ಪೊಲೀಸರನ್ನೇ ಕಳ್ಳರೆಂದು ಭಾವಿಸಿ ಗೂಸಾ ಕೊಟ್ಟ ಗ್ರಾಮಸ್ಥರು

Public TV
1 Min Read

ಭುವನೇಶ್ವರ: ಗಾಂಜಾ ಕಳ್ಳಸಾಗಣಿಕೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನೇ ಕಳ್ಳರೆಂದು ಭಾವಿಸಿ ಗ್ರಾಮಸ್ಥರು ಥಳಿಸಿರುವ ಘಟನೆ ಒಡಿಶಾದ ಕೊರಾಪುಟ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಮೇ 14ರ ಶನಿವಾರದಂದು ಕೋರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದ ಮಚ್ಕುಂಡ್ ಪೊಲೀಸ್ ವ್ಯಾಪ್ತಿಯ ಮತಿಖಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯ ಉಡುಪಿನಲ್ಲಿದ್ದ ಪೊಲೀಸ್ ತಂಡವನ್ನು ಕಳ್ಳರೆಂದು ಭಾವಿಸಿ ಗ್ರಾಮಸ್ಥರ ಗುಂಪು ಹಲ್ಲೆ ನಡೆಸಿದೆ. ಆದರೆ ವಾಸ್ತವ ಹೇಳಬೇಕೆಂದರೆ ಗಾಂಜಾ ಕಳ್ಳಸಾಗಣಿಕೆ ಮೇಲೆ ದಾಳಿ ನಡೆಸಲು ಅಧಿಕಾರಿಗಳು ಅಲ್ಲಿಗೆ ಹೋಗಿದ್ದರು.  ಇದನ್ನೂ ಓದಿ :  ತಿಂಗಳ ಮುತ್ತು: ರಣಬೀರ್ ಕಪೂರ್, ಆಲಿಯಾ ಭಟ್ ಕಿಸ್ಮತ್

ಸ್ಥಳೀಯರಿಂದ ಈ ಪ್ರದೇಶದಲ್ಲಿ ಗಾಂಜಾ ಕಳ್ಳಸಾಗಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ನೆರೆಯ ಮಲ್ಕಂಗಿರಿ ಜಿಲ್ಲೆಯ ಸುಮಾರು 30 ಪೊಲೀಸರು ಮಟಿಕಲ್ ಗ್ರಾಮದಲ್ಲಿ ದಾಳಿ ನಡೆಸಲು ಬಂದಿದ್ದರು. ಆದರೆ, ಪೊಲೀಸರನ್ನೇ ದರೋಡೆಕೋರರೆಂದು ಭಾವಿಸಿ ಗ್ರಾಮಸ್ಥರು ಲಾಠಿ ಹಾಗೂ ಹರಿತವಾದ ಆಯುಧಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಲವಾರು ಪೊಲೀಸರಿಗೆ ಗಾಯಗೊಂಡಿದ್ದು, ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ಓರ್ವ ಪೊಲೀಸರನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ.

ಸಾಮಾನ್ಯವಾಗಿ ಈ ಸೀಸನ್‍ನಲ್ಲಿ ಗ್ರಾಮದಲ್ಲಿರುವ ಗಂಡಸರು ರಾತ್ರಿ ವೇಳೆ ಗೋಡಂಬಿ ಗಿಡಗಳಿಗೆ ಕಾವಲು ಕಾಯಲು ಕಾಡಿಗೆ ಹೋಗುತ್ತಾರೆ. ಆದರೆ ಶುಕ್ರವಾರ ರಾತ್ರಿ 9.30ರ ಸುಮಾರಿಗೆ 40-50 ಪೊಲೀಸರು ನಾವು ಇಲ್ಲದೇ ಇರುವ ಹೊತ್ತಿನಲ್ಲಿ ಗ್ರಾಮಕ್ಕೆ ಬಂದು, ನಮ್ಮ ಮನೆಗಳಿಗೆ ನುಗ್ಗಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದ್ದಾರೆ. ಇದನ್ನೂ ಓದಿ : ಹಿಂದಿ ಅಥವಾ ಯಾವುದೋ ಭಾಷೆಯನ್ನು ಹೇರುವ ಪ್ರಶ್ನೆಯೇ ಇಲ್ಲ: TN ರಾಜ್ಯಪಾಲ ಆರ್.ಎನ್.ರವಿ

ಕೋರಾಪುಟ್ ಪೊಲೀಸ್ ಸೂಪರಿಂಟೆಂಡೆಂಟ್ ಅವರ ಆದೇಶದ ಮೇರೆಗೆ ತಪಾಸಣೆ ನಡೆಸಲು ಮನೆಗಳಿಗೆ ಬಂದಿದ್ದರು. ಈ ವೇಳೆ ಮನೆಯೊಂದರಲ್ಲಿ ಸುಮಾರು 150 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *