ಮುಂಬೈ: ಮಹಾರಾಷ್ಟ್ರದ (Maharashtra) ಅಹಲ್ಯಾನಗರ ಜಿಲ್ಲೆಯ ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಕಂಟೇನರ್ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ (Ashok Kharat) ಆಪ್ತ ಸಹಾಯಕ ಮತ್ತು ಆತನ ಪತ್ನಿ ಸಾವನ್ನಪ್ಪಿದ್ದಾರೆ.

ಮೃತರನ್ನು ಜಿತೇಂದ್ರ ಶೆಲ್ಕೆ (55) ಮತ್ತು ಪತ್ನಿ ಅನುರಾಧ (50) ಎಂದು ಗುರುತಿಸಲಾಗಿದೆ. ಅವರ ಮಗನಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಾಯುಪಡೆ ವಿಮಾನ ಹಾರ್ಡ್ ಲ್ಯಾಂಡಿಂಗ್; ತಾತ್ಕಾಲಿಕವಾಗಿ ಬಂದ್ ಆಗಿದ್ದ ಪುಣೆ ಏರ್ಪೋರ್ಟ್ ಪುನಾರಂಭ

ಶೆಲ್ಕೆ ಅವರು ನಾಸಿಕ್ ಮೂಲದ ಸ್ವಯಂಘೋಷಿತ ದೇವಮಾನವ ಖರತ್ ಆಪ್ತನಾಗಿದ್ದ. ಅತ್ಯಾಚಾರ ಮತ್ತು ವಂಚನೆ ಆರೋಪಗಳಲ್ಲಿ ಅಶೋಕ್ ಖರತ್ ಬಂಧಿಸಲಾಗಿದೆ. ಖರತ್ ವ್ಯವಹಾರಗಳಿಗೆ ಶೆಲ್ಕೆ ಪಾಲುದಾರನಾಗಿದ್ದ.


ಮುಂಬೈನಿಂದ ಸುಮಾರು 250 ಕಿ.ಮೀ ದೂರದಲ್ಲಿರುವ ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯ ಕೋಪರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಧೋತ್ರೆ ಗ್ರಾಮದ ಬಳಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ 10,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗೆ 1 ಗಂಟೆ
ಶೆಲ್ಕೆ, ಪತ್ನಿ ಮತ್ತು ಮಗ ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್ಪ್ರೆಸ್ವೇ ಮೂಲಕ ಛತ್ರಪತಿ ಸಂಭಾಜಿನಗರದಿಂದ ಥಾಣೆಗೆ ಕಾರಿನಲ್ಲಿ ಬರುತ್ತಿದ್ದರು. ಕಾರು ಧೋತ್ರೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಂಟೇನರ್ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಶೆಲ್ಕೆ ಮತ್ತು ಪತ್ನಿ ಸಾವನ್ನಪ್ಪಿದ್ದಾರೆ. ದಂಪತಿ ಪುತ್ರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಪರ್ಗಾಂವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.

