14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ನೋಕಿಯಾ

1 Min Read

ಹೆಲ್ಸಿಂಕಿ: ಒಂದು ಕಾಲದಲ್ಲಿ ವಿಶ್ವದ ನಂಬರ್‌ 1 ಫೋನ್‌ ತಯಾರಕಾ ಕಂಪನಿ ಫಿನ್ಲೆಂಡ್‌(Finland) ಮೂಲದ ನೋಕಿಯಾ (Nokia) 14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ.

ನೋಕಿಯಾ ತನ್ನ ಜಾಗತಿಕ ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ.20 ರಷ್ಟು ಕಡಿಮೆ ಮಾಡಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ವಿಶ್ವಾದ್ಯಂತ 74 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಭಾರತದಲ್ಲೇ (India) ಸುಮಾರು 17 ಸಾವಿರ ನೌಕರರಿದ್ದಾರೆ.

ನೋಕಿಯಾದ ಭಾರತದ ಕಾರ್ಯಕ್ಷಮತೆ ಕುಸಿತದಲ್ಲಿದೆ. 2025 ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಮಾರಾಟ ಆದಾಯ ವರ್ಷದಿಂದ ವರ್ಷಕ್ಕೆ 15% ರಷ್ಟು ಕುಸಿದು 393 ಮಿಲಿಯನ್ ಯುರೋಗಳಿಗೆ (4,290 ಕೋಟಿ ರೂ.) ತಲುಪಿದೆ. ಕಳೆದ ವರ್ಷ ಈ ಅವಧಿಯಲ್ಲಿ ಭಾರತದ ನಿವ್ವಳ ಮಾರಾಟ ಆದಾಯ 463 ಮಿಲಿಯನ್ ಯುರೋ(5,000 ಕೋಟಿ ರೂ.) ದಾಖಲಿಸಿತ್ತು. ಇದನ್ನೂ ಓದಿ:  ಆಕ್ರಮಿಸಿಕೊಳ್ತೇನೆ, ಇಲ್ಲವೇ ಸ್ವತಂತ್ರಗೊಳಿಸುತ್ತೇನೆ – ವೆನೆಜುವೆಲಾ, ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ಟ್ರಂಪ್‌ ಕಣ್ಣು

ನೋಕಿಯಾ ತನ್ನ ಭಾರತದ ನಾಯಕತ್ವದಲ್ಲಿ ಬದಲಾವಣೆ ಮಾಡಿದೆ. ಸಮರ್ ಮಿತ್ತಲ್ ಅವರನ್ನು ಏಪ್ರಿಲ್ 1, 2026 ರಿಂದ ಭಾರತ ಬಿಸಿನೆಸ್ ಲೀಡರ್ ಆಗಿ ಮತ್ತು ವಿಭಾ ಮೆಹ್ರಾ ಅವರನ್ನು ಭಾರತ ಮ್ಯಾನೇಜರ್ ಆಗಿ ನೇಮಿಸಲಾಯಿತು.

2018 ರಲ್ಲಿ ಕಂಪನಿಯು ಸುಮಾರು 1.03 ಲಕ್ಷ ಉದ್ಯೋಗಿಗಳನ್ನು ಹೊಂದಿತ್ತು. ಕಂಪನಿಯು ಯುರೋಪ್‌ನಲ್ಲಿ ಹೆಚ್ಚುವರಿ ಉದ್ಯೋಗ ಕಡಿತಕ್ಕೆ ಯೋಜಿಸುತ್ತಿದೆ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ, ಗ್ರೀಸ್, ಇಟಲಿ, ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿರುವ ತನ್ನ ತಂಡಗಳ ಸಂಖ್ಯೆಯನ್ನು ಕಡಿತ ಮಾಡುವ ಸಾಧ್ಯತೆಯಿದೆ.

ನೋಕಿಯಾದ ಟೆಲಿಕಾಂ ಪ್ರತಿಸ್ಪರ್ಧಿ ಎರಿಕ್ಸನ್ ಕೂಡ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಕಂಪನಿಯು ಕಳೆದ ವರ್ಷ ಸುಮಾರು 5 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ್ದು ಮತ್ತಷ್ಟು ಸಂಖ್ಯೆ ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ.

Share This Article