ಬಳ್ಳಾರಿಯ KIADB ಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – 4 ವರ್ಷಗಳಲ್ಲಿ 17.17 ಕೋಟಿ ಲೂಟಿ

1 Min Read

– ಪ್ರಕರಣ ಸಿಐಡಿಗೆ ಕೊಡಲು ಬಳ್ಳಾರಿ ಪೊಲೀಸರ ತೀರ್ಮಾನ

ಬಳ್ಳಾರಿ: ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (KIADB) 16.17 ಕೋಟಿ ಹಣ ಲೂಟಿ ನಡೆದಿದ್ದು, ಈ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಬಟಾಬಯಲಾಗಿದೆ.

ಬಳ್ಳಾರಿ ವಲಯ ಕೆಐಎಡಿಬಿ ಕಚೇರಿಯಲ್ಲಿ 16.17 ಕೋಟಿ ಹಣ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಕೆಐಡಿಬಿ ಕಚೇರಿಯ ಗುತ್ತಿಗೆ ನೌಕರ (Contractor) ಹಾಗೂ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿ ಒಟ್ಟು 7 ಜನರಿಂದ ಕೃತ್ಯ ನಡೆದಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದ 7 ಜನರ ವಿರುದ್ಧ ಬಳ್ಳಾರಿ ಎಪಿಎಂಸಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಇಂದಿನಿಂದ ಟೋಯಿಂಗ್ ಆರಂಭ – 5 ಜಿಬಿಎ ವ್ಯಾಪ್ತಿಗೆ ತಲಾ ಎರಡೆರಡು ವಾಹನಗಳ ವ್ಯವಸ್ಥೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುತ್ತಿಗೆ ನೌಕರ ಸಂತೋಷ್ ಕುಮಾರ್ ಎನ್ನುವನಿಂದ ಚೆಕ್‌ಗಳಿಗೆ ಅಧಿಕಾರಿಗಳ ನಕಲಿ ಸಹಿ‌ ಮಾಡುವ ಮೂಲಕ, ಕೆಐಡಿಬಿ ಖಾತೆಯಿಂದ ಇತರೆ ಅಕೌಂಟ್‌ಗಳಿಗೆ ಹಲವು ಬಾರಿ ಹಣ ವರ್ಗಾವಣೆಯಾಗಿದೆ‌. 2022 ರಿಂದ 2026 ರ ಅವಧಿಯಲ್ಲಿ ಹಣ ಲೂಟಿ ಮಾಡಿದ್ದಾರೆ. 4 ವರ್ಷದಿಂದ ಇದೇ ರೀತಿ ಹಣ ಕೆಐಡಿಬಿ ಖಾತೆಯಿಂದ ಇತರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಇನ್ಮುಂದೆ ಚಿನ್ನಸ್ವಾಮಿಯಲ್ಲಿ ನಡೆಯುವ ಎಲ್ಲಾ ಪಂದ್ಯಗಳಲ್ಲಿಯೂ ಮೃತರ ನೆನಪಿಗೆ 11 ಸೀಟ್ ಮೀಸಲು

ಇಷ್ಟೆಲ್ಲಾ ನಡಿತಿದ್ರೂ ಮೇಲಾಧಿಕಾರಿಗಳಿಗೆ ತಿಳಿದಿಲ್ಲವಂತೆ. 2026 ಮಾರ್ಚ್ 3 ರಂದು ಕೃತ್ಯ ಬಯಲಿಗೆ ಅಂತಾ ಕೆಐಡಿಬಿ ಅಧಿಕಾರಿಗಳಿಂದ ದೂರು ನೀಡಲಾಗಿದೆ‌. ದೂರಿನ ಬಳಿಕ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಕುಮಾರ್ ಪಾರಾರಿಯಾಗಿದ್ದಾನೆ‌. ಇನ್ನೂ ಬಹುಕೋಟಿ ವಂಚನೆ ಪ್ರಕಾರಣ ಆಗಿರೋದ್ರಿಂದ ಇಡೀ ಪ್ರಕರಣವನ್ನ ಸಿಐಡಿಗೆ ಒಪ್ಪಿಸಲು ಬಳ್ಳಾರಿ ಪೊಲೀಸರು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕದಿಂದ ಮತ್ತೆ 10 ಕೋಟಿ ಅನುದಾನ – ಬಿಜೆಪಿ, ಜೆಡಿಎಸ್‌ ಆಕ್ರೋಶ

Share This Article