ಗುಜರಾತ್‍ನಲ್ಲಿ ಮಿರ‍್ಯಾಕಲ್ | ಮನೆ ಮುಂದೆ ಆಟ ಆಡ್ತಿದ್ದ ಮಗುವಿಗೆ ಕಾರು ಡಿಕ್ಕಿ – ಗ್ರೇಟ್ ಎಸ್ಕೇಪ್; ವಿಡಿಯೋ ವೈರಲ್‌

Public TV
1 Min Read

ಗಾಂಧಿನಗರ: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮಗುವಿಗೆ ಫಾರ್ಚೂನರ್‌ ಕಾರು (Toyota Fortuner Car) ಡಿಕ್ಕಿಯಾದ ಘಟನೆ ಗುಜರಾತ್‌ನ (Gujarat) ನವಸಾರಿ ಜಿಲ್ಲೆಯ ಗಾಂದೇವಿ ತಾಲೂಕಿನಲ್ಲಿ ನಡೆದಿದೆ.

ಕಾರು ಡಿಕ್ಕಿಯಾಗುತ್ತಿದ್ದಂತೆ ಮನೆಯಲ್ಲಿದ್ದ ಮಹಿಳೆ ಜೋರಾಗಿ ಕಿರುಚಿ ಕಾರಿನ ಚಾಲಕನ ಕಡೆ ಕೈ ಮಾಡಿದ್ದು, ತಕ್ಷಣ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಅದೃಷ್ಟವಶಾತ್‌ ಮಗುವಿಗೆ ಯಾವ ಗಾಯಗಳಾಗಿಲ್ಲ. ಮಗುವಿಗೆ ಕಾರು ಡಿಕ್ಕಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ತಾನೇ ಸಾಕಿದ್ದ ಶ್ವಾನಕ್ಕೆ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆಗೈದ ಮಹಿಳೆ

ಕಾರಿನ ಅಡಿ ಅಳುತ್ತಿದ್ದ ಮಗುವನ್ನು ಮೇಲೆತ್ತಿ ನೋಡಿದಾಗ ಮಗು ಗಾಯಗಳಾಗದೇ ಸುರಕ್ಷಿತವಾಗಿರುವುದು ಕಂಡು ಬಂದಿದೆ. ಸರಿಯಾದ ಸಮಯಕ್ಕೆ ಮಹಿಳೆ ಬರದಿದ್ದರೆ ಮಗುವಿಗೆ ಹಾನಿಯಾಗುವ ಸಾಧ್ಯತೆ ಇತ್ತು. ಆದರೆ ಮಹಿಳೆ ಬಂದು ಚಾಲಕನಿಗೆ ಕಾರು ನಿಲ್ಲಿಸುವಂತೆ ಸೂಚಿಸಿದ್ದರಿಂದ ಭಾರೀ ಅವಘಡ ತಪ್ಪಿದಂತಾಗಿದೆ.

ಮಹಾರಾಷ್ಟ್ರದಲ್ಲೂ ನಡೆದಿತ್ತು ಇದೇ ರೀತಿ ಘಟನೆ
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು. ವಸಾಯಿಯಲ್ಲಿ ಆರು ವರ್ಷದ ಬಾಲಕನ ಮೇಲೆ ಕಾರು ಹರಿದಿತ್ತು. ಈ ಅಪಘಾತದಲ್ಲಿ ಬಾಲಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದವು. ಇದನ್ನೂ ಓದಿ: ಮದ್ವೆ ಆದ್ಮೇಲೆ ಗಂಡನ ಜೊತೆ ಹೇಗಿರಬೇಕು ಅಂತ ಹೇಳ್ಕೊಡ್ತೀನಿ – ತಾಯಿಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ!

Share This Article