ಬೆಂಗಳೂರಲ್ಲಿ ರಸ್ತೆ ಕಾಮಗಾರಿಗೆ ಪುಟ್ಟ ಕಂದಮ್ಮ ಬಲಿ

1 Min Read

ಬೆಂಗಳೂರು: ರಾಜ್ಯದಲ್ಲಿ ರಸ್ತೆ ದುರಸ್ತಿ (Road Works) ವಿಳಂಬ, ಅವೈಜ್ಞಾನಿಕ ಹಂಪ್, ಗುಂಡಿಯಿಂದಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

- Advertisement -

ಬೆಂಗಳೂರಿನ (Bengaluru) ಮಹದೇವಪುರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ವಿಳಂಬದಿಂದ ಎರಡು ವರ್ಷದ ಕಂದಮ್ಮ ಬಲಿಯಾಗಿದೆ. ಹಿಂದಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಮಗು ತ್ರಿಶೂಲ್ ತಲೆ ಮೇಲೆ ಕಾರು ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ಬಹಿಸಬೇಕು. ಅರ್ಧಂಬರ್ಧ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಕೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ – ಹೆಚ್ಚಿದ ಆತಂಕ, ಪೊಲೀಸರಿಂದ ತೀವ್ರ ಶೋಧ

- Advertisement -

- Advertisement -

ಇನ್ನು ಆಡುಗೋಡಿಯ ಬಾಷ್ ಕಂಪನಿಯ ರಸ್ತೆಯಲ್ಲಿ ಗುಂಡಿಗೆ ಮಹಿಳೆ ಬಲಿಯಾಗಿದ್ದಾರೆ. 49 ವರ್ಷದ ಅಮಲ ಮೃತ ಮಹಿಳೆ. ಗುಂಡಿಯಿಂದಾಗಿ ಆಯಾ ತಪ್ಪಿ ಕೆಳಗೆ ಬಿದ್ದ ಅಮಲಾ ಮೇಲೆ ಹಿಂದಿನಿಂದ ಬಂದ ಟಿಪ್ಪರ್ ಹರಿದು ಅವಘಡ ಸಂಭವಿಸಿದೆ. ಇದನ್ನೂ ಓದಿ: ದರ್ಶನ್‌ ಬರ್ತ್‌ಡೇ ಸೆಲೆಬ್ರೇಶನ್‌ಗೆ ಮುಗಿಬಿದ್ದ ಫ್ಯಾನ್ಸ್ – ಹೈಡ್ರಾಮಾ ಮಾಡಿದವನಿಗೆ ಪೊಲೀಸರಿಂದ ಕಪಾಳಮೋಕ್ಷ!

- Advertisement -

ಅತ್ತ ಶಿವಮೊಗ್ಗದಲ್ಲಿ ಪಾಲಿಕೆ ನಿರ್ಮಿಸಿದ್ದ ಅವೈಜ್ಞಾನಿಕ ಹಂಪ್ ನಿಂದ ಯುವಕ ಸಾವನ್ನಪ್ಪಿದ್ದಾನೆ. ಹಂಪ್ ಕಾಣದೇ ಬೈಕ್ ನಲ್ಲಿ ಬಿದ್ದಿರುವ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಲ್ಬಿಎಸ್ ನಗರದ ಫ್ಲೈ ಓವರ್‌ನಲ್ಲಿ ಎರಡು ದಿನಗಳ ಹಿಂದೆ ಅವಘಡ ಸಂಭಿಸಿದ್ದು, ಹಂಪ್ ಕಾಣದೆ ಬೈಕ್‌ನಲ್ಲಿ ಬಿದ್ದಿದ್ದ 35 ವರ್ಷದ ಉಲ್ಲಾ ಎಂಬ ಯುವಕ ಚಿಕಿತ್ಸೆ ಫಲಿಸದೇ, ಇಂದು ಸಾವನ್ನಪ್ಪಿದ್ದಾನೆ.

Share This Article