ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿ ಕತ್ತು ಸೀಳಿ ಕೊಂದು ಪ್ರಿಯಕರ ಆತ್ಮಹತ್ಯೆ

Public TV
1 Min Read

ಬೆಳಗಾವಿ: ಮದುವೆಗೆ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಹಾಪುರದ (Shahpura) ನವಿ ಗಲ್ಲಿಯಲ್ಲಿ ನಡೆದಿದೆ.

ಯಳ್ಳೂರು ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಪ್ರೇಯಸಿ ಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮಠದ ಜಾಗ ತೆರವು – 14 ಮಂದಿ ಮಸೀದಿ ಸದಸ್ಯರ ವಿರುದ್ಧ ಕೇಸ್‌ ದಾಖಲು

ಪೇಂಟಿಂಗ್ ಕೆಲಸ ಮಾಡ್ತಿದ್ದ ಪ್ರಶಾಂತ್ ಒಂದೂವರೆ ವರ್ಷದಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಪ್ರಶಾಂತ್ ಯುವತಿಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದ. ಈ ವೇಳೆ ಯುವತಿಯ ತಾಯಿ, ಚೆನ್ನಾಗಿ ಕೆಲಸ ಮಾಡಿ, ಸಂಬಳ ಜಾಸ್ತಿ ತೆಗೆದುಕೋ ಎಂದು ಬುದ್ಧಿವಾದ ಹೇಳಿದ್ದರು. ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ವಿವಾಹ – ಮದುವೆಯಾದ 3 ದಿನಕ್ಕೆ ಹೃದಯಾಘಾತದಿಂದ ನವವಿವಾಹಿತ ಸಾವು

ಪ್ರಶಾಂತ್ ತನ್ನ ಪ್ರೇಯಸಿಯನ್ನು ಆಕೆಯ ಚಿಕ್ಕಮ್ಮನ ಮನೆಗೆ ಕರೆಸಿಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಗೆ ವಿಷ ಕುಡಿಸಲು ಯತ್ನಿಸಿದ್ದ. ಬಳಿಕ ಚಾಕುವಿನಿಂದ ಆಕೆಯ ಕತ್ತು ಸೀಳಿ, ಅದೇ ಚಾಕುವಿನಿಂದ ಆತನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಕುಡಿಯುವ ನೀರು ಅನ್ಯ ಕೆಲಸಗಳಿಗೆ ಬಳಕೆ; 417 ಜನರಿಗೆ 20.85 ಲಕ್ಷ ರೂ. ದಂಡ

ಸ್ಥಳಕ್ಕೆ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯನಾಯಕರಿಂದ ಮಾಹಿತಿ ಪಡೆದರು. ಇದನ್ನೂ ಓದಿ: ನೆಲಮಂಗಲ ಪೊಲೀಸರಿಂದ ತಪ್ಪಿಸಿಕೊಂಡು ಮಣಿಪಾಲ್‌ ಪೊಲೀಸರಿಗೆ ಸಿಕ್ಕಿಬಿದ್ದ ಕ್ರಿಮಿನಲ್‌!

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಬಳಿಕ ಮನೆಯವರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಮಾನಕ್ಕಿಂತ ಎರಡು ಪಟ್ಟು ವೇಗ – ಏನಿದು ಹೈಪರ್‌ಲೂಪ್?

Share This Article