ನಿಮ್ಮ ಸಾಮರ್ಥ್ಯ, ಅಸಾಧಾರಣ ಕೌಶಲ್ಯವನ್ನ ಜಗತ್ತಿಗೆ ತೋರಿಸಿದ್ದೀರಿ – ಪ್ರಜ್ಞಾನಂದಗೆ ಮೋದಿ ಅಭಿನಂದನೆ

By
2 Min Read

ನವದೆಹಲಿ: ಅಜರ್​​ಬೈಜಾನ್​​ನ ಬಾಕುವಿನಲ್ಲಿ ನಡೆದ ಚೆಸ್​​ ವಿಶ್ವಕಪ್-2023 ಫೈನಲ್​​ (Chess World Cup Final 2023)​ನ ಟೈ ಬ್ರೇಕರ್​​ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ವಿರೋಚಿತ ಸೋಲನುಭವಿಸಿದ ಚೆಸ್‌ ಯುವ ಗ್ರ್ಯಾಂಡ್​ ಮಾಸ್ಟರ್​ ಭಾರತದ ಆರ್​.ಪ್ರಜ್ಞಾನಂದ (Praggnanandhaa) ಅವರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಶ್ಲಾಘಿಸಿದ್ದಾರೆ. ಜೊತೆಗೆ ಪ್ರಜ್ಞಾನಂದನ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ ಎಂದೂ ಶುಭ ಹಾರೈಸಿದ್ದಾರೆ.

ಚೆಸ್ ವಿಶ್ವಕಪ್​ನ ಫೈನಲ್ ಟೈ ಬ್ರೇಕರ್‌ನ 2ನೇ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಮ್ಯಾಗ್ನಸ್ ಕಾರ್ಲ್‌ಸೆನ್ ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ. ಭಾರತೀಯ ಚೆಸ್‌ ಪಟು ಪ್ರಜ್ಞಾನಂದಗೆ ಸೋಲಾಗಿದ್ದು, ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ಪ್ರಜ್ಞಾನಂದಗೆ ಸೋಲು – 6ನೇ ಬಾರಿಗೆ ವಿಶ್ವಚಾಂಪಿಯನ್‌ ಆದ ಮ್ಯಾಗ್ನಸ್‌ ಕಾರ್ಲ್‌ಸನ್‌

ಪ್ರಜ್ಞಾನಂದ ಅವರ ಸಾಧನೆಯನ್ನ ಕೊಂಡಾಡಿರುವ ಭಾರತದ ಪ್ರಧಾನಿ, ಎಕ್ಸ್​​​ (ಟ್ವೀಟರ್​) ಮೂಲಕ ಹೆಮ್ಮ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಅಸಾಧಾರಣ ಪ್ರತಿಭಾ ಕೌಶಲ್ಯವನ್ನ ಗುಣಗಾನ ಮಾಡಿದ್ದಾರೆ. ಫೈನಲ್​ನಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ ಎದುರು ಪ್ರಜ್ಞಾನಂದ ಸೋಲನುಭವಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮೋದಿ ಯುವ ಚೆಸ್ ಪಟುವನ್ನು ಹುರಿದುಂಬಿಸಿದ್ದಾರೆ. ಇದನ್ನೂ ಓದಿ: ಏಷ್ಯಾಕಪ್ ಗೆಲ್ಲುವ ಉತ್ಸಾಹ – ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲಿ ಫಿಟ್‍ನೆಸ್ ಟ್ರೈನಿಂಗ್

ಎಫ್‌ಐಡಿಇ (ಫಿಡೆ) ಚೆಸ್‌ ವಿಶ್ವಕಪ್​ನಲ್ಲಿ ನೀಡಿದ ಗಮನಾರ್ಹ ಪ್ರದರ್ಶನಕ್ಕೆ ಪ್ರಜ್ಞಾನಂದ ಅವರ ಬಗ್ಗೆ ನಮಗೆ ಹೆಮ್ಮೆ ಇದೆ. ಪ್ರಜ್ಞಾನಂದ ಅವರು ತಮ್ಮ ಅಸಾಧಾರಣ ಕೌಶಲ್ಯಗಳನ್ನ ಜಗತ್ತಿಗೆ ತೋರಿಸಿದ್ದಾರೆ. ಅಲ್ಲದೆ ಫೈನಲ್​​ನಲ್ಲಿ ನಿಮ್ಮ ಅಸಾಧಾರಣ ಸಾಮರ್ಥ್ಯದ ಮೂಲಕ ವಿಶ್ವದ ನಂ.1 ಆಟಗಾರನಿಗೆ ಕಠಿಣ ಹೋರಾಟ ನೀಡಿದ್ದೀರಿ. ಇದು ಸಣ್ಣ ಸಾಧನೆಯಲ್ಲ. ನಿಮ್ಮ ಮುಂದಿನ ಎಲ್ಲಾ ಪಂದ್ಯಗಳಿಗೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್‌ ಮೂಲಕ ಶುಭಕೋರಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article