ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ – MBBS ವಿದ್ಯಾರ್ಥಿನಿ ಸಾವು

1 Min Read

ಬೆಂಗಳೂರು: ಕಾಲೇಜು ಮುಗಿಸಿ ಗೇಟ್‌ನಿಂದ ಹೊರಬರುತ್ತಿದ್ದಂತೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಎಂಬಿಬಿಎಸ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ (Rajarajeswari Medical College) ಮುಂಭಾಗದಲ್ಲಿ ನಡೆದಿದೆ.

ಮೃತಳನ್ನು ಕೃತಿಕಾ (21) ಎಂದು ಗುರುತಿಸಲಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಹಂಸ (21) ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಎಂಬಿಬಿಎಸ್ ಓದುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಫಸಲ್‌ ಭೀಮಾ ಯೋಜನೆ ಬೆಳೆ ವಿಮೆಯಲ್ಲಿ 30 ಕೋಟಿಗೂ ಅಧಿಕ ಹಣ ಲೂಟಿ – 11 ಜನರ ವಿರುದ್ಧ FIR

ಇಬ್ಬರು ಆಕ್ಟೀವಾದಲ್ಲಿ ಕಾಲೇಜು ಮುಗಿಸಿ ಗೇಟ್ ಹೊರಗೆ ಬಂದಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೃತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಂಸ ಗಾಯಗೊಂಡಿದ್ದಾರೆ. ಸದ್ಯ ಆರ್‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: US-Iran War| 3 ಷರತ್ತನ್ನು ಒಪ್ಪಿಕೊಳ್ಳಿ, ಯದ್ಧ ಕೊನೆಗೊಳಿಸುತ್ತೇವೆ: ಇರಾನ್‌

Share This Article