ಜೂ.8ರವರೆಗೆ ರಾಜ್ಯದಲ್ಲಿ ಸಾಧಾರಣ ಮಳೆ

Public TV
1 Min Read

– ಉತ್ತರ ಒಳನಾಡಿನಲ್ಲಿ ಒಣಹವೆ

ಬೆಂಗಳೂರು: ರಾಜ್ಯಾದ್ಯಂತ ಅಬ್ಬರಿಸಿದ್ದ ಮಳೆ (Rain) ಇದೀಗ ಕೊಂಚ ಬಿಡುವು ಪಡೆದಿದ್ದು, ಜೂನ್ 8ರವರೆಗೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಳೆದ ಎರಡು ವಾರದಿಂದ ಕರ್ನಾಟಕದಾದ್ಯಂತ (Karnataka) ಭಾರೀ ಮಳೆಯಾದ ಪರಿಣಾಮ ನಾನಾ ಅವಾಂತರ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಜೂ.8ರವರೆಗೂ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೊಹ್ಲಿ ಮಾಲೀಕತ್ವದ ಬೆಂಗ್ಳೂರು ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್

ಕ್ಯಾಸಲ್‌ರಾಕ್, ಬಂಟ್ವಾಳ, ಗೇರುಸೊಪ್ಪ, ಕೋಟಾ, ಆಗುಂಬೆ, ಮಂಕಿ, ಕದ್ರಾ, ಮಾಣಿ, ಕುಮಟಾ, ಸಿದ್ದಾಪುರ, ಉಡುಪಿ, ಕಾರವಾರ, ಕಾರ್ಕಳ, ಮೂಡುಬಿದಿರೆ, ಪಣಂಬೂರು, ಕುಂದಾಪುರ, ಮುಲ್ಕಿ, ಪುತ್ತೂರು, ಉಪ್ಪಿನಂಗಡಿ, ಹೊನ್ನಾವರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಇದನ್ನೂ ಓದಿ: Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

Share This Article