ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

Public TV
1 Min Read

ಗೇನಿದ್ದರೂ ಸೋಶಿಯಲ್‌ ಮೀಡಿಯಾದ್ದೇ ಹವಾ. ರೀಲ್ಸ್‌ಗಾಗಿ ಯುವಕ- ಯುವತಿಯರು ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್‌ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಆದರೆ ಈ ರೀತಿಯ ಸಾಹಸಕ್ಕೆ ಯಾರೂ ಹಾಕಬೇಡಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ವೀಡಿಯೋದಲ್ಲಿ ಏನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್‌ ಚಾಲನೆ ಮಾಡಿದ್ದಾನೆ. ಇದನ್ನೂ ಓದಿ: ಹರಿಯಾಣದಲ್ಲಿ ಹಳಿತಪ್ಪಿದ ಗೂಡ್ಸ್‌ರೈಲು – ಕಂಟೈನರ್ ಮಗುಚಿ ರೈಲು ಸಂಚಾರಕ್ಕೆ ಅಡ್ಡಿ

ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್‌ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ. ಒಟ್ಟಿನಲ್ಲಿ ಯುವಕ ಸೇಫ್‌ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

ಸದ್ಯ ಈ ವೀಡಿಯೋವನ್ನು @TheFigen_ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ʼನೀವು ಗೂಗಲ್‌ ಮ್ಯಾಪ್‌ ಅನ್ನೇ ಜಾಸ್ತಿ ಅವಲಂಬಿಸಿದಾಗʼ ಎಂದು ತಮಾಷೆಯಾಗಿ ಬರೆದುಕೊಳ್ಳಲಾಗಿದೆ. ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬಳಕೆದಾರರು, ಸ್ಕೂಟರ್ ನಿಲ್ಲಲಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಮೂರನೇ ಬಳಕೆದಾರರು ಬರೆದಿದ್ದಾರೆ – ಇದು ತಮಾಷೆ ಮತ್ತು ಗಂಭೀರವಾಗಿದೆ, ಇದು ನಿಜವಾಗಿಯೂ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

Share This Article