ಪಂಚಭೂತಗಳಲ್ಲಿ ಲೀನವಾದ ಚಿನಕುರಳಿ ಸಮನ್ವಿ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Public TV
2 Min Read

ಬೆಂಗಳೂರು: ಖಾಸಗಿ ಚಾನೆಲ್ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸಮನ್ವಿ ಅಂತ್ಯಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.

ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಸಮನ್ವಿ ಮೃತದೇಹವನ್ನು ಲಿಬರ್ಟಿ ಅಪಾರ್ಟ್‌ ಮೆಂಟ್ ಗೆ ತರಲಾಗಿತ್ತು. ಆದರೆ ಲಿಬರ್ಟ್ ಅಪಾರ್ಟ್‌ ಮೆಂಟ್ ನಲ್ಲಿ 20 ಮಂದಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಅಪಾರ್ಟ್ ಮೆಂಟ್ ಪ್ರವೇಶ ದ್ವಾರದ ಬಳಿಯೇ ಸಮನ್ವಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್

ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಿನಿಮಾ ಹಾಗೂ ಧಾರವಾಹಿ ಕಲಾವಿದರು ಅಂತಿಮ ದರ್ಶನ ಪಡೆದು ಕಣ್ಣೀರಾಕಿದ್ದಾರೆ. ಇತ್ತ ಸಮನ್ವಿ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್

ತಂದೆ ರೂಪೇಶ್ ಮಗಳ ಅಂತ್ಯಕ್ರಿಯೆ ನೆರವೇರಿಸಿದರು. ಇನ್ನು ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿದ ಬಳಿಕ ಮಾತನಾಡಿದ ಕಾಳಿಸ್ವಾಮಿ, ಮಗು ಸಮನ್ವಿಗೆ ಬಲಿಜ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೇವೆ. ಮಗು ಆಗಿರೋದ್ರಿಂದ ಪೂರ್ಣ ಪ್ರಮಾಣದಲ್ಲಿ ಆ ಥರ ಮಾಡೋಕೆ ಆಗ್ಲಿಲ್ಲ. ಅಪಘಾತದ ನಿಧನ ಆಗಿರೋದ್ರಿಂದ ಕೆಲವು ಶಾಸ್ತ್ರ ಮಾಡಿದೆವು. ಮೂರನೇ ದಿನಕ್ಕೆ ಶ್ರೀರಂಗಪಟ್ಟಣದಲ್ಲಿ ನಾರಾಯಣ ಬಲಿಹೋಮ ಮಾಡುತ್ತೇವೆ. ತಾಯಿ ಗರ್ಭಿಣಿ ಹೀಗಾಗಿ ಶಾಂತಿ ಮಾಡಬೇಕು. ಅಮೃತಾ ತಾಯಿ ಶೋಭಾ ನಾಯ್ಡು ಸಾಕು ಮಗ ನಾನು. ಇಡೀ ಕುಟುಂಬ ಹರಿಕಥೆಯಲ್ಲಿ ದೊಡ್ಡ ಹೆಸರು. ಅಮೃತಾ ನನಗೆ ಸಹೋದರಿ ಸಮಾನ ಎಂದರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್‌ ಆಗುತ್ತಿದ್ದಳು: ಸೃಜನ್‌ ಲೋಕೇಶ್‌ ಭಾವುಕ

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದ ಪುಟಾಣಿ ಸಮನ್ವಿ ಇನ್ನಿಲ್ಲ. 6 ವರ್ಷದ ಪುಟ್ಟ ಬಾಲಕಿ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ, ಕಿರುತರೆ ನಟಿ ಅಮೃತಾ ನಾಯ್ಡು ಮತ್ತು ಮಗಳು ಅಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್‍ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

Share This Article
Leave a Comment

Leave a Reply

Your email address will not be published. Required fields are marked *