ನವದೆಹಲಿ: ಮಧ್ಯಪ್ರಾಚ್ಯದ ಘೋರ ಕದನ ಬರೋಬ್ಬರಿ 22ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ಮತ್ತು ಇಸ್ರೇಲ್ (Iran vs Israel) ನಡುವಿನ ಸಮರ ಮತ್ತಷ್ಟು ತೀವ್ರಗೊಂಡಿದೆ. ಈ ಮಧ್ಯೆ ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ (Masoud Pezeshkian) ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
Spoke with President Dr. Masoud Pezeshkian and conveyed Eid and Nowruz greetings. We expressed hope that this festive season brings peace, stability and prosperity to West Asia.
Condemned attacks on critical infrastructure in the region, which threaten regional stability and…
— Narendra Modi (@narendramodi) March 21, 2026
ದೂರವಾಣಿ ಸಂಭಾಷಣೆ ಸಮಯದಲ್ಲಿ ಪ್ರಧಾನಿ ಮೋದಿ ಈದ್ ಉಲ್- ಫಿತ್ರ್ (Ramadan) ಮತ್ತು ಇರಾನ್ ಹೊಸ ವರ್ಷ ನೌರುಜ್ (Nowruz) ಶುಭಾಶಯ ಕೋರಿದರು. ಉಭಯ ನಾಯಕರು ಹಬ್ಬಗಳ ಸಂತೋಷ ಹಂಚಿಕೊಂಡರು, ಮಾತ್ರವಲ್ಲದೇ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಸುದೀರ್ಘವಾಗಿ ಚರ್ಚಿಸಿದರು. ಇದೇ ವೇಳೆ ಮೋದಿ ಅವರು ಇರಾನ್‌ನ ಮೂಲ ಸೌಕರ್ಯಗಳ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ.
ಈ ಮಾಹಿತಿಯನ್ನ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡುತ್ತಾ ಈದ್ ಮತ್ತು ನೌರುಜ್ ಶುಭಾಶಯ ತಿಳಿಸಿದೆ. ಈ ಹಬ್ಬದ ಋತುವು ಪಶ್ಚಿಮ ಏಷ್ಯಾಕ್ಕೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ತರುತ್ತದೆ ಎಂದು ನಾವು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್‌ನ ನಟಾಂಜ್ ಪರಮಾಣು ಸೌಲಭ್ಯದ ಮೇಲೆ ಏರ್‌ಸ್ಟ್ರೈಕ್ – ವಿಕಿರಣ ಸೋರಿಕೆ ಆಗಿಲ್ಲ
ಮುಂದುವರಿದು… ಪಶ್ಚಿಮ ಏಷ್ಯಾದ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ದಾಳಿಗಳು ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಹಾಕುವುದಲ್ಲದೆ, ಜಾಗತಿಕ ಪೂರೈಕೆ ಸರಪಳಿಗಳನ್ನ ತೀವ್ರವಾಗಿ ಅಡ್ಡಿಪಡಿಸುತ್ತವೆ, ಇದು ಜಾಗತಿಕ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಮತ್ತೊಂದು ಪ್ರಮುಖ ವಿಷಯದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ನೌಕಾಯಾನ ಸ್ವಾತಂತ್ರ್ಯವನ್ನ ರಕ್ಷಿಸುವ ಅಗತ್ಯವನ್ನ ಒತ್ತಿ ಹೇಳಿದರು. ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳು ಮುಕ್ತವಾಗಿ ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿರುವುದನ್ನ ಖಚಿತಪಡಿಸಿಕೊಳ್ಳುವುದು ಮತ್ತು ವ್ಯಾಪಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಇರಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಇರಾನ್‌ನ ನಿರಂತರ ಬೆಂಬಲವನ್ನ ಶ್ಲಾಘಿಸಿದೆ ಎಂದು ಕೂಡ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: PublicTV Explainer: ಅತ್ಯಾಧುನಿಕ ರೆಡಾರ್‌ಗಳನ್ನೇ ಕಣ್ತಪ್ಪಿಸೋ ಡ್ಯಾನ್ಸಿಂಗ್ ಮಿಸೈಲ್ – ಏನಿದರ ವಿಶೇಷ?


