ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ: ಕೇಜ್ರಿವಾಲ್

Public TV
1 Min Read

ನವದೆಹಲಿ: ರಾಜಿಂದರ್ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ), ಬಿಜೆಪಿಯನ್ನು ಸೋಲಿಸಿ ಮುಂದೆ ಬಂದಿದೆ. ಈ ಹಿನ್ನೆಲೆ ಗೆಲುವಿನ ಖುಷಿ ಹಂಚಿಕೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿಯ ಕೊಳಕು ರಾಜಕೀಯವನ್ನು ಜನರು ಸೋಲಿಸಿದ್ದಾರೆ ಎಂದು ಕಿಡಿಕಾರಿದರು.

ಎಲ್ಲ 16 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಎಎಪಿ ಅಭ್ಯರ್ಥಿ ದುರ್ಗೇಶ್ ಪಾಠಕ್ ಅವರು ತಮ್ಮ ಪ್ರತಿಸ್ಪರ್ಧಿ ರಾಜೇಶ್ ಭಾಟಿಯಾ(ಬಿಜೆಪಿ) ಅವರನ್ನು 11,000 ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ರಣಬೀರ್ ಸಿಂಗ್ ಹೇಳಿದ್ದಾರೆ.

ವಿಷಯ ತಿಳಿದ ತಕ್ಷಣ ಸಂತೋಷಗೊಂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ರಾಜೇಂದ್ರ ನಗರದ ಜನರಿಗೆ ಹೃತ್ಪೂರ್ವಕ ಧನ್ಯವಾದಗಳು. ದೆಹಲಿಯ ಜನರ ಈ ಅಪಾರ ಪ್ರೀತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನಮಗೆ ಕಷ್ಟಪಟ್ಟು ಕೆಲಸ ಮಾಡಲು ಮತ್ತು ಸೇವೆ ಮಾಡಲು ಸ್ಫೂರ್ತಿ ನೀಡುತ್ತದೆ. ಜನರು ಬಿಜೆಪಿ ಕೊಳಕು ರಾಜಕೀಯವನ್ನು ಸೋಲಿಸಿದರು. ನಮ್ಮ ಒಳ್ಳೆಯ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಧನ್ಯವಾದಗಳು ರಾಜೇಂದ್ರ ನಗರ, ಧನ್ಯವಾದಗಳು ದೆಹಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

ಪಾಠಕ್ ಅವರು ದೊಡ್ಡ ಅಂತರದಲ್ಲಿ ಗೆಲ್ಲುವಿನತ್ತ ಸಾಗುತ್ತಿದ್ದಂತೆ, ಎಎಪಿ ಹಿರಿಯ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಭಿನಂದನಾ ಸಂದೇಶಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *