ಪಿಜಿ ಆಯುಷ್: ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ -ಕೆಇಎ

Public TV
1 Min Read

ಬೆಂಗಳೂರು:ಸ್ನಾತಕೋತ್ತರ (ಪಿಜಿ) ಆಯುಷ್ (PG AYUSH) ಕೋರ್ಸ್ ಪ್ರವೇಶಕ್ಕೆ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿರುವ ಕಾರಣ ಆನ್‌ಲೈನ್‌ನಲ್ಲಿ ನೋಂದಣಿ, ಅರ್ಜಿ ಸಲ್ಲಿಕೆಗೆ ಡಿ.1ರವರೆಗೆ ಪೋರ್ಟಲ್ ತೆರೆಯಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಪ್ರಸಕ್ತ ಸಾಲಿಗೆ ಪಿಜಿ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ 15 ಪರ್ಸೆಂಟೈಲ್ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಅರ್ಹರಾಗುವ ಎಲ್ಲರಿಗೂ ಅನುಕೂಲ ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಎಂಎಸ್ಸಿ ನರ್ಸಿಂಗ್, ಎಂಪಿಟಿ ಕೋರ್ಸ್ ಅರ್ಜಿ ಸಲ್ಲಿಸಲು ಡಿ.2 ಕೊನೆ ದಿನ: ಕೆಇಎ

 

ಹೊಸದಾಗಿ ಅರ್ಜಿ ಸಲ್ಲಿಸಿದವರ ದಾಖಲೆಗಳ ಪರಿಶೀಲನೆ ಡಿ. 2ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಕೆಇಎ ಕಚೇರಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಮೂಲ ದಾಖಲೆಗಳ ಸಮೇತ ಬರಬೇಕು ಎಂದು ಅವರು ಸಲಹೆ ನೀಡಿದ್ದಾರೆ.  ಇದನ್ನೂ ಓದಿ: 2007ರ ಘಟನೆ ಉಲ್ಲೇಖಿಸಿ ಎಂಜೆಲಾ ಮರ್ಕೆಲ್ ಬಳಿ ಈಗ ಕ್ಷಮೆ ಕೇಳಿದ ಪುಟಿನ್‌

ಮಾಪ್ ಅಪ್ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ ದಾಖಲಿಸಲು ಡಿ.3ರವರೆಗೆ ಅವಕಾಶ ನೀಡಲಾಗಿದೆ. ಅದೇ ದಿನ ಸಂಜೆ 7 ಗಂಟೆಗೆ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಹಾಗೂ ಡಿ.4ರಂದು ಬೆಳಿಗ್ಗೆ 11ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಚಲನ್ ಡೌನ್‌ಲೋಡ್ ಮಾಡಿಕೊಂಡು ಡಿ.6ರೊಳಗೆ ಶುಲ್ಕ ಪಾವತಿಸಬೇಕು. ಕಾಲೇಜುಗಳಿಗೆ ವರದಿ ಮಾಡಿಕೊಳ್ಳಲು ಡಿ.7 ಕೊನೆ ದಿನ ಎಂದು ಅವರು ಹೇಳಿದರು.

ದಿನಾಂಕ ವಿಸ್ತರಣೆ:
ಎಂಬಿಎ, ಎಂಸಿಎ, ಎಂ.ಟೆಕ್ ಕೋರ್ಸ್ ಗಳ ಪ್ರವೇಶಕ್ಕೆ ನಡೆಯುವ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ನ.30ರ ಮಧ್ಯಾಹ್ನ 12 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

Share This Article