ಉಳಿದವರಿಗೆ ಕಡಿಮೆ ನೀಡಿ, ನನಗೆ ಮಾತ್ರ ಜಾಸ್ತಿ ನಗದು ಬಹುಮಾನ ಯಾಕೆ: ರಾಹುಲ್ ದ್ರಾವಿಡ್

Public TV
1 Min Read

ಬೆಂಗಳೂರು: ಟೀಂ ಇಂಡಿಯಾ ಅಂಡರ್ 19 ತಂಡ ವಿಶ್ವಕಪ್ ಗೆದ್ದ ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನೀಡಿದ ನಗದು ಬಹುಮಾನದಲ್ಲಿನ ತಾರತಮ್ಯಕ್ಕೆ ಕೋಚ್ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಡರ್ 19 ತಂಡ ಐಸಿಸಿ ವಿಶ್ವಕಪ್ ಮೂಡಿಗೆರಿಸಿಕೊಳ್ಳುವ ಮೂಲಕ ವಿಶ್ವದ ಕ್ರಿಕೆಟ್ ಗಮನ ಸೆಳೆದಿತ್ತು. ತಂಡದ ಸಾಧನೆಗೆ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ., ತಂಡದ ಸಿಬ್ಬಂದಿಗೆ 20 ಲಕ್ಷ ರೂ., ಆಟಗಾರಿಗೆ ತಲಾ 30 ಲಕ್ಷ ರೂ. ಬಹುಮಾನ ಘೋಷಿಸಿತ್ತು.  ಇದನ್ನೂ ಓದಿ: ಯುವಿಪಾಜಿ ನನಗೆ ತುಂಬಾ ಸಹಾಯ ಮಾಡಿದ್ದಾರೆ: ಶುಬ್‍ಮನ್ ಗಿಲ್

ಪ್ರಸ್ತುತ ಬಿಸಿಸಿಐನ ಈ ನಡೆ ಬಗ್ಗೆ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆದ್ದಿರುವುದರ ಹಿಂದೆ ತಂಡದ ಎಲ್ಲ ಸಿಬ್ಬಂದಿಯ ಶ್ರಮವಿದೆ. ಎಲ್ಲ ಸಿಬ್ಬಂದಿಗೆ ಒಂದೇ ರೀತಿಯ ಬಹುಮಾನ ನೀಡಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ಸುದ್ದಿಯನ್ನು ಪ್ರಕಟಿಸಿದೆ. ಇದನ್ನೂ ಓದಿ: 2003ರ ಸೋಲಿಗೆ ಸೇಡು ತೀರಿಸಿಕೊಂಡ ದ್ರಾವಿಡ್!

ಅಲ್ಲದೇ ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ್ದ ಅವರು ತಂಡದ ಗೆಲುವು ಎಲ್ಲರ ಪರಿಶ್ರಮದಿಂದ ಸಾಧ್ಯವಾಯಿತು. ಆದರೆ ಈ ವೇಳೆ ನನ್ನನ್ನು ಮಾತ್ರ ಹೈಲೆಟ್ ಮಾಡಲಾಗುತ್ತಿದೆ. ಇದರಿಂದ ಸ್ಪಲ್ಪ ಮುಜುಗರ ಉಂಟಾಗುತ್ತದೆ. ಆದರೆ ತಂಡದ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ವೇಳೆ ಅವರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಆದರೆ ನಾವೆಲ್ಲರೂ ಈ ಮಕ್ಕಳಿಗೆ ಉತ್ತಮ ಬೆಂಬಲ ನೀಡಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

ಈ ಹಿಂದೆ ಭಾರತ `ಎ’ ತಂಡದ ಕೋಚ್ ಆಗಿದ್ದ ರಾಹುಲ್ ಅವರು ಮೂರು ವರ್ಷಗಳ ಕಾಲ ವಾರ್ಷಿಕವಾಗಿ 4 ಕೋಟಿ ರೂ. ಪಡೆಯುತ್ತಿದ್ದರು. ಇದನ್ನೂ ಓದಿ: ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಬಿಸಿಸಿಐ ನಗದು ಬಹುಮಾನ ಘೋಷಣೆ

Share This Article
Leave a Comment

Leave a Reply

Your email address will not be published. Required fields are marked *