ಐತಿಹಾಸಿಕ ಮಲ್ಲೇಶ್ವರ ಗುಡ್ಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು

1 Min Read

ಹಾವೇರಿ: ಐತಿಹಾಸಿಕ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಧಗದಗನೇ ಹೊತ್ತಿ ಉರಿದಿದೆ.

- Advertisement -

ಹಾವೇರಿ (Haveri) ಜಿಲ್ಲೆಯ ರಾಣೆಬೇನ್ನೂರು (Ranebennur) ತಾಲೂಕಿನ ಆರೇಮಲ್ಲಾಪುರ, ಐರಣಿ ಗ್ರಾಮಗಳ ಬಳಿಯಿರುವ ಮಲ್ಲೇಶ್ವರ ಅರಣ್ಯ ಪ್ರದೇಶಕ್ಕೆ ಬೆಂಕಿಯಿಟ್ಟಿದ್ದಾರೆ. ನಾಲ್ಕು ಗಂಟೆಗಳಿಂದ ಅರಣ್ಯ ಪ್ರದೇಶ ಬೆಂಕಿಯಿಂದ ಹೊತ್ತಿಉರಿದಿದ್ದು, ಪರಿಣಾಮ ಹಾನಿಗೀಡಾಗಿದೆ. ಇದನ್ನೂ ಓದಿ: ಭಾರತ – ಇರಾನ್‌ನದ್ದು 75 ವರ್ಷಗಳ ಸ್ನೇಹ – ಇವರು ಎಲ್ಲಾ ಹಾಳು ಮಾಡಿಟ್ಟಿದ್ದಾರೆ: ಕೇಂದ್ರದ ವಿರುದ್ಧ ಶಾಸಕ ಪೊನ್ನಣ್ಣ ಆಕ್ರೋಶ

- Advertisement -

- Advertisement -

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಸರ್ಕಾರ ಇತ್ತೀಚಿಗೆ ಈ ಸ್ಥಳವನ್ನ ಆಯ್ಕೆ ಮಾಡಿತ್ತು ಈಗ ಅದೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ. ಸಂಪದ್ಭರಿತ ವನಸ್ಪತಿ ಗಿಡಮೂಲಿಕೆಗಳು ಈ ಗುಡ್ಡದಲ್ಲಿತ್ತು. ಕೃಷ್ಣಮೃಗ ಅಭಯಾರಣ್ಯ, ಪ್ರಾಣಿ ಪಕ್ಷಿಗಳು ಇರೋ ಅಭಯಾರಣ್ಯದಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

Share This Article