1,929 ಗಂಟೆಗಳ ಬಳಿಕ ನಿವೃತ್ತಿ ಹೊಂದಿದ್ದೇನೆ – 2 ವರ್ಷಗಳ ಹಿಂದೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದ ಧೋನಿ

Public TV
2 Min Read

ಮುಂಬೈ: ಎರಡು ವರ್ಷಗಳ ಹಿಂದೆ 2020ರಲ್ಲಿ ಟೀಂ ಇಂಡಿಯಾದ ವಿಶ್ವಕಪ್ ಗೆದ್ದ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಇದೇ ದಿನ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದರು.

2022ರ ಆಗಸ್ಟ್ 15 ರಂದು ರಾತ್ರಿ 7:29 ಗಂಟೆಗೆ ಇನ್‍ಸ್ಟಾಗ್ರಾಮ್‍ನಲ್ಲಿ, ನಿಮ್ಮೆಲ್ಲರ ಪ್ರೀತಿ, ಸಹಕಾರಕ್ಕೆ ಧನ್ಯವಾದಗಳು 1,929 ಗಂಟೆಗಳ ಬಳಿಕ ನನ್ನನ್ನು ನಿವೃತ್ತಿ ಹೊಂದಿದ ಆಟಗಾರ ಎಂದು ಸ್ವೀಕರಿಸಿ ಎಂದು ಧೋನಿ ನಿವೃತ್ತಿಯ ಬಗ್ಗೆ ಘೋಷಿಸಿದ್ದರು. ಇದು ಧೋನಿ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಇದನ್ನೂ ಓದಿ: ನಾವು ಭಾರತೀಯರಾಗಿರುವುದೇ ಹೆಮ್ಮೆ – ಅಮೃತಮಹೋತ್ಸವ ಸಂಭ್ರಮಿಸಿದ ಕ್ರೀಡಾ ತಾರೆಗಳು

2004ರಲ್ಲಿ ಟೀಂ ಇಂಡಿಯಾಗೆ ಕಾಲಿಟ್ಟ ಧೋನಿ ಆ ಬಳಿಕ ತನ್ನ ಆಟದ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿ, ತಂಡದ ನಾಯಕತ್ವದ ಚುಕ್ಕಾಣಿ ಹಿಡಿದು ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಐಸಿಸಿಯ ಮೂರು ಮಾದರಿ ಟ್ರೋಫಿ ಗೆದ್ದ ಭಾರತದ ನಾಯಕ ಎಂಬ ಹೆಗ್ಗಳಿಗೆ ಹೊಂದಿದರು. ಹಿರಿಯ ಆಟಗಾರರಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಿ ತಂಡವನ್ನು ಬಲಿಷ್ಠವಾಗಿ ಕಟ್ಟಿ ಸ್ಟಾರ್ ಆಟಗಾರರ ಬೆಳವಣಿಗೆ ಧೋನಿ ಶ್ರಮಿಸಿದರು. ಧೋನಿ ನಾಯಕರಾಗಿ, ಆಟಗಾರನಾಗಿ ಮತ್ತು ಮಿಂಚಿನ ವಿಕೆಟ್ ಕೀಪಿಂಗ್ ಮೂಲಕ ಎಲ್ಲರ ಮನಗೆದ್ದಿದ್ದರು.

2019ರ ಏಕದಿನ ವಿಶ್ವಕಪ್ ಸೈಮಿಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿ, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ 2020 ಆಗಸ್ಟ್ 15 ರಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದರು. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದರೆ ಐಪಿಎಲ್‍ನಲ್ಲಿ ಮಾತ್ರ ಧೋನಿ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ 15ನೇ ಆವೃತ್ತಿ ಆರಂಭದಲ್ಲಿ ನಾಯಕತ್ವಕ್ಕೆ ಗುಡ್‍ಬೈ ಹೇಳಿದ್ದರು. ಆ ಬಳಿಕ ಜಡೇಜಾ ನಾಯಕರಾಗಿದ್ದರು. ನಂತರ ಟೂರ್ನಿಯ ಅರ್ಧದಲ್ಲಿ ಜಡೇಜಾ ಗಾಯಗೊಂಡು ಹೊರನಡೆದಾಗ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದನ್ನೂ ಓದಿ: ಟೀಂ ಇಂಡಿಯಾದ ಕ್ಯಾಪ್ಟನ್, ಕೋಚ್ ಪದೇ ಪದೇ ಬದಲಾವಣೆ – ಬಿಸಿಸಿಐಗೆ ನೆಟ್ಟಿಗರಿಂದ ಫುಲ್ ಕ್ಲಾಸ್

ಧೋನಿ ಈವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ ಧೋನಿ 10 ಶತಕ, 73 ಅರ್ಧಶತಕ ಸಹಿತ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 98 ಟಿ-20 ಪಂದ್ಯಗಳಿಂದ 2 ಅರ್ಧಶತಕ ಸಹಿತ 1,617 ರನ್ ಕಲೆಹಾಕಿ ಭಾರತ ತಂಡಕ್ಕೆ ಹೊಸ ಹುಮ್ಮಸ್ಸು ತುಂಬಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *