ನ್ಯಾಯಾಲಯಕ್ಕೆ ತಲೆಬಾಗುತ್ತೇನೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ: ಬೈರತಿ ಬಸವರಾಜ್

Public TV
1 Min Read

ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಭೂಕಬಳಿಕೆಯ ವಿಚಾರ ಜೋರು ಸದ್ದು ಮಾಡುತ್ತಿದೆ. ಸಚಿವರ ರಾಜೀನಾಮೆಗೂ ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದಾರೆ. ಆದರೆ ಬೈರತಿ ಬಸವರಾಜ್ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.

ಭೂಹಗರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನ ರಾಮಮೂರ್ತಿನಗರ ವಾರ್ಡ್‍ನ ಎನ್‍ಆರ್‌ಐ ಬಡಾವಣೆಯಲ್ಲಿ 35 ಎಕರೆ ಖಾಸಗಿ ಭೂಮಿಯಾಗಿದೆ. ತಮ್ಮ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು, ನಾನು ಯಾವುದೇ ತಪ್ಪುಮಾಡಿಲ್ಲ ರಾಜೀನಾಮೆ ಪ್ರಶ್ನೆಯೇ ಇಲ್ಲ. 2013 ರಲ್ಲೇ ಎಕರೆಗೆ 18 ಲಕ್ಷ ನೀಡಿ ಖರೀದಿ ಮಾಡಿದ್ದೇನೆ. ಈ ವಿಚಾರ ಜಮೀನಿನ ಮಾಲೀಕರ ಸಮ್ಮುಖ ಮತ್ತು ಕಲ್ಲೆರೆ ನಿವಾಸಿಗಳ ಸಮ್ಮುಖದಲ್ಲೇ ನಡೆಯಲಿ ಸತ್ಯಾಂಶ ತಿಳಿಯಲಿದೆ. ನಾನು ನ್ಯಾಯಾಲಯಕ್ಕೆ ತಲೆ ಬಾಗುತ್ತೇನೆ ಯಾರಿಗೂ ಮೋಸ ಮಾಡಿಲ್ಲ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಭೂ ಹಗರಣ – ಸಚಿವ ಬೈರತಿ ಬಸವರಾಜು ರಾಜೀನಾಮೆಗೆ ಸಿದ್ದರಾಮಯ್ಯ ಬಿಗಿಪಟ್ಟು

ಬೈರತಿ ಬಸವರಾಜ್ ಜಮೀನನ್ನು ಖರೀದಿಸಿರುವುದು ದಿ.ಆದೂರು ಅಣ್ಣಯ್ಯಪ್ಪರವರ ಅವಿಭಕ್ತ ಕುಟುಂಬದಿಂದಾಗಿದೆ. ಐದು ಜನ ಸಹೋದರರು ಒಟ್ಟಾರೆಯಾಗಿ ಸೇರಿಕೊಂಡು ಬೈರತಿಯವರಿಗೆ ಜಿಪಿಎ ಮಾಡಿಕೊಟ್ಟಿದ್ದು ಆ ಮೂಲಕ ಜಮೀನು ಮಾರಾಟ ಮಾಡಿದ್ದಾರೆ. ಇದನ್ನು ಅಣ್ಣಯ್ಯಪ್ಪರವರ ಕುಟುಂಬ ಸುದ್ದಿಗೋಷ್ಠಿ ನಡೆಸಿ ನಮಗೆ ಬೈರತಿ ಬಸವರಾಜ್ ಯಾವುದೇ ಮೋಸ ಮಾಡಿಲ್ಲ. ಸುಮ್ಮನೆ ಆರೋಪ ಮಾಡಲಾಗುತ್ತಿದೆ. ನಾವೆಲ್ಲ ಸಹೋದರರು 2003 ರಲ್ಲಿ ವಿಭಾಗೀಯ ಪತ್ರ ಮಾಡಿಕೊಂಡೆವು, 2013ರಲ್ಲಿ ಜಮೀನು ಮಾರಾಟ ಮಾಡಿದ್ದೇವೆ. ನಮ್ಮ ಕುಟುಂಬದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎ.ಮಾದಪ್ಪ ಮಾತ್ರವೇ ತಕರಾರು ಮಾಡಿದ್ದು ಇದಕ್ಕೂ ನಮಗೂ ಸಂಬಂಧವಿಲ್ಲ, ಬೈರತಿ ಬಸವರಾಜ್ ಅನ್ಯಾಯ ಮಾಡಿಲ್ಲ ನಾವು ಎಲ್ಲಿ ಬೇಕಾದರು ಇದನ್ನು ಹೇಳುತ್ತೇವೆ ಎಂದು ಕಲ್ಕೆರೆ ಗ್ರಾಮದ ಮಾದಪ್ಪ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸ್ಪೀಕರ್‌ ಆಗಿದ್ದವರ ಅಸಭ್ಯ ಹೇಳಿಕೆ ವಿಕೃತಿಯ ಪರಮಾವಧಿ: ಹೆಚ್‌ಡಿಕೆ ವಾಗ್ದಾಳಿ

Share This Article
Leave a Comment

Leave a Reply

Your email address will not be published. Required fields are marked *