ಈದ್ಗಾ ಮೈದಾನ ವಿವಾದ – ದಾಖಲೆ ನೀಡಲು 2 ತಿಂಗಳು ಬೇಕೆಂದ ಮುಸ್ಲಿಂ ಮುಖಂಡರು

Public TV
2 Min Read

ಬೆಂಗಳೂರು: ಈದ್ಗಾ ವಿವಾದ ಸಂಬಂಧ ದಾಖಲೆ ಒದಗಿಸಲು ನೀಡಿದ ನೋಟಿಸ್‍ಗಳಿಗೆ ವಕ್ಫ್ ಬೋರ್ಡ್‌ನಿಂದ ಉತ್ತರ ದೊರಕಿಲ್ಲ. ಈಗ ಮತ್ತೊಮ್ಮೆ ಬಿಬಿಎಂಪಿ ದಾಖಲೆ ಕೊಡಲು ಅವಕಾಶ ನೀಡಿದೆ.

ಪಶ್ಚಿಮ ವಿಭಾಗ ಜಂಟಿ ಆಯುಕ್ತ ಶ್ರೀನಿವಾಸ್, ವಕ್ಫ್ ಬೋರ್ಡ್ ಪರ ಮಾತನಾಡಲು ಹಾಜರಿದ್ದವರಿಗೆ ಆಗಸ್ಟ್ 3 ರಂದು ಕಡೆ ದಿನ. ಡೆಡ್‍ಲೈನ್ ಒಳಗೆ ದಾಖಲೆ ಒದಗಿಸುವಂತೆ ಸೂಚಿಸಿದ್ದಾರೆ. ಆದರೆ, ಮುಸ್ಲಿಂ ಮುಖಂಡರ ಪ್ರಕಾರ ದಾಖಲೆ ಕೊಡಲು ಕಾಲಾವಕಾಶ ಸಾಕಾಗಲ್ಲ. ಕನಿಷ್ಠ 2 ತಿಂಗಳು ಮತ್ತೊಮ್ಮೆ ಅವಕಾಶ ನೀಡಬೇಕಿತು ಎಂದು ವಾದ ಮುಂದಿಟ್ಟಿದ್ದಾರೆ. ವಾದ – ಪ್ರತಿವಾದಗಳ ನಂತರ ಆಗಸ್ಟ್ 3ಕ್ಕೆ ಆದರೂ ಈದ್ಗಾ ಆಸ್ತಿ ಯಾರದೆಂದು ಇತ್ಯರ್ಥ ಆಗುತ್ತಾ ಕಾದುನೋಡಬೇಕಿದೆ.  ಇದನ್ನೂ ಓದಿ: ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ ಅಲ್ಲಾಹುಗಾಗಿ ಎಲ್ಲದಕ್ಕೂ ಸಿದ್ಧ – ಪಾಕ್‍ಗೆ ತೆರಳಲು ಸಿದ್ಧರಾಗಿದ್ರು ಶಂಕಿತ ಉಗ್ರರು

ಕೆಲವು ದಿನಗಳ ಹಿಂದೆಯಷ್ಟೇ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಸಮುದಾಯದ ಜನರು ಬಕ್ರೀದ್ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದರಿಂದಾಗಿ ಈದ್ಗಾ ಮೈದಾನ ಇತ್ತೀಚಿಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇಲ್ಲಿ ಆಟ ಆಡಲು, ಪ್ರಾರ್ಥನೆ ಸಲ್ಲಿಸಲು ನಮಗೂ ಅವಕಾಶ ನೀಡಿ ಅಂತ ಹಿಂದೂ ಪರ ಸಂಘಟನೆಗಳು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಮೈದಾನವನ್ನು ಆಟದ ಮೈದಾನ ಅಂತ ಘೋಷಿಸಿತ್ತು. ಇದನ್ನೂ ಓದಿ: ಗಿಲ್, ಚಹಲ್ ಆಟಕ್ಕೆ ದಕ್ಕಿದ ಜಯ – ವೆಸ್ಟ್ ಇಂಡೀಸ್‍ನಲ್ಲಿ ಚೊಚ್ಚಲ ಬಾರಿಗೆ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

ಹಲವು ದಶಕಗಳಿಂದ ಈದ್ಗಾ ಜಮೀನಿನ ವಿವಾದವಿದೆ. ಹಿಂದೆ ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದಿಂದ 10 ಎಕರೆಗೂ ಹೆಚ್ಚು ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕಾಗಿ ಹಾಗೂ ಈದ್ಗಾಗಾಗಿ ನೀಡಲಾಗಿತ್ತು. ಈದ್ಗಾ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿ ಈದ್ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕರ್ನಾಟಕ ವಕ್ಫ್ ಬೋರ್ಡ್ 1965 ರಲ್ಲಿ ಈದ್ಗಾ ಮೈದಾನವನ್ನು ತನ್ನ ವಶದಲ್ಲಿರುವಂತೆ ಗೆಜೆಟ್ ಮಾಡಿತು. ಇದನ್ನು ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ನಡೆಸುತ್ತದೆ.

ದಶಕಗಳ ನಂತರ, ಸುದೀರ್ಘ ಕಾನೂನು ಹೋರಾಟ ನಡೆಯಿತು ಮತ್ತು 1964ರಲ್ಲಿ, ಸುಪ್ರೀಂ ಕೋರ್ಟ್ ಈ ಭೂಮಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್(ಸಿಎಂಎ)ಗೆ ಸೇರಿದೆ ಎಂದು ಇತ್ಯರ್ಥಪಡಿಸಿತು. ನಂತರ ಈದ್ಗಾ ಮೈದಾನಕ್ಕೆ ಬದಲಿ ಜಾಗ ವ್ಯವಸ್ಥೆ ಮಾಡಲಾಯಿತು. ಬದಲಿ ಜಾಗವನ್ನು ಗೋರಿಪಾಳ್ಯದ ಬಡ ಈದ್ಗಾದಲ್ಲಿ ಕೊಟ್ಟಿದ್ದರು. ಮುಸ್ಲಿಂ ಸಮುದಾಯದವರು ಈದ್ಗಾ ಮೈದಾನವನ್ನು ಉಪಯೋಗಿಸುತ್ತಾರೆ ಎಂಬುದು ಈಗಿನ ಆರೋಪವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *