ಈಗ ನಟ ಭುವನ್ ವಿರುದ್ಧ ಪ್ರಥಮ್ ದೂರು!

Public TV
1 Min Read

ಬೆಂಗಳೂರು: ನಟ ಭುವನ್ ತೊಡೆಗೆ ಕಚ್ಚಿದ ಆರೋಪದ ಮೇಲೆ ಕೇಸ್ ದಾಖಲಾಗಿ ಪ್ರಥಮ್ ಜಾಮೀನು ಪಡೆದ್ದಾಯ್ತು. ಆದ್ರೆ ಈಗ ಭುವನ್ ವಿರುದ್ಧ ಕೇಸ್ ದಾಖಲಾಗಿದೆ.

ಧಾರಾವಾಹಿಯ ಸಹನಟ ಭುವನ್ ನನ್ನ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ ಬೆದರಿಕೆ ಕೂಡ ಹಾಕಿದ್ದಾನೆ. ಹೀಗಾಗಿ ಭುವನ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.

22ರ ಸಂಜೆ ಚಿತ್ರೀಕರಣ ಮುಗಿಸಿ ಮನೆ ಕಡೆ ಹೊರಟಿದ್ದ ನನ್ನನ್ನು ತಡೆದ ಭುವನ್, ಧಾರಾವಾಹಿಯ ಶೂಟಿಂಗ್‍ಗೆ ಇವತ್ತು ಕೊನೆ ದಿನ ಆದ್ರೆ ಈ ಭೂಮಿ ಮೇಲೆ ಇವತ್ತೇ ನಿನಗೆ ಕೊನೆ ದಿನ ಅನ್ನುತ್ತಾ, ನನ್ನನ್ನು ತಳ್ಳಿ ಮುಷ್ಟಿಯಿಂದ ಕುತ್ತಿಗೆಗೆ ಗುದ್ದಿದ್ದಾನೆ. ನಂತ್ರ ಕುತ್ತಿಗೆ ಹಿಸುಕಿದ್ದಾನೆ. ಅಲ್ಲದೇ ಎಲ್ಲಿ ಹೋಯ್ತ್ಯೊ ನನ್ನ ಮಗನೇ. ನೀನು ಎಲ್ಲಿ ಹೋದ್ರು ಬಿಡಲ್ಲ.. ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಅಂತ ಪ್ರಥಮ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಭುವನ್ ತೊಡೆಯನ್ನು ಕಚ್ಚಿದ ಬಿಗ್‍ಬಾಸ್ ವಿನ್ನರ್ ಪ್ರಥಮ್

ಭುವನ್ ವಿರುದ್ಧ ಐಪಿಸಿ ಸೆಕ್ಷನ್ 323, 341, 504, 506 ಅಡಿ ತಲಘಟ್ಟಪುರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಹಲ್ಲೆಯನ್ನು ದೃಢಪಡಿಸುವಂತಹ ಯಾವುದೇ ಸಾಕ್ಷ್ಯಗಳು ಪ್ರಥಮ್ ಬಳಿ ಇಲ್ಲ. ಆದ್ರೂ ಪ್ರಥಮ್ ಹೇಳಿಕೆ ಆಧರಿಸಿ ಭುವನ್ ವಿರುದ್ಧ ಕೇಸ್ ಮಾಡಿದ್ದೇವೆ ಅಂತ ದಕ್ಷಿಣ ವಲಯ ಡಿಸಿಪಿ ಶರಣಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಇಬ್ಬರ ನಡುವಿನ ಮನಸ್ತಾಪ ಇಬ್ಬರನ್ನೂ ಪೊಲೀಸ್ ಠಾಣೆಯ ಮೆಟ್ಟಿಲು ತನಕ ಹತ್ತಿಸಿದೆ. ಇಬ್ಬರ ನಡುವಿನ ಕಚ್ಚಾಟ ಸದ್ಯಕ್ಕೆ ನಿಲ್ಲೊ ಲಕ್ಷಣಗಳು ಕಾಣ್ತಿಲ್ಲ.

ಇದನ್ನೂ ಓದಿ: ನಟ ಭುವನ್ ತೊಡೆ ಕಚ್ಚಿದ ಪ್ರಥಮ್- ಕೋರ್ಟ್‍ಗೆ ಒಳ್ಳೆ ಹುಡ್ಗ ಹಾಜರು

Share This Article
Leave a Comment

Leave a Reply

Your email address will not be published. Required fields are marked *