ಪತ್ನಿ, ಅತ್ತೆ ಮೇಲೆ ಗುಂಡು ಹಾರಿಸಿ ಸಂತ್ರಸ್ತನಂತೆ ನಾಟಕವಾಡಿದ

Public TV
1 Min Read

ಮುಂಬೈ: ಹಣದ ವಿಚಾರವಾಗಿ ನಡೆದ ಜಗಳದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿ ಹಾಗೂ ಅತ್ತೆಯ ಮೇಲೆ ಗುಂಡು ಹಾರಿಸಿ, ಕೊನೆಗೆ ಅನುಮಾನದಿಂದ ತಪ್ಪಿಸಿಕೊಳ್ಳಲು ತನ್ನ ಕೈಗೆ ಗುಂಡು ಹಾರಿಸಿಕೊಂಡು ನಾಟಕವಾಡಿದ ಘಟನೆ ಮಹಾರಾಷ್ಟ್ರದ ಧಾರವಿಯಲ್ಲಿ ನಡೆದಿದೆ.

ಖಯ್ಯಮ್ಮುದಿನ್ ಸೈಯದ್(32) ಆರೋಪಿ. ಕೆಲ ದಿನಗಳ ಹಿಂದೆ ಈ ಹಣಕ್ಕಾಗಿಯೇ ಪತ್ನಿ ನಜ್ನಿನ್(30) ಜೊತೆ ಜಗಳವಾಡಿದ್ದ. ಆಗ ಆಕೆ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿ ನಜ್ನಿನ್ ಜೊತೆ ಪಿಎಂಜಿಪಿ ಕಾಲೋನಿಯಲ್ಲಿಯರುವ ತನ್ನ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಸೈಯ್ಯದ್ ನಜ್ನಿನ್ ಬಳಿ 40,000 ರೂ.ವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ. ಆದರೂ ಕೊಡಲಿಲ್ಲವೆಂದು ಕೋಪದಿಂದ ಅತ್ತೆಯಮನೆಯಿಂದ ಹೊರನಡೆದಿದ್ದಾನೆ.

crime

ಈ ವೇಳೆ ನಜ್ನಿನ್ ಹಾಗೂ ಆಕೆಯ ತಾಯಿ ಸೈಯ್ಯದ್‍ನನ್ನು ಅವಾಚ್ಯ ಶಬ್ದದಿಂದ ನಿಂದಿಸಿದರು. ಇದನ್ನು ಕೇಳಿದ ಆತ ಅವರಿಬ್ಬರ ಮೇಲೆ ತನ್ನ ಜೇಬಿನಲ್ಲಿದ್ದ ರಿವಾಲ್ವರ್‍ನ್ನು ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ಗುಂಡು ಯಾರಿಗೂ ತಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಅತ್ತೆ ಪೊಲೀಸರಿಗೆ ದೂರು ನೀಡಿದ್ದರು.

ಇದಾದ ಬಳಿಕ ಸಯ್ಯದ್ ಯಾರಿಗೂ ತನ್ನ ಮೇಲೆ ಅನುಮಾನ ಬಾರದಿರಲಿ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವೇಳೆ ತನ್ನ ಸೋದರ ಮಾವ ಪಪ್ಪು, ಅಲಿಯಾಸ್ ಶೋಯೆಬ್ ಶೇಖ್ ತನ್ನ ಮೇಲೆ ಗುಂಡು ಹಾರಿಸಿದ್ದಾನೆ. ಇದರಿಂದಾಗಿ ತನ್ನ ಕೈಗೆ ಗಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ನಾವು ಸಹಕಾರ ನೀಡಿಲ್ಲ ಎಂದ ಭಾರತ

crime

ಧಾರವಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಈ ಬಗ್ಗೆ ಮಾತನಾಡಿ, ಸಯ್ಯದ್ ಎಡಗೈಗೆ ಸ್ವಪ್ರೇರಿತವಾಗಿ ಗುಂಡು ಹಾರಿಸಿಕೊಂಡಿದ್ದು, ಆತನನ್ನು ಒಂದು ದಿನ ಆಸ್ಪತ್ರೆಯ ನಿಗಾ ಇರಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯ- ಓರ್ವನ ಬಂಧನ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *