ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು

Public TV
1 Min Read

ಮಂಗಳೂರು: ಗೋಪಾಲಕೃಷ್ಣ ಪಣಿಕ್ಕರ್ ನೇತೃತ್ವದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಂಗಳೂರಿನ ಮಳಲಿಯಲ್ಲಿರುವ ದರ್ಗಾದ ಜಾಗದಲ್ಲಿ ಹಿಂದೆ ಪೂಜೆ ನಡೆಯುತ್ತಿತ್ತು ಎಂಬ ಸುಳಿವು ಸಿಕ್ಕಿದೆ.

ಕಾಶಿಯ ಜ್ಞಾನವಾಪಿ ಮಸೀದಿಯ ವಿವಾದದ ನಡುವೆ ಇದೀಗ ಮಂಗಳೂರಿನ ಮಳಲಿ ಮದನಿ ದರ್ಗಾದ ವಿವಾದದ ಕಾವು ಹೆಚ್ಚಿದೆ. ಇಲ್ಲಿ ಹಿಂದೂ ದೇವಾಲಯ ಇತ್ತು ಅನ್ನೋ ಕುರುಹುಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ನಡೆದಿದೆ.

ಈ ತಾಂಬೂಲ ಪ್ರಶ್ನೆಯಲ್ಲಿ ವೀರಶೈವ, ಲಿಂಗಾಯತರ ವಿವಾದಿತ ಭೂಮಿಯು ಶೈವ ಸಂಕಲ್ಪ ಆರಾಧನ ಸ್ಥಳವಾಗಿತ್ತು. ಅಲ್ಲೊಂದು ಮಠ ಇತ್ತು. ಜೊತೆಗೆ ಶಿವ ದೇಗುಲವಿತ್ತು. ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು. ದೈವ ಸಾನಿಧ್ಯ ಇದ್ದ ಭೂಮಿ ಎಂಬುದಕ್ಕೆ ಸಂಶಯ ಇಲ್ಲ ಎಂಬ ಸುಳಿವು ಸಿಕ್ಕಿದೆ.

ಈಗ ದರ್ಗಾ ಇರುವ ಜಾಗವು ಜಪ-ತಪ ಧ್ಯಾನ ಮಾಡುತ್ತಿದ್ದ ಜಾಗವಾಗಿತ್ತು. ಆದರೆ ಯಾರದ್ದೋ ಮರಣ ನಂತರ ಹಿಂದಿನವರು ಆ ಜಮೀನು ಬಿಟ್ಟು ಹೋಗಿರಬಹುದು. ಅಲ್ಲಿ ಉತ್ಖನನ ಮಾಡಿದರೆ ಹಲವಾರು ಅವಶೇಷಗಳು ಸಿಗಲಿದೆ. ಆದರೆ ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ. ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು. ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು. ಪಂಚಭೂತಗಳ ಸಾನಿಧ್ಯದಲ್ಲೇ ಆ ಸ್ಥಳ ಇರುವುದು ಖಚಿತ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನ ಪೊಲೀಸ್ ಠಾಣೆಗೆ ದೇಶದಲ್ಲೇ 5ನೇ ಸ್ಥಾನ

ಧಾರ್ಮಿಕ ಪರಿಷತ್ತಿನ ಸದಸ್ಯರು, ವಿಶ್ವ ಹಿಂದೂ ಪರಿಷತ್ ಮುಖಂಡರು, ಮಳಲಿ ಗ್ರಾಮಸ್ಥರು, ಅಳಿಯ ಉಳೇಪಾಡಿಗುತ್ತು ಮನೆತನದ ಹಿರಿಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ? – ಇಂದು ನಡೆಯಲಿದೆ ತಾಂಬೂಲ ಪ್ರಶ್ನೆ

Share This Article
Leave a Comment

Leave a Reply

Your email address will not be published. Required fields are marked *