ಫೆ.17 ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ಸ್ವೀಕಾರ – ಮೋದಿಗೆ ಆಹ್ವಾನ

2 Min Read

ನವದೆಹಲಿ/ಢಾಕಾ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ರಾಷ್ಟ್ರೀಯತಾವಾದಿ ಪಕ್ಷದ (BNP) ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಫೆ.17 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಬಿಎನ್‌ಪಿ ಆಹ್ವಾನ ನೀಡಿದೆ.

ಬಾಂಗ್ಲಾದೇಶದ ಸಂಸತ್‌ ಭವನದ ಸೌತ್‌ ಪ್ಲಾಜಾದಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ದಕ್ಷಿಣ ಏಷ್ಯಾದ (South Asia) ಅನೇಕ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಭಾರತಕ್ಕೂ ಆಹ್ವಾನ ನೀಡಲಾಗಿದ್ದು, ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುವಂತೆ ಬಿಎನ್‌ಪಿ ಮನವಿ ಮಾಡಿದೆ. ಇದನ್ನೂ  ಓದಿ: ಭಾರತ ವಿರೋಧಿ ಭಯೋತ್ಪಾದನಾ ಆರೋಪಿಗಳಿಗೆ ಬಾಂಗ್ಲಾ ಚುನಾವಣೆಯಲ್ಲಿ ಗೆಲುವು

ಮೂಲಗಳ ಪ್ರಕಾರ, 2024ರ ದಂಗೆಯ ಬಳಿಕ ಗೆದ್ದ ಚುನಾವಣೆಯಲ್ಲಿ (Bangladesh Election) ಬಿಎನ್‌ಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಹೀಗಾಗಿ ಹೊಸ ಪ್ರಧಾನಿ ಮತ್ತು ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಸಾರ್ವತ್ರಿಕ ಚುನಾವಣೆಯ ನಂತರ ಸಾಂವಿಧಾನಿಕ ಪರಿವರ್ತನೆ ಒತ್ತಿಹೇಳುವ ಮೂಲಕ ತಾರಿಕ್ ರೆಹಮಾನ್ ಅವರಿಗೆ ಮುಖ್ಯ ಚುನಾವಣಾ ಆಯುಕ್ತ ಎಎಂಎಂ ನಾಸಿರ್ ಉದ್ದೀನ್ ಪ್ರಮಾಣವಚನ ಬೋಧಿಸಲಿದ್ದಾರೆ. ಇದನ್ನೂ  ಓದಿ: ಬಾಂಗ್ಲಾದಲ್ಲಿ ಬಿಎನ್‌ಪಿ ಕ್ಲೀನ್‌ ಸ್ವೀಪ್‌| 20 ವರ್ಷದ ಬಳಿಕ ಅಧಿಕಾರಕ್ಕೆ, ಪ್ರಧಾನಿಯಾಗಲಿದ್ದಾರೆ ಖಲೀದಾ ಜಿಯಾ ಪುತ್ರ

ಶುಭಕೋರಿದ ಮೋದಿ
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರದ ಪತನದ ನಂತರ ಇತ್ತೀಚೆಹೆ ನಡೆದ ಮೊದಲ ಸಾರ್ವತ್ರಿಕ ಚುನಾವಣೆ (Bangladesh Election)ಯಲ್ಲಿ ರಾಷ್ಟ್ರೀಯತಾವಾದಿ ಪಕ್ಷ (BNP) ಅಭೂತಪೂರ್ವ ಜಯ ಸಾಧಿಸಿತು. ಈ ಬೆನ್ನಲ್ಲೇ ಶುಭ ಹಾರೈಸಿದ್ದ ಪ್ರಧಾನಿ ಮೋದಿ ಬಾಂಗ್ಲಾದ ಅಭಿವೃದ್ಧಿಗಾಗಿ ಭಾರತ ಸದಾ ಬೆನ್ನಿಗೆ ನಿಂತಿರುತ್ತೆ ಎಂದು ಭರವಸೆ ಕೂಡ ನೀಡಿದ್ದರು.

Bangladesh interim govt urges pause in Durga Puja activities during namaz

ಶೇಖ್ ಹಸೀನಾ ಪಾರ್ಟಿ ಸ್ಪರ್ಧಿಸದಂತೆ ನಿರ್ಬಂಧ
ಈ ಸಂಸತ್ತಿನ ಚುನಾವಣೆಯಲ್ಲಿ ಬಾಂಗ್ಲಾದೇಶದ ಚುನಾವಣಾ ಆಯೋಗ, ಆವಾಮಿ ಲೀಗ್ ಪಾರ್ಟಿಯ ನೋಂದಣಿಯನ್ನ ರದ್ದುಗೊಳಿಸಿತ್ತು. ಇದರಿಂದಾಗಿ, ಪಕ್ಷಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿರಲಿಲ್ಲ. ಶೇಖ್ ಹಸೀನಾ, ತಮ್ಮ ಹದಿನೈದು ವರ್ಷಗಳ ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಪ್ರಚಾರದ ವೇಳೆ, ಅಲ್ಲಿನ ಪಾರ್ಟಿಗಳು ಆಪಾದಿಸಿದ್ದವು. ಇದನ್ನೂ  ಓದಿ: ಬಿಎನ್‌ಪಿಗೆ ಗೆಲುವು; ಬಾಂಗ್ಲಾ ಪ್ರಧಾನಿ ಹುದ್ದೆಗೆ ತಾರಿಕ್‌ ರೆಹಮಾನ್‌ ಆಯ್ಕೆ – ಮೋದಿ ಅಭಿನಂದನೆ

Share This Article