ತೈಲ ಬೆಲೆ ಏರಿಕೆ ಆತಂಕ!

ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಕುರಿತು ಚರ್ಚಿಸಲು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮಾಡಿದ್ದೇನೆ. ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತದ ಕಳವಳಗಳನ್ನು ತಿಳಿಸಿದ್ದೇನೆ ಮತ್ತು ನಾಗರಿಕರ ಸುರಕ್ಷತೆಯನ್ನ ಆದ್ಯತೆಯಾಗಿ ಪರಿಗಣಿಸುವಂತೆ ಒತ್ತಿ ಹೇಳಿದ್ದೇನೆ. ಯುದ್ಧವನ್ನ ಬೇಗನೆ ನಿಲ್ಲಿಸುವಂತೆ ಭಾರತ ಪುನರುಚ್ಚರಿಸುತ್ತದೆ ಎಂದು ತಿಳಿಸಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಸಿದ್ಧ ಶಿಯಾ ಮಸೀದಿ ಮೇಲೆ ಹಾರಿತು ಕೆಂಪು ಧ್ವಜ – ಪ್ರತೀಕಾರದ ಶಪಥ ಮಾಡಿದ ಇರಾನ್

ಯುಎಇ ಮೇಲಿನ ದಾಳಿಗೆ ಖಂಡನೆ
ಇನ್ನೂ ಯುಎಇ ಅಧ್ಯಕ್ಷರೊಂದಿಗೂ ಮಾತನಾಡಿದ್ದು, ಯುಎಇ (UAE) ಮೇಲಿನ ಇರಾನ್‌ ದಾಳಿಯನ್ನ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ʻಯುಎಇ ಅಧ್ಯಕ್ಷ ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿದೆ. ಯುಎಇ ಮೇಲಿನ ದಾಳಿಗಳನ್ನು ತೀವ್ರವಾಗಿ ಖಂಡಿಸಿದೆ ಮತ್ತು ಈ ದಾಳಿಯಲ್ಲಿನ ಜೀವಹಾನಿಗೆ ಸಂತಾಪ ಸೂಚಿಸಿದೆ. ಈ ಕಷ್ಟದ ಸಮಯದಲ್ಲಿ ಭಾರತ ಯುಎಇಯೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ. ಯುಎಇಯಲ್ಲಿ ವಾಸಿಸುವ ಭಾರತೀಯ ಸಮುದಾಯವನ್ನ ನೋಡಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದೆ. ನಾವು ಉದ್ವಿಗ್ನತೆ ನಿವಾರಣೆ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನ ಬೆಂಬಲಿಸುತ್ತೇವೆʼ ಎಂದು ಮತ್ತೊಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Share This Article