ಇನ್-ಸ್ಟಂಟ್ ಡೆಲಿವರಿ ಇಲ್ಲ: 1,300 ಫುಡ್ ಡೆಲಿವರಿ ಬಾಯ್‍ಗಳಿಗೆ ದಂಡ

Public TV
1 Min Read

ಮುಂಬೈ: ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದ್ದಕ್ಕಾಗಿ ಮುಂಬೈ ಪೊಲೀಸರು ಸುಮಾರು ಹದಿನೈದು ದಿನಗಳಲ್ಲಿ 1,300ಕ್ಕೂ ಹೆಚ್ಚು ಡೆಲಿವರಿ ಬಾಯ್‍ಗಳಿಗೆ ದಂಡ ವಿಧಿಸಿದ್ದಾರೆ.

ಇನ್‍ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಪೊಲೀಸರು, ದಯವಿಟ್ಟು ‘ಇನ್-ಸ್ಟಂಟ್’ ಡೆಲಿವರಿ ಬೇಡ! ಏಪ್ರಿಲ್ 5 ರಿಂದ 18 ರ ನಡುವೆ ಟ್ರಾಫಿಕ್ ನಿಯಮಗಳನ್ನು ನಿರ್ಲಕ್ಷಿಸಿ ಸವಾರಿ ಮಾಡಿದ್ದ 1,366 ಡೆಲಿವರಿ ರೈಡರ್‌ಗಳಿಗೆ ದಂಡ ವಿಧಿಸಲಾಗಿದೆ. ದಯವಿಟ್ಟು ಗಮನಿಸಿ, ಆಹಾರಕ್ಕಾಗಿ ಕಾಯಬಹುದು ಆದರೆ ಜೀವನ ಅದೇ ರೀತಿ ಇರುವುದಿಲ್ಲ ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಸೈನಿಕರಿಗಾಗಿ ವೈದ್ಯಕೀಯ ಸಲಕರಣೆ ರವಾನೆ ಮಾಡಿದ ಇನ್ಫೋಸಿಸ್ ಕಂಪನಿ ಸಹ-ಸಂಸ್ಥಾಪಕ ಕೆ.ದಿನೇಶ್ 

 

View this post on Instagram

 

A post shared by Mumbai Police (@mumbaipolice)

ಪೋಸ್ಟ್ ಜೊತೆಗೆ, ರಾಂಗ್ ಸೈಡ್ ಅಥವಾ ಹೆಲ್ಮೆಟ್ ಇಲ್ಲದೆ ಚಾಲನೆ ಅಪಾಯಕಾರಿ ಎಂದು ಹೇಳುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹೆಲ್ಮೆಟ್ ಕಂಪನಿಗಳು ಬಳಸುವ ಬಣ್ಣಗಳಾದ ಕೆಂಪು, ಕಿತ್ತಳೆ, ನೀಲಿ ಮತ್ತು ಹಸಿರು ಹೆಲ್ಮೆಟ್ ಫೋಟೋ ಹಾಕಿಕೊಂಡು ಸಂದೇಶ ಕೊಟ್ಟಿದ್ದಾರೆ.

ಮುಂಬೈ ಪೊಲೀಸರ ಇನ್‍ಸ್ಟಾಗ್ರಾಮ್ ಪೋಸ್ಟ್‌ ಪ್ರಕಾರ ಏಪ್ರಿಲ್ 5 ಮತ್ತು 18 ರ ನಡುವೆ ಡೆಲಿವರಿ ರೈಡರ್‌ಗಳಿಗೆ ದಂಡವನ್ನು ಹಾಕಲಾಗಿದೆ. ಇವರ ಮಾಹಿತಿ ಪ್ರಕಾರ, ಒಟ್ಟು 1,124 ಸವಾರರು ಸರಿಯಾದ ಸಮಯಕ್ಕೆ ಆಹಾರವನ್ನು ತಲುಪಿಸಲು ತಪ್ಪಾದ ರಸ್ತೆಯಲ್ಲಿ ವಾಹನವನ್ನು ಓಡಿಸುತ್ತಿದ್ದರು. ಮತ್ತೆ ಕೆಲವರು 242 ಜನರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಬರೆದು ಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ನೆಟ್ಟಿಗರು, ಅನೇಕರು ಪ್ರಯಾಣದ ಸಮಯವನ್ನು ಉಳಿಸಲು ಮತ್ತು ಡೆಲಿವರಿಗೆ ಕೊಟ್ಟಿರುವ ಸಮಯವನ್ನು ಪೂರೈಸಲು ತಪ್ಪು ರಸ್ತೆಗಳಲ್ಲಿ ವಾಹನವನ್ನು ಓಡಿಸುತ್ತಾರೆ. ಇದರಿಂದಾಗಿ ಗ್ರಾಹಕರು ಸಹ ಈ ಕುರಿತು ದೂರು ನೀಡುವುದಿಲ್ಲ. ಇದನ್ನು ತಡೆಯಬೇಕಾದ್ರೆ ಆಯಾಯ ಕಂಪನಿಗಳಿಗೆ ಟ್ರಾಫಿಕ್ ಪೆನಾಲ್ಟಿ ವಿಧಿಸಬೇಕು. ಇದರಿಂದ ಡೆಲಿವರಿ ಬಾಯ್‍ಗಳ ಮೇಲೆ ವಿಧಿಸಿರುವ ಒತ್ತಡಗಳು ಕಡಿಮೆಯಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಆಪ್ತರೆನ್ನಲಾದ ಕಾಂಗ್ರೆಸ್ ನಾಯಕರನ್ನ ಬಂಧಿಸಲಾಗಿದೆ: ಆರಗ 

Share This Article
Leave a Comment

Leave a Reply

Your email address will not be published. Required fields are marked *