TRF ಮುನ್ನಡೆಸುತ್ತಿದ್ದ ಪಾಕ್‌ ಉಗ್ರನೇ ಪಹಲ್ಗಾಮ್‌ ನರಮೇಧದ ಮಾಸ್ಟರ್‌ ಮೈಂಡ್‌: ಎನ್‌ಐಎ

2 Min Read

– 1,597 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ಶ್ರೀನಗರ: ಏಪ್ರಿಲ್ 22ರಂದು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ವಿಶೇಷ ಕೋರ್ಟ್‌ಗೆ 1,597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದೆ. ಬಿಡುಗಡೆಯಾದ ಆರೋಪ ಪಟ್ಟಿಯಲ್ಲಿ ಲಷ್ಕರ್‌ನ ಪ್ರಾಕ್ಸಿ ಗುಂಪು ʻದಿ ರೆಸಿಸ್ಟೆನ್ಸ್ ಫ್ರಂಟ್ʼ(TRF) ನಡೆಸುತ್ತಿದ್ದ ಪಾಕ್‌ ಉಗ್ರ ಸಾಜಿದ್ ಜಾಟ್ ಕೃತ್ಯದ ಮುಖ್ಯ ಸಂಚುಕೋರ ಎಂದು ಹೆಸರಿಸಿದೆ.

ಸಾಜಿದ್‌ ಜಾಟ್‌ ಯಾರು?
ಸಾಜಿದ್‌ ಜಾಟ್‌ ಅಲಿಯಾಸ್ ಸೈಫುಲ್ಲಾ ಗಡಿಯಾಚೆಗಿನ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದ, ಲಷ್ಕರೆ-ತೈಬಾ (ಎಲ್‌ಇಟಿ)ದ ಹಿರಿಯ ಕಮಾಂಡರ್ ಕೂಡ ಆಗಿದ್ದ. 26 ಜನರನ್ನ ಬಲಿ ಪಡೆದ ಪಹಲ್ಗಾಮ್‌ ದಾಳಿ ಹೊಣೆಹೊತ್ತ ಟಿಆರ್‌ಎಫ್‌ ಚಟುವಟಿಕೆಗಳನ್ನ ಈತನೇ ನೋಡಿಕೊಳ್ಳುತ್ತಿದ್ದ. ಈ ಪ್ರಕರಣದ ಮುಖ್ಯ ಸಂಚುಕೋರನೂ ಈತನೇ ಎಂದು ಎನ್‌ಐಎ ಆರೋಪ ಪಟ್ಟಿಯಲ್ಲಿ ಹೆಸರಿಸಿದೆ. ಈ ಮೂಲಕ ಪಾಕಿಸ್ತಾನ ನೇರ ಒಳ್ಳಗೊಳ್ಳುವಿಕೆಯನ್ನು ಖಚಿತಪಡಿಸಿದೆ. ಅಲ್ಲದೇ ಪಾಕ್‌ ಹ್ಯಾಂಡ್ಲರ್‌ಗಳ ಸಂಪರ್ಕ, ಹರಿದುಬರುತ್ತಿದ್ದ ಹಣಕಾಸಿನ ಮೂಲಗಳು ಹಾಗೂ ಕಾರ್ಯತಂತ್ರದ ಸೂಚನೆಗಳ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಉಲ್ಲೇಖಿಸಿದೆ. ಇದನ್ನೂ ಓದಿ: Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್‌ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?

ಟಿಆರ್‌ಎಫ್‌ ಹೇಗೆ ಮಾಡುತ್ತೆ?
ಕಾಶ್ಮೀರದಲ್ಲಿ ಸಕ್ರೀಯವಾಗಿರುವ ʻದಿ ರೆಸಿಸ್ಟಂಟ್‌ ಫ್ರಂಟ್‌ʼ ಆಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು ತಿಂಗಳಾನುಗಟ್ಟಲೆ ಕಠಿಣ ತರಬೇತಿ ನೀಡುವುದು, ಬಳಿಕ ಕಣಿವೆ ಪ್ರದೇಶಗಳಲ್ಲಿ ದಾಳಿ ನಡೆಸುವುದು ಇದರ ಕಾರ್ಯತಂತ್ರ. ಒಂದು ವೇಳೆ ದಾಳಿಕೋರರು ಭಾರತೀಯ ಸೇನೆಗೆ ಸಿಕ್ಕಿಬಿದ್ದರೆ ಆತ್ಮಾಹುತಿ ಬಾಂಬ್‌ ಸ್ಫೋಟಿಕೊಳ್ಳುವುದಕ್ಕೂ ತರಬೇತಿ ನೀಡಲಾಗುತ್ತದೆ. ಅದಕ್ಕಾಗಿ ಕಟ್ಟುಮಸ್ತಾದ ಯುವಕರ ತಲೆಗೆ ಮತಾಂಧತೆ ಚಿಂತನೆಗಳನ್ನ ತುಂಬುತ್ತಾರೆ. ಬ್ರೈನ್‌ ವಾಶ್‌ ಮಾಡಿ ತಮ್ಮ ಸಂಘಟನೆಗಳಿಗೆ ಸೇರಿಸಿಕೊಳ್ಳುತ್ತದೆ. ನಿರುದ್ಯೋಗಿಗಳು, ತೀರಾ ಬಡತನ ಕುಟುಂಬದ ಯುವಕರಿಗೆ ಹಣದ ಆಮಿಷ ತೋರಿಸಿ, ನೀನೊಂದು ನಿರ್ದಿಷ್ಟ ಗುರಿ ಸಾಧಿಸಲು ಈ ಭೂಮಿಮೇಲೆ ಹುಟ್ಟಿದ್ದೀಯಾ ಎಂದು ಬ್ರೈನ್‌ ವಾಶ್‌ ಮಾಡುವುದು, ಬಳಿಕ ಅವರಿಗೆ ತರಬೇತಿ ನೀಡಿ ಭಾರತದ ವಿರುದ್ಧವೇ ದಾಳಿಗೆ ನಿಯೋಜಿಸುವುದು ಟಿಆರ್‌ಎಫ್‌ನ ಕೆಲಸ. ಆದ್ರೆ ಇತ್ತೀಚಿನ ದಿನಗಳಲ್ಲಿ ಟಿಆರ್‌ಎಫ್‌ ಆಧುನಿಕ ಶಸ್ತ್ರಾಸ್ತ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ್ದು, ಭದ್ರತಾ ಪಡೆಗಳು ಹಾಗೂ ಸಾಮಾನ್ಯ ಜನರ ಮೇಲಿನ ದಾಳಿಗಾಗಿ ಬಸಳಸುತ್ತಿದೆ. ಇತ್ತೀಚಿನ ಪಹಲ್ಗಾಮ್‌ ದಾಳಿಗೂ ಸಹ ಎಕೆ-47 ಮತ್ತು M4 ರೈಫಲ್‌ಗಳನ್ನ ಬಳಸಲಾಗಿತ್ತು ಅನ್ನೋದು ಗಮನಾರ್ಹ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

ಟಿಆರ್‌ಎಫ್‌ಗೆ ಹಣಕಾಸಿನ ನೆರವು ಹೇಗೆ?
ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಸಂಘಟನೆಗಳು ಜೈಶ್‌ ಎ ಮೊಹಮ್ಮದ್‌ನಿಂದ ಹಣಕಾಸಿನ ನೆರವನ್ನು ಪಡೆಯುತ್ತಿವೆ. ಜೊತೆಗೆ ಭಾರತದ ಮೇಲೆ ಯಾವ ಯಾವ ರೀತಿ ದಾಳಿಗಳನ್ನ ನಡೆಸಬೇಕು ಅನ್ನೋ ರೂಪುರೇಷೆಯೂ ಈ ಸಂಘಟನೆ ಸಿದ್ಧಮಾಡಿಕೊಡುತ್ತದೆ. ಹಿಂದೆಲ್ಲಾ ಗಡಿ ನಿಯಂತ್ರಣ ರೇಖೆ ದಾಟಿ ಬರುತ್ತಿದ್ದ ಉಗ್ರರು, ಗೆರಿಲ್ಲಾ ಯುದ್ಧ ತಂತ್ರಗಳನ್ನು ಬಳಸುತ್ತಿದ್ದರು, ದಾಳಿ ಮಾಡಿ ದಟ್ಟ ಕಾಡುಗಳಲ್ಲಿ ಕಣ್ಮರೆಯಾಗುತ್ತಿದ್ದರು. ಆದ್ರೆ ಉಗ್ರರು ಹೈಬ್ರಿಡ್‌ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಜೊತೆಗೆ ಚೀನಾ ನಿರ್ಮಿತ ಆಪ್‌ಗಳನ್ನ ಬಳಸಿಕೊಂಡು ದಾಳಿಯ ರೂಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಆಪ್‌ಗಳ ಟ್ರ್ಯಾಕಿಂಗ್‌ ಮಾಡೋದು ಕಷ್ಟವಾಗಿರುವುದರಿಂದ ಭಾರತೀಯ ಸೇನೆಗೂ ಇದು ಸವಾಲಾಗಿದೆ. ಇದನ್ನೂ ಓದಿ: Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

Share This Article