ಆನ್‌ಲೈನ್ ಗೇಮಿಂಗ್ ನಿಷೇಧ – BCCI ಪ್ರಾಯೋಜಕತ್ವದಿಂದ ಹಿಂದೆ ಸರಿದ Dream11

By
1 Min Read

ನವದೆಹಲಿ: ಹಣ ಹೂಡಿಕೆ ಮಾಡಿ ಆಡುವ ಆನ್‌ಲೈನ್ ಗೇಮ್‌ಗಳನ್ನು (Online Gaming) ಕೇಂದ್ರ ಸರ್ಕಾರ (Central Govt) ನಿಷೇಧಿಸಿದ ಬೆನ್ನಲ್ಲೇ ಮನಿ ಗೇಮಿಂಗ್ ಸಂಸ್ಥೆಯಾಗಿರುವ ಡ್ರೀಮ್11 (Dream11) ಬಿಸಿಸಿಐ (BCCI) ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.

- Advertisement -

ಈ ಕುರಿತು ಡ್ರೀಮ್11 ಬಿಸಿಸಿಐಗೆ ಮಾಹಿತಿ ನೀಡಿದ್ದು, ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಸೆ.9ರಿಂದ ಆರಂಭವಾಗಲಿರುವ ಏಷ್ಯಾಕಪ್‌ಗೆ ಬೇರೆ ಹೊಸ ಪ್ರಾಯೋಜಕರ ಅವಶ್ಯತತೆಯಿದೆ.ಇದನ್ನೂ ಓದಿ: ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

- Advertisement -

- Advertisement -

18 ವರ್ಷಗಳ ಹಿಂದೆ ಆರಂಭವಾಗಿದ್ದ ಡ್ರೀಮ್11 ಸಂಸ್ಥೆ 2023ರ ಜುಲೈನಲ್ಲಿ ಬಿಸಿಸಿಐ ಪ್ರಾಯೋಜಕತ್ವವನ್ನು 3 ವರ್ಷದ ಅವಧಿಗೆ ಬರೋಬ್ಬರಿ 358 ಕೋಟಿ ರೂ.ಗೆ ಪಡೆದುಕೊಂಡಿತ್ತು. ಒಪ್ಪಂದದ ಅವಧಿ ಮುಂಬರುವ 2026ರ ಜುಲೈ ತಿಂಗಳವರೆಗೆ ಇದ್ದರೂ ಕೂಡ 1 ವರ್ಷಕ್ಕೂ ಮುಂಚೆ ಸಂಸ್ಥೆ ಪ್ರಾಯೋಜಕತ್ವವನ್ನು ತೊರೆದಿದೆ.

- Advertisement -

ಇನ್ನೂ ಇದು ಕಾನೂನು ವಿಚಾರಕ್ಕೆ ಒಳಪಟ್ಟಿರುವುದರಿಂದ ಡ್ರೀಮ್11 ಸಂಸ್ಥೆ ಅವಧಿಗೂ ಮುನ್ನ ಪ್ರಾಯೋಜತ್ವವನ್ನು ತೊರೆದಿದ್ದರೂ ಕೂಡ ಬಿಸಿಸಿಐ ಯಾವುದೇ ದಂಡ ಪಾವತಿಸಿಕೊಳ್ಳುತ್ತಿಲ್ಲ. ಸಾಮಾನ್ಯವಾಗಿ ಯಾವುದೇ ಸಂಸ್ಥೆಯು ಅವಧಿಗೆ ಮುನ್ನ ಪ್ರಾಯೋಜಕತ್ವ ತೊರೆದರೆ ಭಾರೀ ದಂಡ ಪಾವತಿಸಬೇಕಾಗುತ್ತದೆ.

ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಮಾತನಾಡಿ, ಆನ್‌ಲೈನ್ ಗೇಮಿಂಗ್ ಮಸೂದೆಯ ನಂತರ ಬಿಸಿಸಿಐ ಮತ್ತು ಡ್ರೀಮ್11 ಪರಸ್ಪರ ಸಂಬಂಧವನ್ನು ಸ್ಥಗಿತಗೊಳಿಸುತ್ತಿದ್ದು, ಭವಿಷ್ಯದಲ್ಲಿ ಈ ರೀತಿಯ ಯಾವುದೇ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ, ಇದನ್ನೂ ಓದಿ: ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

Share This Article