36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರೆಸುಗುರ್ರಂ ಬೆಡಗಿ

Public TV
1 Min Read

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟಿ-ಗಾಯಕಿ ಶ್ರುತಿ ಹಾಸನ್ ಶುಕ್ರವಾರ ತಮ್ಮ 36 ವರ್ಷಗಳನ್ನು ಪೂರೈಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ತಮ್ಮ ಮೇಲೆ ಇಟ್ಟಿರುವ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹುಟ್ಟು ಹಬ್ಬದ ಕುರಿತು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ತಮ್ಮ ಅಮೂಲ್ಯ ಸಮಯವನ್ನು ನನಗೆ ನೀಡಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ನಾನೂ ನಿಮಗೆ ಎಷ್ಟು ಕೃತಜ್ಞನಾಗಿದ್ದೇನೆಂದು ಹೇಳಲು ಪದಗಳೇ ಇಲ್ಲ. ನನ್ನ ಜನ್ಮದಿನದಂದು ನನಗೆ ಇಷ್ಟೋಂದು ಪ್ರೀತಿ ಸಿಗುತ್ತಾ ಇದೆ. ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿ ನೋಡಿದರೆ ಜನ್ಮ ದಿನದ ಆಚರಣೆಯಂತೆಯೇ ಭಾಸವಾಗುತ್ತದೆ ಎಂದರು. ಇದನ್ನೂ ಓದಿ: ಬೆಂಗಾಲಿ ಸಂಪ್ರದಾಯ ಮದುವೆಯ ಫೋಟೋ ಶೇರ್ ಮಾಡಿದ ಮೌನಿ ರಾಯ್

 

View this post on Instagram

 

A post shared by Shruti Haasan (@shrutzhaasan)

ನಾನು ಯಾವತ್ತು ವಾಸ್ತವತೆಯನ್ನು ಬಯಸಿದವಳು ಹಾಗೂ ವಾಸ್ತವದಿಂದ ನಾನು ಸುತ್ತುವರೆದಿದ್ದೇನೆ. ನಾನೂ ಯಾವತ್ತು ಪ್ರಜ್ಞಾವಂತಳಾಗಿ ವಾಸ್ತವತೆಯನ್ನು ಸ್ವೀಕರಿಸಿದ್ದೇನೆ. ಪ್ರತಿಯೊಬ್ಬರಿಂದಲೂ ಅದು ವೈಯಕ್ತಿಕವಾಗಿ ಹಾಗೂ ಆನ್‍ಲೈನ್ ಜಗತ್ತಿನಲ್ಲಾಗಿರಬಹುದು. ನಾನೂ ಅದನ್ನು ಕಲಿತ್ತಿದ್ದೇನೆ. ಅದಕ್ಕೆ ನಾನು ಯಾವತ್ತಿಗೂ ಚಿರಋಣಿ. ಪ್ರೀತಿ ಯಾವತ್ತಿಗೂ ಜೀವನಕ್ಕೆ ದಾರಿ ಮಾಡಿಕೊಡುತ್ತದೆ ಅಂತ ನನ್ನ ನಂಬಿಕೆ. ಈ ಪ್ರೀತಿಯನ್ನು ತೋರಿಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಶಿರ್ಷಿಕೆ ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಗಟ್ಟಿಮೇಳ ಸೀರಿಯಲ್ ಖ್ಯಾತಿಯ ನಟ ರಕ್ಷಿತ್ ಆ್ಯಂಡ್ ಗ್ಯಾಂಗ್‍ನಿಂದ ರಂಪಾಟ

ಫೋಟೋದಲ್ಲಿ ಶೃತಿಯವರು ಅಭಿಮಾನಿಗಳಿಗೆ ಕಿಸ್ ಮಾಡುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಪ್ಲಾಟಿನಂ ಮಿಶ್ರಿತ ಚೈನ್ ಮತ್ತು ಕಪ್ಪು ಬಣ್ಣದ ಉಡುಪನ್ನು ತೊಟ್ಟಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *