ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

Public TV
1 Min Read

ನವದೆಹಲಿ: ಅರುಣಾಚಲ ಪ್ರದೇಶದ ಮಿರಮ್ ತಾರೋನ್‍ನಿಂದ ಕಾಣೆಯಾಗಿದ್ದ ಯುವಕನನ್ನು ಚೀನಾ ಭಾರತ ಸೇನೆಗೆ ಹಸ್ತಾಂತರಿಸಿದೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ದೃಢಪಡಿಸಿದ್ದಾರೆ.

ಘಟನೆ ಕುರಿತು ಚೀನಾದೊಂದಿಗೆ ಪ್ರಕರಣವನ್ನು ಇತ್ಯರ್ಥ ಪಡಿಸಲು ಹಾಗೂ ಯುವಕನನ್ನು ಸುರಕ್ಷಿತವಾಗಿ ಮನೆಗೆ ಮರಳುವಂತೆ ಮಾಡಿದ ಭಾರತೀಯ ಸೇನೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಕಿರಣ್ ರಿಜಿಜು ಟ್ವೀಟ್‍ನಲ್ಲಿ ತಿಳಿಸಿದರು.

ಘಟನೆಯೇನು?: ಜನವರಿ 18ರಂದು ಅರುಣಾಚಲ ಪ್ರದೇಶದಲ್ಲಿ ತ್ಸಾಂಗ್ಪೋ ನದಿಯು ಭಾರತವನ್ನು ಪ್ರವೇಶಿಸುವ ಸಮೀಪದಲ್ಲಿ ಜೀಡೋ ಗ್ರಾಮದ ಮಿರಾಮ್ ಟ್ಯಾರೋನ್ (17) ಹಾಗೂ ಆತನ ಸ್ನೇಹಿತ ಜಾನಿ ಯಾಯಿಂಗ್ ಬೇಟೆಗಾಗಿ ತೆರಳಿದ್ದರು. ಅಲ್ಲಿ ಮಿರಾಮ್ ಅವರನ್ನು ಚೀನಾ ಅಧಿಕಾರಿಗಳು ಅಪಹರಿಸಿದ್ದರು. ಅವನ ಜೊತೆಯಿದ್ದ ಸ್ನೇಹಿತ ಜಾನಿ ಯಾಯಿಂಗ್ ಚೀನಾ ಅಧಿಕಾರಿಗಳಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ವಿರಾಮನ್ ಟ್ಯೂರೋನ್‍ನ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನು. ಇದನ್ನೂ ಓದಿ: ನಾಪತ್ತೆಯಾಗಿದ್ದ ಯುವಕನನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಚೀನಾ

ಜನವರಿ 20ರಂದು, ಕಾಣೆಯಾದ ಅರುಣಾಚಲ ಯುವಕನ ಗುರುತನ್ನು ಪತ್ತೆ ಹಚ್ಚಲು ಚೀನಾದ ಕಡೆಯವರು ಭಾರತದ ಕಡೆಯಿಂದ ವಿವರಗಳನ್ನು ಕೇಳಿದ್ದರು. ನಂತರ, ಭಾರತೀಯ ಸೇನೆಯು ಮಿರಾಮ್ ಟ್ಯಾರೋನ್ ಅವರ ಗುರುತನ್ನು ಖಚಿತಪಡಿಸಲು ಅವರ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿತು. ಇದನ್ನೂ ಓದಿ: ಚೀನಾದಿಂದ ಅರುಣಾಚಲ ಪ್ರದೇಶದ ಹುಡುಗನ ಅಪಹರಣ – ಪ್ರಧಾನಿ ವಿರುದ್ಧ ರಾಗಾ ಕಿಡಿ

ಮಂಗಳವಾರ, ಹವಾಮಾನ ವೈಪರಿತ್ಯದಿಂದಾಗಿ ಬಿಡುಗಡೆ ವಿಳಂಬವಾಗಿದೆ. ಟ್ಯಾರನ್ ಅವರನ್ನು ಭಾರತಕ್ಕೆ ವಾಪಸ್ಸು ಕಳುಹಿಸಲಾಗುವುದು ಎಂದು ದೃಢಪಡಿಸಿತು. ಈ ಹಿನ್ನೆಲೆಯಲ್ಲಿ ಇಂದು ಯುವಕನನ್ನು ಭಾರತಕ್ಕೆ ಹಿಂದಿರುಗಿಸಿದ್ದಾರೆ. ಇದನ್ನೂ ಓದಿ: ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

Share This Article
Leave a Comment

Leave a Reply

Your email address will not be published. Required fields are marked *