ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

Public TV
2 Min Read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಸೈನಿಕನನ್ನ ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಇಂದು ತನ್ನ ಪಾಕಿಸ್ತಾನಿ ಸಹವರ್ತಿಯನ್ನು ಕೇಳಿದೆ.

ಮೇಜರ್ ಜನರಲ್ ಎಎಸ್ ಪೆಂಧಾರ್ಕರ್ ಘಟನೆ ಕುರಿತು ಮಾಹಿತಿ ನೀಡಿದ್ದು, ಕೆರಾನ್ ಸೆಕ್ಟರ್‌ನಲ್ಲಿ ಬಿಎಟಿ(ಪಾಕ್ ಸೇನೆಯ ಗಡಿ ಕಾರ್ಯಾಚರಣೆ ತಂಡ)ಯ ಸೈನಿಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದನು. ಇದನ್ನು ಎಲ್‍ಒಸಿಯಲ್ಲಿನ ಪಡೆಗಳು ಕಂಡುಹಿಡಿದಿದ್ದು, ಆತನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.

ಮೃತ ಸೈನಿಕನ ಬಳಿಯಿದ್ದ ಗುರುತಿನ ಚೀಟಿಯಿಂದ ಈತ ಒಬ್ಬ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ. ಈತನ ಹೆಸರು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

ಪಾಕ್ ಸೈನಿಕರು ಈ ರೀತಿ ಹೊಂಚು ಹಾಕಿ ಒಳನುಸುಳಲು ಪ್ರಯತ್ನಿಸುತ್ತಾರೆ ಎಂದು ನಾವು ಮೊದಲೇ ಗುರುತಿಸಿದ್ದೆವು. ಅದಕ್ಕೆ ಈ ಬಗ್ಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು. ಈ ಪರಿಣಾಮ ಪಾಕ್ ಸೈನಿಕ ಭಾರತದ ಒಳನುಸುತ್ತಿದ್ದಂತೆ ಆತನನ್ನು ಹತ್ಯೆ ಮಾಡಲಾಯಿತು. ಈ ವೇಳೆ ಒಂದು ಎಕೆ ರೈಫಲ್, ಮದ್ದುಗುಂಡುಗಳು ಮತ್ತು ಏಳು ಗ್ರೆನೇಡ್‍ಗಳೊಂದಿಗೆ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಪಾಕ್ ಎಷ್ಟೇ ಪ್ರಯತ್ನ ಪಟ್ಟರು ಗಡಿಭಾಗದಲ್ಲಿ ಕಣ್ಗಾವಲು ಇನ್ನೂ ಪ್ರಗತಿಯಲ್ಲಿದೆ. ನಾವು ಪಾಕಿಸ್ತಾನ ಸೇನೆಗೆ ಹಾಟ್‍ಲೈನ್ ಸಂಪರ್ಕವನ್ನು ಮಾಡಲಾಗಿದ್ದು, ಹತ್ಯೆಗೀಡಾದ ವ್ಯಕ್ತಿಯ ದೇಹವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ ಎಂದರು.

ಆತನ ಶವವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶದ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಾರ್ಡ್‍ನಲ್ಲಿರುವ ಫೋಟೋದಲ್ಲಿ ಮೃತ ವ್ಯಕ್ತಿ ಪಾಕ್ ಸಶಸ್ತ್ರ ಪಡೆಗಳ ಸಮವಸ್ತ್ರ ಧರಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಎಂದು ಘೋಷಿಸಲಾಗಿತ್ತು. ಆದರೆ ಈ ಪ್ರಯತ್ನದಿಂದ ಆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *