ಯುದ್ಧ ಭೀತಿ – ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 10 ದಿನ ಮದರಸಾ ಬಂದ್!

By
1 Min Read

ಇಸ್ಲಾಮಾಬಾದ್: ಪಹಲ್ಗಾಮ್ ಪ್ರವಾಸಿಗರ ದಾಳಿಯ (Pahalgam Terror Attack) ಬಳಿಕ ಯುದ್ಧದ ಭೀತಿಯಲ್ಲಿರುವ ಪಾಕಿಸ್ತಾನವು (Pakistan) ಮುಂಜಾಗ್ರತಾ ಕ್ರಮವಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) 10 ದಿನಗಳ ಕಾಲ ಮದರಸಾ ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ.

- Advertisement -

ಭಾರತವು ಎಲ್ಲಾ ಮದರಸಾಗಳನ್ನು ಗುರಿಯಾಗಿರಿಸಿಕೊಳ್ಳುವ ಭಯವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸರ್ಕಾರವು ಗುರುವಾರ ತಿಳಿಸಿದೆ. ಅಲ್ಲದೇ ಭಾರತ ಶೀಘ್ರದಲ್ಲೇ ಮಿಲಿಟರಿ ಕ್ರಮ ಕೈಗೊಳ್ಳಲು ಉದ್ದೇಶಿಸಿದೆ ಎಂದು ಗುಪ್ತಚರ ಮಾಹಿತಿ ಇದೆ ಎಂದು ಹೇಳಿದೆ. ಇದನ್ನೂ ಓದಿ: ರಕ್ಷಣೆಗೆ ಅಮೆರಿಕ, ಚೀನಾಗೆ ಪಾಕ್ ಮೊರೆ – ಪ್ರತೀಕಾರ ಕಟ್ಟಿಟ್ಟಬುತ್ತಿ: ಭಾರತ ಗುಡುಗು

- Advertisement -

- Advertisement -

ಭಾರತೀಯ ಪಡೆಗಳು ಮದರಸಾಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಭಯೋತ್ಪಾದಕ ತರಬೇತಿ ಕೇಂದ್ರಗಳೆಂದು ದಾಳಿ ಮಾಡಬಹುದು ಎಂದು ಭದ್ರತಾ ಅಧಿಕಾರಿಗಳು ಭಯಪಡುತ್ತಿದ್ದಾರೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಧಾರ್ಮಿಕ ವ್ಯವಹಾರಗಳ ಇಲಾಖೆಯ ನಿರ್ದೇಶಕ ಹಫೀಜ್ ನಜೀರ್ ಅಹ್ಮದ್ ಏಜೆನ್ಸಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

- Advertisement -

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 445 ನೋಂದಾಯಿತ ಮದರಸಾಗಳಿದ್ದು, 26,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನಾವು ಬುಧವಾರ ಸಭೆ ನಡೆಸಿದ್ದು, ಮುಗ್ಧ ಮಕ್ಕಳನ್ನು ಅಪಾಯದಿಂದ ಕಾಪಾಡಲು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತೇವೆ, ಬುಡ ಸಮೇತ ಕಿತ್ತುಹಾಕ್ತೀವಿ: ಅಮಿತ್‌ ಶಾ ಗುಡುಗು

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದು, ಕೇಂದ್ರ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಪಾಕ್ ಪತರುಗುಟ್ಟಿದೆ.

Share This Article