ಪುರುಷರು ಮೊದಲಿಗಿಂತಲೂ ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ: ಆರೋಗ್ಯ ಸಮೀಕ್ಷಾ ವರದಿ

Public TV
1 Min Read

ನವದೆಹಲಿ: ಪುರುಷರು ಈ ಹಿಂದಿದೆಂದಿಗಿಂತಲೂ ಹೆಚ್ಚು ಹೆಚ್ಚು ಮಾಂಸಾಹಾರ ಸೇವಿಸುತ್ತಿದ್ದಾರೆ. 2015ರ ಬಳಿಕದ ಈ 6 ವರ್ಷಗಳಲ್ಲಿ ಭಾರತೀಯ ಪುರುಷರು ಮಾಂಸಾಹಾರ ಸೇವಿಸುವ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಹೆಚ್‌ಎಸ್) ವರದಿ ತಿಳಿಸಿದೆ.

2019-21ರಲ್ಲಿ ಎನ್‌ಎಫ್‌ಹೆಚ್‌ಎಸ್ ನಡೆಸಿದ ಸಮೀಕ್ಷೆಯ ವರದಿ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರ ಡೇಟಾದಲ್ಲಿ 15 ರಿಂದ 49 ವರ್ಷ ವಯಸ್ಸಿನ, ಈ ಹಿಂದೆ ಎಂದಿಗೂ ಮಂಸಾಹಾರಿ ಆಹಾರವನ್ನು ಸೇವಿಸದ ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರ ವರದಿ ಶೇ.16.6 ರಷ್ಟು ಇದ್ದು, 2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವರದಿ ಶೇ.21.6 ರಷ್ಟು ಬಂದಿತ್ತು. ಇದರರ್ಥ ಸಸ್ಯಾಹಾರಿ ಪುರುಷರು ಮಾಂಸಾಹಾರ ಸೇವಿಸುವ ಪ್ರಮಾಣ ಶೇ.5 ರಷ್ಟು ಹೆಚ್ಚಾಗಿದೆ. ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ಘೋಷಿಸಿದ ಸ್ಪೇನ್

ಮಹಿಳೆಯರ ಸಮೀಕ್ಷೆಯ ವರದಿಯಲ್ಲಿ, 14 ರಿಂದ 49 ವರ್ಷ ವಯಸ್ಸಿನ ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2019-21ರ ವರದಿಯಲ್ಲಿ ಶೇ.29.4 ರಷ್ಟು ಮಹಿಳೆಯರ ಪ್ರಮಾಣ ವರದಿಯಾಗಿದ್ದು, 2015-16ರಲ್ಲಿ ಶೇ.29.9 ಇತ್ತು. ಮಹಿಳೆಯರ ಮಾಂಸಾಹಾರ ಸೇವನೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟದ ಏರಿಕೆಯಾಗಿದೆ.

ಸಮೀಕ್ಷೆಯ ಪ್ರಕಾರ ಶೇ.83.4 ರಷ್ಟು ಪರುಷರು ಹಾಗೂ ಶೇ.70.6 ರಷ್ಟು ಮಹಿಳೆಯರು ಮಾಂಸಾಹಾರವನ್ನು ಪ್ರತೀದಿನ, ವಾರಕ್ಕೆ ಒಮ್ಮೆ ಅಥವಾ ಸಾಂದರ್ಭಿಕವಾಗಿ ತಿನ್ನುತ್ತಾರೆ ಎಂದು ಅಂಕಿ ಅಂಶದಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ಆರಂಭ ಬೀದಿಯಲ್ಲಿ ಮಾರಾಮಾರಿ – ರಸ್ತೆಯಲ್ಲೇ ವಿದ್ಯಾರ್ಥಿನಿಯರ ಗ್ಯಾಂಗ್‍ವಾರ್

ವಾರಕ್ಕೊಮ್ಮೆ ಮಾಂಸಾಹಾರ:
ಶೇ.57.5 ರಷ್ಟು ಪುರುಷರು ಹಾಗೂ ಶೇ.45.1 ರಷ್ಟು ಮಹಿಳೆಯರು ವಾರದಲ್ಲಿ ಒಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *