ಬೆಂಗಳೂರಿನಲ್ಲಿ ಕೆಲವರನ್ನು ದೂರ ಇಡಿ: ಸಿದ್ದುಗೆ ಹಿತೈಷಿಗಳಿಂದ ಸಲಹೆ

Public TV
1 Min Read

ಬೆಂಗಳೂರು: ಮುಜುಗರ ಉಂಟು ಮಾಡುವ ಆಪ್ತರಿಂದ ದೂರ ಇರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಹಿತೈಷಿಗಳು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನೀವು ಕೆಲವರನ್ನು ದೂರ ಇಟ್ಟರೆ ಒಳ್ಳೆಯದು. ನಿಮಗೆ ಮುಜುಗರ ಉಂಟು ಮಾಡಿ ನಿಮ್ಮ ಇಮೇಜ್ ಧಕ್ಕೆ ತರುವ ಹಾಗೆ ಮಾತಾಡುವವರನ್ನು ದೂರ ಇರಿಸಿ ಎಂದು ಮೈಸೂರಿನ ಹೆಗ್ಗಡೆದೇವನಕೋಟೆ ರೆಸಾರ್ಟ್‍ನಲ್ಲಿ ಹಳೆ ಒಡನಾಡಿಗಳು ಸಲಹೆ ನೀಡಿದ್ದಾರೆ.

4 ದಿನ ರೆಸಾರ್ಟ್‍ನಲ್ಲಿ ತಂಗಿದ್ದ ಸಿದ್ದರಾಮಯ್ಯಗೆ ಹಳೆ ಒಡನಾಡಿಗಳು ಕಿವಿಮಾತು ಹೇಳಿದ್ದು ಸಿದ್ದರಾಮಯ್ಯ ಈ ಸಲಹೆಯನ್ನು ಹೇಗೆ ಸ್ವೀಕರಿಸಿಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.  ಇದನ್ನೂ ಓದಿ: 18 ವರ್ಷದಲ್ಲಿಯೇ ಮೊದಲು- ಫೇಸ್‍ಬುಕ್‍ಗೆ ಒಂದೇ ದಿನ 16 ಲಕ್ಷ ಕೋಟಿ ರೂ. ನಷ್ಟ

ಯಾರಿಂದ ದೂರ ಇರಬೇಕು?
ಅಶೋಕ್ ಪಟ್ಟಣ್: ಪದೇ ಪದೇ ಸುತ್ತಮುತ್ತ ಸುಳಿದು ಅನಗತ್ಯ ಮಾತನಾಡಿ ವಿವಾದ ಸೃಷ್ಟಿಯಾಗುತ್ತಿದೆ. ಆಪ್ತ ಎಂಬಂತೆ ತೋರಿಸಿಕೊಳ್ಳಲು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಪಟ್ಟಣ್ ಅವರನ್ನು ದೂರ ಇಟ್ಟಷ್ಟು ಒಳ್ಳೆಯದು. ಅದರಿಂದ ನಷ್ಟವೇನು ಇಲ್ಲ.

ಪ್ರಕಾಶ್ ರಾಥೋಡ್: ಪದೇ ಪದೇ ಸುತ್ತಮುತ್ತ ಸುಳಿದು ಆಪ್ತರಂತೆ ಫೋಸ್ ನೀಡುತ್ತಿದ್ದಾರೆ. ಅಕ್ಕಪಕ್ಕದಲ್ಲಿ ಇದ್ದು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಾಥೋಡ್‌ ಅವರಿಂದ ವೈಯಕ್ತಿಕ ಉಪಯೋಗ ಏನೂ ಇಲ್ಲ. ಸದಾ ಜೊತೆಯಲ್ಲಿ ಇರೋದ್ರಿಂದ ಅನಗತ್ಯ ಮುಜುಗರ ಆಗುತ್ತಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ನ್ನು ವೈದ್ಯಕೀಯ ಸೇವೆಗೆ ದಾನ ಮಾಡಿದ ಪದ್ಮಶ್ರೀ ಪುರಸ್ಕೃತ

ಉಗ್ರಪ್ಪ: ಮಾಜಿ ಸಂಸದ ಉಗ್ರಪ್ಪ ಮಾತನಾಡುವಾಗ ವಿವಾದವಾಗುವ ಸಾಧ್ಯತೆಯಿದೆ. ಸಲೀಂ ಪ್ರಕರಣ ನಂತರ ಉಗ್ರಪ್ಪ ಸ್ವಲ್ಪ ದೂರವಿದ್ದು ದೂರವೇ ಇರಲಿ. ಉಗ್ರಪ್ಪ ಎಲ್ಲಾ ನಾಯಕರ ಜೊತೆಯೂ ಬೆರೆಯುತ್ತಾರೆ. ನಿಮ್ಮ ಆಪ್ತ ವಲಯಕ್ಕೆ ಬೇಡ.

Share This Article
Leave a Comment

Leave a Reply

Your email address will not be published. Required fields are marked *