ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

By
1 Min Read

ಮುಂಬೈ: ಆಮ್ಲೆಟ್ ಸೀದು ಹೋಗಿದೆ ಎಂದ ಗ್ರಾಹಕನಿಗೆ ಹೋಟೆಲ್ ಮಾಲೀಕ ಬಿಸಿ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ವಿನೋದ್ ರಾಥೋಡ್(48) ಬಂಧಿತ ಆರೋಪಿಯಾಗಿದ್ದಾನೆ. ಗಾಯಾಳು ಸಂದೀಪ್ ಸಾಯರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿನೋದ್ ರಸ್ತೆ ಬದಿಯ ಸಣ್ಣ ಹೋಟೆಲ್‍ನಲ್ಲಿ ಆಮ್ಲೆಟ್ ಮಾರಾಟ ಮಾಡುತ್ತಿದ್ದನು. ಈತ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ.

ಸಯಾರೆ ಸಮೀಪದ ರೈಲ್ವೇ ನಿಲ್ದಾಣ ಸಮೀಪದ ಹೋಟೆಲ್‍ವೊಂದರಲ್ಲಿ ಸಂದೀಪ್ ಸಾಯರೆ 40 ರೂ. ಬೆಲೆಯ ಆಮ್ಲೆಟ್ ಆರ್ಡರ್ ಮಾಡಿದ್ದನು. ಆದರೆ ಆ ಅಂಗಡಿಯವನು ಕೊಟ್ಟ ಆಮ್ಲೆಟ್ ಸುಟ್ಟು ಹೋಗಿದ್ದರಿಂದ ಅದರ ಬದಲಾಗಿ ಬೇರೆ ಆಮ್ಲೆಟ್ ನೀಡುವಂತೆ ಆತ ಒತ್ತಾಯಿಸಿದ್ದ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ನಡೆದಿತ್ತು. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

ನಂತರ ಆ ಅಂಗಡಿಯ ಮಾಲೀಕ ಸಂದೀಪ್ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ. ಸಂದೀಪ್ ರಾಥೋಡ್ ಸಾಯರೆಗೆ ಹೊಡೆದಿದ್ದಕ್ಕಾಗಿ ಐಪಿಸಿ ಸೆಕ್ಷನ್ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ. ಸಂದೀಪ್‍ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಮಗನನ್ನ ನೀರಿನ ಸಂಪ್‍ಗೆ ಎಸೆದು ತಂದೆ ಆತ್ಮಹತ್ಯೆ

Share This Article
Leave a Comment

Leave a Reply

Your email address will not be published. Required fields are marked *