ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್

Public TV
2 Min Read

ನ್ನಡ ಕಿರುತೆರೆ ಮತ್ತು ಹಿರಿತೆರೆ ನಿರ್ದೇಶಕ ಅರವಿಂದ್ ಕೌಶಿಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದಾರೆ. ಕಿರುತೆರೆ ನಿರ್ಮಾಪಕ ರೋಹಿತ್ ಎನ್ನುವವರಿಗೆ 73 ಲಕ್ಷ ರೂಪಾಯಿ ವಂಚಿಸಿದ ಕಾರಣಕ್ಕಾಗಿ ಅವರ ವಿರುದ್ಧ ವೈಯ್ಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ನಿನ್ನೆ ರಾತ್ರಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯ್ಯಾಲಿ ಕಾವಲ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ : ವಾಮನ ತೆಕ್ಕೆಗೆ ತುಳುನಾಡ ಬೆಡಗಿ ರಚನಾ ರೈ

2020ರಲ್ಲೇ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ ಸೇರಿದಂತೆ ಹಲವರು ವಿರುದ್ಧ ರೋಹಿತ್ ದೂರು ಸಲ್ಲಿಸಿದ್ದರು. ಈ ದೂರಿಗೆ ಸಂಬಂಧ ಪಟ್ಟಂತೆ ಇದೀಗ ಪೊಲೀಸ್ ನವರು ನಿರ್ದೇಶಕ ಅರವಿಂದ್ ಅವರನ್ನು ಬಂಧಿಸಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ. ಇದನ್ನೂ ಓದಿ : ಡಾ.ರಾಜ್ ಕುಟುಂಬದೊಂದಿಗೆ ಮತ್ತೊಂದು ಸಿನಿಮಾ ಘೋಷಣೆ ಮಾಡಿದ ಜೇಮ್ಸ್ ನಿರ್ಮಾಪಕ

ಈ ಕುರಿತು ದೂರಿನಲ್ಲಿ ಉಲ್ಲೇಖಿಸಿರುವ ರೋಹಿತ್, 28 ಮೇ 2018 ರಿಂದ ‘ಕಮಲಿ’ ಧಾರಾವಾಹಿ ಶುರುವಾಯಿತು. ಮೊದ ಮೊದಲು ಧಾರಾವಾಹಿಯಲ್ಲಿ ನಿರ್ಮಾಪಕರು ರೋಹಿತ್ ಎಂದು ತೋರಿಸಲಾಗುತ್ತಿತ್ತು. ಆ ನಂತರ ನನ್ನ ಹೆಸರನ್ನೇ ಕಿತ್ತು ಹಾಕಲಾಯಿತು. ಅಷ್ಟರಲ್ಲಿ ನಾನು ಆ ಧಾರಾವಾಹಿಗಾಗಿ 73 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೆ. ನನ್ನ ಹೆಸರು ತಗೆದು ಹಾಕಿದ್ದಕ್ಕೆ ಕೇಳಿದೆ. ಅದಕ್ಕೆ ಅವರು ಸಕಾರಣ ಕೊಡಲಿಲ್ಲ. ಈವರೆಗೂ ಲಾಭಾಂಶದಲ್ಲಿ ಒಂದು ಪೈಸೆಯನ್ನೂ ನನಗೆ ಕೊಟ್ಟಿಲ್ಲ. ಹಣ ಕೇಳಿದರೆ ಕೊಡು‍ತ್ತಿಲ್ಲ. ಹೀಗಾಗಿ ನನಗೆ ವಂಚನೆ ಆಗಿದೆ ಎಂದು ದೂರಿನಲ್ಲಿ ಬರೆದಿದ್ದಾರೆ ರೋಹಿತ್. ಇದನ್ನೂ ಓದಿ: ಕೆಜಿಎಫ್-2 ಸಿನಿಮಾ ವೀಕ್ಷಿಸಿದ ಇಳಯರಾಜ, ಕಮಲ್ ಹಾಸನ್

ಆದರೆ, ಅರವಿಂದ್ ಕೌಶಿಕ್ ಹೇಳುವುದೇ ಬೇರೆ. ಗೆಳೆಯರೊಟ್ಟಿಗೆ ಸೇರಿ ನಾನು ನಮ್ಮದೇ ಸತ್ವ ಮೀಡಿಯಾ ಸಂಸ್ಥೆಯನ್ನು ಹುಟ್ಟು ಹಾಕಿದ್ದೆವು. ಆ ಸಂಸ್ಥೆಗೆ ವಾಹಿನಿಯವರು ಧಾರಾವಾಹಿ ನಿರ್ಮಿಸಲು ಒಪ್ಪಿಗೆ ಕೊಟ್ಟಿದ್ದರು. ಬಂಡವಾಳ ಹೂಡುವವರು ಬೇಕಾಗಿದ್ದರಿಂದ ರೋಹಿತ್ ಅವರೇ ನಮ್ಮನ್ನು ಸಂಪರ್ಕಿಸಿದರು. ಫೈನಾನ್ಸ್ ಮಾಡಿದ್ದರು. ತಮ್ಮ ಹೆಸರಿನ ಮುಂದೆ ನಿರ್ಮಾಪಕರು ಎಂದು ಹಾಕುವಂತೆ ಕೇಳಿದರು. ಅದಕ್ಕೆ ವಾಹಿನಿಯವರು ಒಪ್ಪದೇ ಇರುವ ಕಾರಣಕ್ಕಾಗಿ ನಾವು ಯಾರ ಹೆಸರನ್ನೂ ಹಾಕಲಿಲ್ಲ. ರೋಹಿತ್ ಈ ಧಾರಾವಾಹಿಗೆ ತಾನೇ ನಿರ್ಮಾಪಕ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ನನ್ನೊಂದಿಗೆ ಹಣ ಹಾಕಿದವರು ನನಗೆ ಪ್ರಶ್ನೆ ಮಾಡಿದರು. ಹಾಗಾಗಿ ಅವರ ಹೆಸರನ್ನು ತಗೆದುಹಾಕಲಾಯಿತು. ನಂತರ ಧಾರಾವಾಹಿ ನಿಂತಿತು. ತಮಗೆ ಹಣ ವಾಪಸ್ಸು ಬರುವುದಿಲ್ಲ ಎಂದು ತಮಗೆ ತಾವೇ ಅಂದುಕೊಂಡು ಹೀಗೆ ದೂರು ನೀಡಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ ಎಂದಿದ್ದಾರೆ ಅರವಿಂದ ಕೌಶಿಕ್.

Share This Article
Leave a Comment

Leave a Reply

Your email address will not be published. Required fields are marked *