ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್‌ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್‌ & ಕ್ಯಾರಿ ಶಾಪಿಂಗ್‌

Public TV
2 Min Read

ಮುಂಬೈ: ಜರ್ಮನಿ ಮೂಲದ ಮೆಟ್ರೋ ಎಜೆ ಸಮೂಹದ ಕ್ಯಾಶ್ & ಕ್ಯಾರಿ(METRO Cash & Carry) ಸಂಸ್ಥೆಯ ಭಾರತದ ವಹಿವಾಟನ್ನು 2,850 ಕೋಟಿ ರೂ.ಗೆ ಮುಖೇಶ್ ಅಂಬಾನಿ(Mukesh Ambani) ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಖರೀದಿಸಿದೆ.

ಖರೀದಿ ಒಪ್ಪಂದದ ಕುರಿತಾಗಿ ಉಭಯ ಸಂಸ್ಥೆಗಳ ನಡುವೆ ಕಳೆದ ಕೆಲವು ತಿಂಗಳಿಂದ ಮಾತುಕತೆ ನಡೆಯುತ್ತಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ರಿಲಯನ್ಸ್‌ ರಿಟೇಲ್ಸ್‌ ವೆಂಚರ್ಸ್‌ ಲಿಮಿಟಿಡ್‌(RRVL) ಮೂಲಕ ಖರೀದಿ ಪ್ರಕ್ರಿಯೆ ನಡೆದಿದ್ದು ಮಾರ್ಚ್‌ 2023ರ ಒಳಗಡೆ ಪೂರ್ಣಗೊಳ್ಳಲಿದೆ.

ಮೆಟ್ರೋ ಕ್ಯಾಶ್ & ಕ್ಯಾರಿ ಖರೀದಿಯಿಂದ ರಿಲಯನ್ಸ್ ರಿಟೇಲ್ ಕಂಪನಿಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನೆರವಾಗಲಿದೆ. 2021-22 ಹಣಕಾಸು ವರ್ಷದಲ್ಲಿ ಮೆಟ್ರೋ ಇಂಡಿಯಾ ಉತ್ಪನ್ನಗಳ ಮಾರಾಟದಿಂದ 7,700 ಕೋಟಿ ರೂ. ವ್ಯವಹಾರ ನಡೆಸಿತ್ತು.

ಮೆಟ್ರೋ ಒಟ್ಟು 34 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದು, 2003ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಕಿರಣಿ ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ. ಇದನ್ನೂ ಓದಿ: ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಕೋಲ್ಕತ್ತಾ, ಜೈಪುರ, ಜಲಂದರ್‌, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಕ್ನೋ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ.

ಐಟಿಸಿ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಪತಂಜಲಿ ಮತ್ತು ಅದಾನಿ ವಿಲ್ಮಾರ್‌ಗೆ ಪ್ರತಿಸ್ಪರ್ಧಿಯಾಗಿ ರಿಲಯನ್ಸ್‌ ಡಿ.15 ರಂದು ‘ಇಂಡಿಪೆಂಡೆನ್ಸ್’ ಬ್ರಾಂಡ್ ಅನ್ನು ಬಿಡುಗಡೆ ಮಾಡುವುದರ ಮೂಲಕ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಸರಕು(FMCG) ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಎಫ್‌ಎಂಸಿಜಿ ಮಾರುಕಟ್ಟೆ ಪ್ರವೇಶ ಹಿನ್ನೆಲೆಯಲ್ಲಿ ಈ ಹಿಂದೆಯೇ ರಿಲಯನ್ಸ್‌ ಗಾರ್ಡನ್‌ ನಾಮ್‌ಕೀನ್ಸ್‌, ಲಾಹೋರಿ ಜೀರಾ ಮತ್ತಿತರ ಬ್ರ್ಯಾಂಡ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಕರ್ನಾಟಕದ ಪುತ್ತೂರು ಮೂಲದ ಬಿಂದೂ ಬೆವರೇಜಸ್‌ ಖರೀದಿಸಲು ಪ್ರಯತ್ನಿಸಿತ್ತು.

ಭಾರತೀಯ ಚಿಲ್ಲರೆ ವ್ಯಾಪಾರವು 60 ಲಕ್ಷ ಕೋಟಿ ರೂ. ಮಾರುಕಟ್ಟೆಯಾಗಿದ್ದು, ಅದರಲ್ಲಿ ಆಹಾರ ಮತ್ತು ದಿನಸಿ 60 ಪ್ರತಿಶತವನ್ನು ಹೊಂದಿದೆ. ಸಂಘಟಿತ ಚಿಲ್ಲರೆ ವ್ಯಾಪಾರವು ಸಂಪೂರ್ಣ ಚಿಲ್ಲರೆ ವಿಭಾಗದಲ್ಲಿ 12 ಪ್ರತಿಶತ ಎಂದು ನಿರೀಕ್ಷಿಸಲಾಗಿದೆ. ಸಂಘಟಿತ ಆಹಾರ ಮತ್ತು ದಿನಸಿ ವ್ಯಾಪಾರದಲ್ಲಿ ರಿಲಯನ್ಸ್ ಈಗಾಗಲೇ ಶೇ.20 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಈ ಆಗಸ್ಟ್‌ನಲ್ಲಿ ನೇಮಕ ಮಾಡಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *