ಕನಿಷ್ಠ ತಾಪಮಾನ 12°ಗೆ ಇಳಿಕೆ – ʻದಿತ್ವಾʼ ಎಫೆಕ್ಟ್‌ಗೆ ಮಂಜಿನ ನಗರಿಯಾದ ಬೀದರ್!

1 Min Read

– ಕೊರೆಯುವ ಚಳಿಗೆ ವಾಕಿಂಗ್‌ ಬರೋದಕ್ಕೂ ಜನ ಹಿಂದೇಟು

ಬೀದರ್: ʻದಿತ್ವಾʼ ಚಂಡಮಾರುತದ (Cyclone Ditwah) ಎಫೆಕ್ಟ್‌ಗೆ ಇಂದು ಗಡಿ ಜಿಲ್ಲೆ ಬೀದರ್ (Bidar) ಮಂಜಿನ ನಗರಿಯಾಗಿ ಬದಲಾಗುವ ಜೊತೆ ಕೊರೆಯುವ ಚಳಿಗೆ ಜನ್ರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.

10 ರಿಂದ 12 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದ್ದು ಈ ರಣ ಚಂಡಿ ಚಳಿಗೆ ವಾಕಿಂಗ್ ಸೇರಿದಂತೆ ಇನ್ನಿತರ ಕೆಲಸಗಳಿಗೆ ಮನೆಯಿಂದ ಹೊರಗೆ ಬರಲು ಜನ್ರ ಕನಸಿನಲ್ಲೂ ಭಯ ಭೀಳುತ್ತಿದ್ದಾರೆ. ದಿತ್ವಾ ಸೈಕ್ಲೋನ್ ಅಪ್ಪಳಿಸಿದ ಪರಿಣಾಮ ಬೀದರ್, ಮಡಿಕೇರಿ ರೀತಿ ಮಂಜಿನ ನಗರಿಯಾಗಿ ಬದಲಾಗಿದ್ದು ಇಡೀ ಜಿಲ್ಲೆಯಲ್ಲಿ ದಟ್ಟವಾದ ಮಂಜು ಆವರಿಸಿದೆ. ಇದನ್ನೂ ಓದಿ: `ದಿತ್ವಾʼ ಅಬ್ಬರಕ್ಕೆ ಕನಿಷ್ಠ ಉಷ್ಣಾಂಶ ದಾಖಲು – ಇನ್ನೂ ಮೂರು ದಿನ ಇರಲಿದೆ ಮೈ ಕೊರೆವ ಚಳಿ

ಸದಾ ಜನರಿಂದ ತುಂಬಿರುತ್ತಿದ್ದ ಪ್ರಮುಖ ವಾಕಿಂಗ್ ಟ್ರ್ಯಾಕ್‌ಗಳು ಖಾಲಿ ಖಾಲಿಯಾಗಿ ಭೀಕೋ ಎನ್ನುತ್ತಿವೆ. ಬೆರಳೆಣಿಕೆಯಷ್ಟು ಜನ ಮಾತ್ರ ಸ್ವೆಟರ್, ಕೈಗೆ ಗೌಸ್ ಹಾಗೂ ಮಂಕಿ ಟೋಪಿಗಳನ್ನ ಹಾಕಿಕೊಂಡು ಇಡೀ ದೇಹವನ್ನ ಕವರ್ ಮಾಡಿಕೊಂಡು ಜನ್ರು ಹೊರಗೆ ಬರುತ್ತಿದ್ದಾರೆ. ದಿನಾ ಬಹಳಷ್ಟು ಜನ ಇಲ್ಲಿಗೆ ವಾಕಿಂಗ್ ಬರುತ್ತಿದ್ರು. ಆದ್ರೆ ಈ ಸೈಕ್ಲೋನ್‌ನಿಂದಾಗಿ ಚಳಿ ಜಾಸ್ತಿಯಾಗಿದೆ. ಹೀಗಾಗಿ ಜನ್ರು ಬರುತ್ತಿಲ್ಲ ನಮ್ಮಗೂ ಈ ಕೊರೆಯುವ ಚಳಿಗೆ ಮನೆಯಿಂದ ಹೊರಗಡೆ ಬರಲು ಭಯವಾಗುತ್ತಿದೆ ಎಂದ್ರು ಜನ್ರು. ಇದನ್ನೂ ಓದಿ: ದಾಳಿಗೆ ಹೆದರಿ 72 ಟೆರರ್‌ ಲಾಂಚ್‌ಪ್ಯಾಡ್‌ ಸ್ಥಳಾಂತರಿಸಿದ ಪಾಕ್ – ಆಪರೇಷನ್ ಸಿಂಧೂರ್ 2.0ಗೂ ಸಿದ್ಧ ಎಂದ ಬಿಎಸ್‌ಎಫ್‌

Share This Article